ಸ್ವಾಮಿ ದಯಾನಂದರ ವಿಷಯದಲ್ಲಿ ಒಂದು ಸುಂದರವಾದ ಕಥೆ ಇದೆ. ಸ್ವಾಮಿ ದಯಾನಂದರು ಒಂದು ಸಲ ಋಷಿಕೇಶಕ್ಕೆ ಹೋಗಿದ್ದರು. ಆ ಕಾಲದಲ್ಲಿ ಅನೇಕ ಸಿದ್ಧ ಪುರುಷರು ಋಷಿಕೇಶಕ್ಕೆ ಹೋಗಿ ವಾಸ ಮಾಡುತ್ತಿದ್ದರು. ಹಿಮಾಲಯದ ಪರಿಸರದಲ್ಲಿ ಈಗಲೂ ಅನೇಕ ಸಿದ್ಧ ಪುರುಷರು ವಾಸ ಮಾಡುತ್ತರೆ ಎಂದು ಹೇಳುತ್ತಾರೆ. ಸ್ವಾಮಿ ದಯಾನಂದರು ಹಿಮಾಲಯಕ್ಕೆ ಹೋದರು. ಯಾರಿಗೆ ಸಿದ್ಧಿ ಪ್ರಾಪ್ತಿಯಾಗಿದೆ, ಅಂತಹ ತಪಸ್ವಿಗಳ ದರ್ಶನವಾಯಿತು, ಯಾರ ತಪಶ್ಚರ್ಯ ಸುಫಲಿತವಾಗಿದೆಯೊ, ಅಂತಹ ಯೋಗಿಗಳ ದರ್ಶನವಾಯಿತು. ಆಗ ಅವರಿಗೆ ಗಂಗಾತೀರದಲ್ಲಿ ಒಂದು ಅತ್ಯಂತ ತೆಜಃಪುಂಜ ತಪಸ್ವೀ ಕಾಣಿಸಿದರು. ಅವರ ಜೊತೆಗೆ ಸ್ವಾಮಿ ದಯಾನಂದರ ಸಂವಾದ ನಡೆಯಿತು. ದಯಾನಂದರು ಆಶ್ಚರ್ಯಚಕಿತರಾಗಿ ಹೇಳಿದರು "ನಿಮಗೆ ತಪಶ್ಚರ್ಯದಿಂದ ಏನೇನು ಪ್ರಾಪ್ತಿಯಾಗಿದೆ?" ಆಗ ಈ ಸಿದ್ಧ ಪುರುಷರು ನಗುತ್ತ ಹೇಳಿದರು "ನಾನು ಅಷ್ಟಾಂಗ ಯೋಗದ ಅಭ್ಯಾಸ ಮಾಡಿದ್ದೇನೆ. ಇನ್ನೇನು ಪ್ರಾಪ್ತಿ ಮಾಡಲಿಲ್ಲ ಅಂತ ಕೇಳು. ಏನು ಪ್ರಾಪ್ತಿಯಾಗಿದೆ ಅಂಥ ಯಾಕೆ ಕೇಳುತ್ತೀಯಾ? ನನಗೆ ದಿವ್ಯ (ಅಲೌಕಿಕ)ಸಿಧ್ಧಿ ಪ್ರಾಪ್ತವಾಗಿದೆ."
ಆತ್ಮಜ್ಞಾನ ಆಗಿದಿಯೋ ಇಲ್ಲವೋ ತಿಳಿದಿಲ್ಲಾ! ಸಿಧ್ಧಿಯಂತು ಆ ವ್ಯಕ್ತಿಗೆ ಪ್ರಾಪ್ತವಾಗಿದೆ. ಕೊನೆಗೆ ಅವರು "ನನಗೆ ಸರ್ವ ಸಿಧ್ಧಿಗಳು ಪ್ರಾಪ್ತವಾಗಿವೆ" ಎಂದರು. ಮುಂದೆ ಗಂಗಾನದಿ ಇದೆ. ಈ ನದಿಯ ನೀರಿನ ಮೇಲೆ ನಾನು ನಡೆದುಕೊಂಡು ಹೋಗುತ್ತೇನೆ. ಈ ಸಿಧ್ಧಿಯನ್ನು ನಾನೇ ನನ್ನ ತಪಶ್ಚರ್ಯದಿಂದ ಪ್ರಾಪ್ತ ಮಾಡಿಕೊಂಡಿದ್ದೇನೆ. ಇದನ್ನು ಕೇಳಿ ಸ್ವಾಮಿ ದಯಾನಂದರು ಮಂದಹಾಸ ಬೀರಿದರು. ಅವರು "ನೀವು ನಿಜವಾಗಿಯು ನೀರಿನ ಮೇಲೆ ನಡೆಯಬಹುದಾ?" ಎಂದು ಕೇಳಿದರು. ಆಗ ಅವರು "ಮಗು, ನಿನಗೆ ಶಂಕೆ ಯಾಕೆ? ನಾನು ಬೇಕಿದ್ದರೆ ನೀರಿನ ಮೇಲೆ ನಡೆದು ತೋರಿಸುತ್ತೇನೆ."
