೧೮೫೭ ರ ಸ್ವಾತಂತ್ರ್ಯ ಯುದ್ಧವು ಜನರ ಯುದ್ಧವೂ ಆಗಿತ್ತು. ಹಿಂದೂಸ್ಥಾನದ ಮೇಲಿದ್ದ ಆಂಗ್ಲರ ಆರ್ಥಿಕ, ಸಂಸ್ಕೃತಿಕ, ರಾಜಕೀಯ ಮತ್ತು ಧಾರ್ಮಿಕ ಆಕ್ರಮಣಗಳನ್ನು ಎದುರಿಸಲು ರಾಜರು–ರಾಜವಂಶಸ್ಥರು, ಸಂಸ್ಥಾನಿಕರು, ರೈತರು ಮತ್ತು ಸಾಮಾನ್ಯ ಜನರೂ ಇದರಲ್ಲಿ ಪಾಲ್ಗೊಂಡಿದ್ದರು. ಮಂಗಲ ಪಾಂಡೆ, ನಾನಾ ಸಾಹೇಬ ಪೇಶ್ವೆ, ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ ಮುಂತಾದ ಧುರೀಣರು ಯಾವ ರೀತಿ ಸ್ವಧರ್ಮ ಮತ್ತು ಸ್ವರಾಜ್ಯಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕೆ ಹಚ್ಚಿದ್ದರೋ ಅದೇ ರೀತಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಸೈನಿಕರೂ ಬ್ರಿಟಿಷರೊಂದಿಗೆ ಹೋರಾಟ ನಡೆಸಿದರು. ಆ ಹೋರಾಟದ ಕೆಲವು ಸತ್ಯಕತೆಗಳು ಹೀಗಿವೆ.
ಸಂಕಲನಕಾರರು : ಕು.ದೀಪ್ತಿ ಮುಳ್ಯೆ
ಸನಾತನ ಆಶ್ರಮ, ರತ್ನಾಗಿರಿ
೧೧ ನೆಯ ತುಕುಡಿಯಲ್ಲಿನ ಶೂರ ಸಿಪಾಯಿ !
ಮೇ ೧೦, ೧೮೫೭ ರಲ್ಲಿ ಮೀರತನಲ್ಲಾದ ಹೋರಾಟದ ನಂತರ ಕ್ರಾಂತಿಯ ಸೈನ್ಯವುದಿಲ್ಲಿಗೆ ಬಂದಿತು. ಈ ಹೋರಾಟದಲ್ಲಿ ಕೆಲವು ಆಂಗ್ಲ ಜನರೂ ಸತ್ತಿದ್ದರು. ಅದರ ಪ್ರತಿಕಾರವನ್ನು ತೀರಿಸಲು ಅಂಬಾಲದ ಕಮಾಂಡರ ‘ಬರ್ನಾರ್ಡ್ನ’ನ ಸೈನ್ಯವು ದಿಲ್ಲಿಗೆ ಹೊರಟಿತು. ಈ ಆಂಗ್ಲ ಸೈನ್ಯದೊಂದಿಗೆ ಹೋರಾಡಲು ಕ್ರಾಂತಿ ಸೈನ್ಯವೂದಿಲ್ಲಿಯಿಂದ ಮುಂದೆ ಬಂದಿತು. ಮೇ ೩೦ ರಂದು ‘ಹಿಂದನ’ ನದಿಯ ತೀರದಲ್ಲಿ ಎರಡೂ ಸೈನ್ಯಗಳು ಎದುರಾದವು. ಕ್ರಾಂತಿಯ ಸೈನ್ಯದ ಬಲಬದಿಯು ತೋಪುಗಳಿಂದ ಸುರಕ್ಷಿತವಾಗಿತ್ತು. ಆಗ ಆಂಗ್ಲರಿಗೆ ಬಲಬದಿಯ ಸೈನ್ಯವನ್ನು ಎದುರಿಸಲು ಯಶಸ್ಸುಸಿಗುತ್ತಿರಲಿಲ್ಲ. ಬಲಬದಿಯಲ್ಲಿ ತೋಪುಗಳ ಮತ್ತು ಬಯೋನೆಟಗಳ ಕಾದಾಟವು ಜೊರಾಗಿ ನಡೆಯಿತು. ಅಷ್ಟರಲ್ಲಿ ಆಂಗ್ಲರ ಹೊಡೆತದಿಂದ ಕ್ರಾಂತಿಸೈನ್ಯದ ಎಡಬದಿಯು ಧ್ವಂಸವಾಗತೊಡಗಿತು. ಆ ಗುಂಪಿನಲ್ಲಿ ಗೊಂದಲವಾಯಿತು ಮತ್ತು ಕ್ರಾಂತಿಯ ಸೈನ್ಯವು ಐದು ತೋಪುಗಳನ್ನು ಶತ್ರುಗಳ ವಶಕ್ಕೆ ಬಿಟ್ಟುದಿಲ್ಲಿಗೆ ವಾಪಾಸು ಹೊರಟಿತು. ಈ ಮೊದಲನೆಯ ಹೋರಾಟದಲ್ಲಿ ಕ್ರಾಂತಿ ಸೈನ್ಯದ ಪಲಾಯನವನ್ನು ನೋಡಿ ಹನ್ನೊಂದನೆಯ ತುಕುಡಿಯಲ್ಲಿದ್ದ ಒಬ್ಬ ಸೈನಿಕನು ಬೇರೆಯೇ ವಿಚಾರವನ್ನು ಮಾಡಿದನು. ಇತರರು ತಮ್ಮ ಕರ್ತವ್ಯ ಮಾಡಲಿ ಬಿಡಲಿ, ಆದರೆ ನಾನು ಸಾಯುವ ಮೊದಲು ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂಬ ಉದಾತ್ತ ಸ್ಫೂರ್ತಿಯಿಂದ ಆ ಸೈನಿಕನು ಆಂಗ್ಲರ ಕೈಯಲ್ಲಿ ತಮ್ಮ ತೋಪುಗಳು ಹೋಗುವುದನ್ನು ನೋಡಿ ಉದ್ದೇಶಪೂರ್ವಕವಾಗಿ ಮದ್ದು–ಗುಂಡುಗಳಿರುವ ಗೋದಾಮನ್ನು ತನ್ನ ಬಂದೂಕಿನಿಂದ ಹೊಡೆದನು. ಇದರಿಂದ ಮದ್ದು–ಗುಂಡುಗಳಿರುವ ಗೋದಾಮಿನಲ್ಲಿ ದೊಡ್ಡ ಸ್ಫೋಟವಾಗಿ ಕ್ಯಾಪ್ಟನ್ ಆಂಡ್ರೂಸ್ ಮತ್ತು ಅವರ ಎಲ್ಲ ಸಹಾಯಕರು ಸುಟ್ಟುಬೂದಿಯಾದರು. ಅನೇಕ ಮಂದಿ ಆಂಗ್ಲರು ಗಾಯಗೊಂಡು ಧರೆಗುರುಳಿದರು. ಸ್ವಭೂಮಿಯ ಚರಣಗಳಲ್ಲಿ ಶತ್ರುವಿನ ಇಷ್ಟೊಂದು ಶಿರಕಮಲಗಳನ್ನು ಅರ್ಪಿಸಿದ ನಂತರ ಆ ದೇಶಭಕ್ತನು ತನ್ನ ಶಿರಕಮಲವನ್ನೂ ಅವಳ ಸೇವೆಗೆ ಅರ್ಪಣೆ ಮಾಡಿದನು. ಈ ಹುತಾತ್ಮನ ಹೆಸರೂ ಇತಿಹಾಸಕ್ಕೆ ಗೊತ್ತಿಲ್ಲ. ಆಂಗ್ಲ ಇತಿಹಾಸಕಾರರು ಈ ದೇಶವೀರನ ಬಗ್ಗೆ ಉಲ್ಲೇಖಿಸುವಾಗ ‘ರಾಷ್ಟ್ರಕಾರ್ಯಕ್ಕಾಗಿ ಶೂರತನದಿಂದ ಹೇಗೆ ಮರಣಕ್ಕೆ ಮುಂದೆ ಹೊಗಬೇಕು ಎಂದು ಅವನು ನಮಗೆ ಕಲಿಸಿದನು’ ಎಂದು ಪ್ರಶಂಸಿಸಿದ್ದಾರೆ.
