ಚಿಕ್ಕ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವಾಗಲು ಪ್ರತಿದಿನ ನಿಯಮಾನುಸಾರವಾಗಿ ಕೆಲವು ಪ್ರಾಥಮಿಕ ವಿಚಾರಗಳನ್ನು ಆಚರಣೆಗೆ ತರುವ ಅವಶ್ಯಕತೆಯಿದೆ. ಎದ್ದ ನಂತರ ಪ್ರಾತಃ ವಿಧಿ, ಸ್ನಾನ ಮಾಡಿಕೊಂಡು ದೇವರಿಗೆ, ತಂದೆ ತಾಯಿಗೆ ಹಾಗು ದೊಡ್ಡವರಿಗೆ ನಮಸ್ಕಾರ ಮಾಡಬೇಕು. ಪ್ರತಿದಿನ ಸೂರ್ಯನಮಸ್ಕಾರ ಮಾಡಬೇಕು ಅಥವಾ ವ್ಯಾಯಾಮ ಮಾಡಬೇಕು.
ದೇವರ ಚಿತ್ರವನ್ನು ಒರೆಸಿಟ್ಟು, ಊದುಬತ್ತಿಯನ್ನು ಹಚ್ಚುವುದು, ಇಲ್ಲವಾದರೆ ಪೂಜೆ ಮಾಡುವುದು, ಸ್ತೋತ್ರ ಪಠಣ, ಶ್ಲೋಕ, ಆರತಿ, ನಾಮಸ್ಮರಣೆ, ಧ್ಯಾನ, ಸಂಧ್ಯಾ ಪೂಜೆ ಇತ್ಯಾದಿಗಳಲ್ಲಿ ಯವುದನ್ನಾದರೂ ವಯಸ್ಸಿಗನುಸಾರ ನಿಯಮಿತವಾಗಿ ಮಾಡಬೇಕು.ಹಾಲು, ನೀರು ಕುಡಿದ ನಂತರ ತಮ್ಮ ಲೋಟವನ್ನು ತಾವೇ ಸ್ವಚ್ಛಗೊಳಿಸುವುದು, ಊಟ–ತಿಂಡಿ ಮಾಡಿದ ನಂತರ ಅವರ ತಟ್ಟೆ ಹಾಗು ಬಟ್ಟಲನ್ನು ಅವರೇ ಸ್ವಚ್ಛಗೊಳಿಸುವುದು.
ಯಾವ ಮಕ್ಕಳ ವಯಸ್ಸು ೧೦–೧೨ ವರ್ಷಗಳಿಗಿಂತ ಹೆಚ್ಚಾಗಿರುತ್ತದೋ, ಅವರು ಅವರ ಚಿಕ್ಕ ಚಿಕ್ಕ ಬಟ್ಟೆಗಳನ್ನು ಅವರೇ ಒಗೆದುಕೊಳ್ಳಲು ಪ್ರಾರಂಭಿಸಬೇಕು. ಹೊರಗೆ ಹೋಗಿ ಮನೆಗೆ ಬಂದ ನಂತರ ಪಾದರಕ್ಷೆಯನ್ನು ಹೊರಗಿಟ್ಟು ಕಾಲು ತೊಳೆದುಕೊಂಡ ನಂತರವೇ ಮನೆಯೊಳಗೆ ಪ್ರವೇಶಿಸಬೇಕು. ಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು ಹಾಗು ಚಾಕ್ಲೇಟ್ ತಿಂದ ನಂತರ ಅದರ ಕಾಗದವನ್ನು ಕಸದ ಬುಟ್ಟಿಯಲ್ಲೇ ಬಿಸಾಡಬೇಕು. ಊಟ ಮಾಡುವ ಮೊದಲು ಹಾಗು ಊಟ ಮಾಡಿದ ನಂತರ ಕೈಯನ್ನು ತೊಳೆದುಕೊಳ್ಳಬೇಕು.
ರಾತ್ರಿ ಊಟವಾದ ನಂತರ ಹಲ್ಲನ್ನು ಬ್ರಶ್ಶಿನಿಂದ ಸ್ವಚ್ಛಗೊಳಿಸಬೇಕು. ಅಭ್ಯಾಸ ಮಾಡುವ ಸಾಮಗ್ರಿಗಳನ್ನು, ಆಟದ ಸಾಮಾನು, ಕಥೆ ಪುಸ್ತಕಗಳನ್ನು ಹಾಗು ಬೇರೆ ಸಾಮಾನುಗಳನ್ನು, ನಿರ್ಧರಿಸಿದ ಸ್ಥಳದಲ್ಲೇ ಇಡಬೇಕು. ಗೋಡೆಯ ಮೇಲೆ ಬರೆಯುವುದು, ಹಾಸಿಗೆಯನ್ನು ಕೊಳಕಾದ ಕಾಲಿನಿಂದ ತುಳಿಯುವುದು ಮೊದಲಾದ ಅಶಿಸ್ತಿನ ಆಚಾರಣೆಗಳನ್ನು ಮಾಡಬಾರದು. ಶಾಲೆ, ಓದುವುದು, ಸಾಧನೆ, ವ್ಯಕ್ತಿಗತ ವಸ್ತುಗಳನ್ನು ಜೋಡಿಸಿಕೊಳ್ಳುವುದು, ಆಟವಾಡುವುದು, ಓದುವುದು, ಮನೆಯ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವುದು, ಮನೋರಂಜನೆ ಮೊದಲಾದವುಗಳ ಸಮಯದ ಸರಣಿಯನ್ನು ಮಾಡಿ ನಿಯೋಜಿಸಿಕೊಳ್ಳಬೇಕು.
ಕಸ ಗೂಡಿಸುವುದು, ಸ್ವಚ್ಛತೆ ಮಾಡುವುದು ಇಲ್ಲದಿದ್ದರೆ ಅಡಿಗೆ ಮನೆಯಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವುದು, ಹೊರಗಿನಿಂದ ಯಾವುದಾದರು ವಸ್ತು ತರಬೇಕಿದ್ದರೆ ಅದು ತರುವುದು, ಕೆಲಸದಲ್ಲಿ ತಮ್ಮ ತಾವೇ ಸ್ವಯಂ ಪ್ರೇರಣೆಯಿಂದ ಕೆಲಸಗಳನ್ನು ಮಾಡುವುದು ಇತ್ಯಾದಿ.
ಏನಾದರೂ ತಿನ್ನಬೇಕಾದರೆ ಯಾರಾದರೂ ಬಂದಲ್ಲಿ ಮೊದಲು ಅವರಿಗೆ ನೀಡಿ ನಂತರ ನಾವು ತಿನ್ನಬೇಕು. ನಮ್ಮ ಬಳಿ ಇಲ್ಲದ ವಸ್ತು ಬೇರೆಯವರ ಹತ್ತಿರ ಇದ್ದು ನಮಗೆ ಅದರ ಅವಶ್ಯಕತೆ ಇಲ್ಲದಿದ್ದರೆ ಅದನ್ನು ಕೇಳಬಾರದು. ಯಾವಾಗಲೂ ವಿನಮ್ರವಾಗಿ ಮಾತನಾಡಬೇಕು. ಜೋರಾಗಿ ಮಾತನಾಡುವುದು ಹಾಗೂ ಅನಾವಶ್ಯಕವಾಗಿ ಮಾತನಾಡುವುದನ್ನು ಬಿಡಬೇಕು.