ಆಗ ಸ್ವಾಮಿ ದಯಾನಂದರು ಕೇಳಿದರು "ಆ ದಡದಿಂದ ಈ ದಡಕ್ಕೆ ಹಿಂತಿರುಗಿ ಬರುವಿರಾ?" ಆಗ ಆ ಯೋಗಿಯು ಉಚ್ಚ ಸ್ವರದಲ್ಲಿ ನಗುತ್ತ ಹೇಳಿದರು, "ಹೇ ಮೂರ್ಖ, ನೀರಿನ ಮೇಲೆ ಹೇಗೆ ಹೋಗುವೆನೋ ಹಾಗೆಯೇ ಹಿಂತಿರುಗಿ ಬರುವೆನು". ದಯಾನಂದರು ಪ್ರತಿಪ್ರಶ್ನೆ ಮಾಡಿ "ಈ ಸಿಧ್ಧಿ ಪ್ರಾಪ್ತಿ ಮಾಡಿಕೊಳ್ಳಲು ನೀವು ಅಧಿಕ ತಪಶ್ಚರ್ಯ ಮಾಡಿರಬಹುದು". ಆಗ ಅವರು ಹೇಳಿದರು, "ಹೌದು! ೭೦ ವರ್ಷ ಇದರಲ್ಲೇ ವ್ಯಯ ಮಾಡಿದೆ. ಈ ಸಿಧ್ಧಿ ಪ್ರಾಪ್ತಿ ಮಾಡಿಕೊಳ್ಳಲು ನನ್ನ ಜೀವನದ ೭೦ ವರ್ಷ ಕಳೆದೆನು. ಅದಕ್ಕಾಗಿ ನನಗೆ ನನ್ನ ಆಯುಷ್ಯದ ಅರಿವೇ ಇಲ್ಲ. ಅಷ್ಟ ಸಿಧ್ಧಿಪ್ರಾಪ್ತಿ ಮಾಡಿಕೊಳ್ಳುವುದು ಆಟವಲ್ಲ. ಇದು ಬಹಳ ವರ್ಷಗಳ ಸಾಧನೆಯ ನಂತರ ನನಗೆ ಫಲಿಸಿದೆ."
ದಯಾನಂದರು ಕೇಳಿದರು "ನೀವು ನಿಜವಾಗಿ ೭೦ ವರ್ಷ ಖರ್ಚು ಮಾಡಿದ್ದೀರಾ?" ಆಗ ಅವರು "ನಾನು ಒಂದು ಸಿಧ್ಧಿಗಾಗಿ ೭೦ ವರ್ಷ ಕಳೆದಿದ್ದೇನೆ, ಬೇರೆ ಸಿಧ್ಧಿ ಪ್ರಾಪ್ತಿ ಮಾಡಿಕೊಳ್ಳಲು ಎಷ್ಟು ವರ್ಷ ಖರ್ಚಾಗಿದೆ ಎಂದು ಹೇಳಲೇನು?" ಅಂತ ಕೇಳಿದರು. ದಯಾನಂದರು ಬೇಡವೆಂದರು. ಆಗ ಯೋಗಿಯು ಆಶ್ಚರ್ಯದಿಂದ "ಏಕೆ ಬೇಡವೆಂದು ಹೇಳುತ್ತಿರುವಿರಿ. ದಯಾನಂದರು ಹೇಳಿದರು, " ಅರೇ, ಇದು ತುಂಬಾ ಸರಳವಾದದ್ದು . ತಾವು ಇದಕ್ಕಾಗಿಯೆ ೭೦ ವರ್ಷ ಕಳೆದಿದ್ದೀರಿ. ಜೀವನದ ಅಷ್ಟು ಸಮಯವನ್ನು ಹಾಳು ಮಾಡಿದ್ದೀರಿ, ನನಗೆ ದುಃಖವಾಯಿತು. ಯೋಗಿಯು "ದುಃಖ ಏಕೆ?" ಎಂದು ಕೇಳಿದರು. "ಈ ನದಿಯನ್ನು ದಾಟಲು ನೀವು ೭೦ ವರ್ಷ ಖರ್ಚು ಮಾಡಿದಿರಿ, ಆದರೆ ನನಗೆ ಇದರಲ್ಲಿ ಯಾವ ಅಡಚಣೆಯು ಕಂಡುಬರುತ್ತಿಲ್ಲ" ಯೋಗಿಗಳು ಕೇಳಿದರು "ನೀವು ಏನು ಹೇಳುತ್ತಿದ್ದೀರಿ?" ಅದಕ್ಕೆ ದಯಾನಂದರು ಹೇಳಿದರು "ಸರಳವಾಗಿದೆ, ನನಗೆ ಸರಿಯಾಗಿ ಈಜಲು ಬರುತ್ತದೆ. ಒಂದುವೇಳೆ ಪ್ರವಾಹ ಬಂದರೂ ನಾವಿಕನಿಗೆ ಹಣ ನೀಡಿ ಇನ್ನೊಂದು ದಡ ಸೇರುವೆ.
ಪಾತಂಜಲಿ ಯೋಗ , ತಾತ್ಪರ್ಯ : ವ್ಯವಹಾರದಲ್ಲಿನ ಸಾಧಾರಣ ಕಾರ್ಯಗಳಿಗಾಗಿ ತಪಶ್ಚರ್ಯದ ಶಕ್ತಿಯನ್ನು ವ್ಯಯಮಾಡಬಾರದು.