ಗಲ್ಲುಶಿಕ್ಷೆಗಿಂತ ಗುಂಡಿನೇಟು ಮೇಲು ಎಂದು ಹೇಳುವ ಶೂರ ಸಿಪಾಯಿ !
ಹೋತಿಮರ್ದಾನದಲ್ಲಿನ (ಪಂಜಾಬ) ೫೫ನೆಯ ತುಕುಡಿಯ ಸತ್ಯಸ್ಥಿತಿಯು ಬಹಳ ಕೆಡಕೆನಿಸುವಂತಹದ್ದಾಗಿದೆ. ಈ ತುಕುಡಿಯು ಪಿತೂರಿಯಾಗಿದೆ ಎಂಬ ಸಂಶಯದಿಂದ ಆಂಗ್ಲರು ಅವರನ್ನು ಮುಗಿಸಲು ಸೈನ್ಯವನ್ನು ಕಳುಹಿಸಿದ್ದರು. ಈ ತುಕುಡಿಗೆ ಈ ಸುದ್ದಿ ತಿಳಿದೊಡನೆ ಅವರು ಸರಕಾರೀ ಖಜಾನೆಯನ್ನು ಲೂಟಿ ಮಾಡಿ ದಿಲ್ಲಿಗೆ ಹೊರಟರು. ಆದರೆ ದಾರಿಯಲ್ಲಿ ಯುರೋಪಿಯನ್ರ ಸುಸಜ್ಜಿತ ಸೇನೆಯು ಅವರನ್ನು ಅಡ್ಡಗಟ್ಟಿತು. ಸ್ವ.ಸಾವರಕರರು ತಮ್ಮ ‘೧೮೫೭ರ ಸ್ವಾತಂತ್ರ್ಯ ಸಮರ’ ಎಂಬ ಗ್ರಂಥದಲ್ಲಿ ಈ ಘಟನೆಯನ್ನು ಮುಂದಿನಂತೆ ವಿವರಿಸಿದ್ದಾರೆ. – ಯುರೋಪಿಯನ್ ಸೈನ್ಯವು ಈ ತುಕುಡಿಯನ್ನು ಹಿಂಬಾಲಿಸಿತ್ತು. ಅದರಲ್ಲಿ ಸಾವಿರಾರು ಸಿಪಾಯಿಗಳು ಪ್ರಾಣ ಕಳೆದುಕೊಂಡರು ಉಳಿದವರು ಹೋರಾಡುತ್ತ ಗಡಿಯಿಂದ ಹೊರಬಿದ್ದರು. ಆದರೆ ಅಲ್ಲಿನ ಮುಸಲ್ಮಾನರ ಗುಂಪು ಅವರಲ್ಲಿದ್ದ ಹಿಂದೂ ಜನರನ್ನು ಒಬ್ಬೊಬ್ಬರನ್ನಾಗಿ ಹಿಡಿದು ಬಲವಂತದಿಂದ ಮುಸಲ್ಮಾನರನ್ನಾಗಿಸಲು ಪ್ರಾರಂಭಿಸಿತು. ಆಗ ಆ ದುರ್ದೈವಿ ಸಿಪಾಯಿಗಳು ತಮ್ಮ ಹಿಂದೂತ್ವದ ರಕ್ಷಣೆಯನ್ನು ಮಾಡಿಕೊಳ್ಳಲು, ಕಾಶ್ಮೀರದ ಹಿಂದೂ ರಾಜನು ಸಮರ್ಥನಾಗಿದ್ದಾನೆ ಎಂಬ ಆಸೆಯನ್ನು ಇಟ್ಟುಕೊಂಡು ಗುಲಾಬಸಿಂಗನ ಪ್ರದೇಶದತ್ತ ಆಶ್ರಯಕ್ಕಾಗಿ, ಧರ್ಮರಕ್ಷಣೆಗಾಗಿ ಮತ್ತು ದೇಶಸೇವೆಯ ಪ್ರೀತ್ಯರ್ಥ ಹೊರಟರು. ದಾರಿಯಲ್ಲಿ ನಿರ್ಜನ ಪ್ರದೇಶಲ್ಲಿ ಅವರಿಗೆ ಅನ್ನ, ವಸ್ತ್ರ ಮತ್ತು ವಿಶ್ರಾಂತಿ ಏನು ಸಿಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದುಃಖದಿಂದ ಆ ನೂರಾರು ಹಿಂದೂ ಸಿಪಾಯಿಗಳು ‘ಇಂದು ತಮ್ಮ ಧರ್ಮವನ್ನು ಕಾಯುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ’ ಎಂದು ಕಣ್ಣೀರು ಸುರಿಸುತ್ತಾ ಕಾಶ್ಮೀರದೆಡೆಗೆ ಸಾಗುತ್ತಿದ್ದಾಗ ಆಂಗ್ಲರು ಪ್ರತಿ ಹೆಜ್ಜೆಗೆ ಅವರ ಕೊಲೆ ಮಾಡಿದರು. ಆದರೂ ಆ ಸಾವಿರಾರು ಸಿಪಾಯಿಗಳು ಕಾಶ್ಮೀರದೆಡೆಗೆ ಹೋಗುತ್ತಲೇ ಇದ್ದರು. ಗುಲಾಬಸಿಂಗನು ಅನಾಥ ಮತ್ತು ಧರ್ಮರಕ್ಷಣೆಗಾಗಿ ಮೃತ್ಯುವಿನ ದವಡೆಗೆ ಹಾರಲು ಸಿದ್ಧರಾದ ಜನರು ಕಾಶ್ಮೀರದೆಡೆಗೆ ಬರುತ್ತಿದ್ದಾರೆ ಎಂದು ತಿಳಿದ ಕೂಡಲೇ ತಮ್ಮ ರಾಜ್ಯದೊಳಗೆ ಬರದಂತೆ ಅವರ ಮೇಲೆ ನಿರ್ಬಂಧ ಹೇರಿದನು! ಇಷ್ಟು ಮಾತ್ರವಲ್ಲ ಈ ಹಿಂದೂಗಳು ಎಲ್ಲಿಯಾದರೂ ಕಂಡುಬಂದಲ್ಲಿ ಅವರನ್ನು ಅಲ್ಲಿಯೇ ಮುಗಿಸಿಬಿಡುವಂತೆ ತನ್ನ ಸೈನ್ಯಕ್ಕೆ ಕಠಿಣ ಆದೇಶವನ್ನು ನೀಡಿದನು ಮತ್ತು ತನ್ನ ಸುಕೃತ್ಯವನ್ನು ಆಂಗ್ಲರ ದರಬಾರಿನಲ್ಲಿ ಬಹಳ ವಿಜೃಂಭಣೆಯಿಂದ ಘೋಷಿಸಿದನು! ಆಗ ಆ ಸೈನಿಕರಿಗೆ ಒಂದೋ ಮತಾಂತರಗೊಳ್ಳುವುದು ಅಥವಾ ಪುನಃ ಗುಲಾಮಗಿರಿಗೆ ಒಳಗಾಗುವುದು ಅಥವಾ ಮೃತ್ಯುವಿಗೆ ಆಹ್ವಾನ ಕೊಡುವುದು ಎಂಬ ಮೂರೇ ಮಾರ್ಗಗಳು ಉಳಿದಿದ್ದವು. ಈ ಹಿಂದೂ ವೀರರು ಮೂರನೆಯ ಮಾರ್ಗವನ್ನೇ ಸ್ವೀಕರಿಸಿದರು. ಆಂಗ್ಲರು ಅವರನ್ನು ಹೆಜ್ಜೆ–ಹೆಜ್ಜೆಗೆ ನಿಷ್ಠೂರವಾಗಿ ಎಷ್ಟು ಕೊಲೆ ಮಾಡಿಸಿದರೆಂದರೆ ಮೈದಾನದಲ್ಲಿ ಇರಿಸಿದ್ದ ವಧಸ್ತಂಭವೂ ನಿರಪರಾಧಿ ಹಿಂದೂಗಳ ರಕ್ತದಿಂದ ತೊಯ್ದು ಕೊಳೆಯತೊಡಗಿತ್ತು. ಅವರನ್ನು ವಧಿಸಲು ಒಂದರ ಹಿಂದೆ ಒಂದರಂತೆ ತೋಪಿನ ಮುಖಗಳನ್ನು ತೆರೆದಿಡಲಾಯಿತು ಮತ್ತು ೫೫ನೆಯ ತುಕುಡಿಯಲ್ಲಿದ್ದ ಪ್ರತಿಯೊಬ್ಬನನ್ನೂ ತೋಪುಗಳನ್ನು ಸಿಡಿಸಿ ಕೊಲ್ಲಲಾಯಿತು. ಒಂದು ಸಾವಿರ ಹಿಂದೂಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಇಲ್ಲವಾಗಿಸಲಾಯಿತು. ಆದರೆ ಆ ಕೊನೆಯ ಕ್ಷಣದಲ್ಲಿಯೂ ಆ ಹಿಂದೂ ವೀರರು ತಮ್ಮ ವೀರತನವನ್ನು ಬಿಡಲಿಲ್ಲ. ಗಲ್ಲು ಬೇಕೋ ಗುಂಡು ಬೋಕೋ ಎಂದು ಪ್ರಶ್ನೆಯನ್ನು ಕೇಳಿದಾಗ ‘ನಾವು ನಾಯಿಗಳಂತೆ ಗಲ್ಲಿಗೇರಿ ಸಾಯುವುದಿಲ್ಲ,ನಾವು ತೋಪುಗಳನ್ನು ಎದುರಿಸಿ ವೀರರಂತೆ ಸಾಯುವೆವು’ ಎಂದು ಅವರು ದಿಟ್ಟತನದಿಂದ ಉತ್ತರಿಸುತ್ತಿದ್ದರು.
ವೀರಮುಕ್ತಿಗಾಗಿ ಚಡಪಡಿಸಿದ ಅಯೋಧ್ಯೆಯ ವೀರ ಸಿಪಾಯಿ !
ಕಾನಪುರದ ಮೇಲೆ ಹಲ್ಲೆಯನ್ನು ಮಾಡಿದಮೇಲೆ ಆಂಗ್ಲರನ್ನು ತೋಪಿನಿಂದ ನಷ್ಟಗೊಳಿಸುವುದೆಂದು ಕ್ರಾಂತಿಕಾರರು ಆಯೋಜಿಸಿದ್ದರು. ಸಿಪಾಯಿಗಳು ಆಗಾಗ ಹಲ್ಲೆಯನ್ನೂ ಮಾಡುತ್ತಿದ್ದರು. ಜೂನ್ ೧೮, ೧೮೫೭ ರಂದು ಅಯೋಧ್ಯೆಯ ಸಿಪಾಯಿಗಳು ಆಂಗ್ಲರ ಮೇಲೆ ನಡೆಸಿದ ಹಲ್ಲೆಯು ಇತಿಹಾಸಕ್ಕೆ ಭೂಷಣವಾಗಿತ್ತು. ಆ ದಿನ ಸಿಪಾಯಿಗಳು ತೋಪುಗಳ ಗೋಲಿಗಳನ್ನೂ ಹಿಂದಕ್ಕಟ್ಟಿ ಬಾಣಗಳಂತೆ ಶತ್ರುಗಳ ಎದೆಯ ಮೇಲೆ ಆಕ್ರಮಣ ಮಾಡಿದರು. ಆಂಗ್ಲರ ಒಂದು ತೋಪನ್ನು ಅವರು ವಿರುದ್ಧ ದಿಕ್ಕಿಗೆ ತಿರುಗಿಸಿದರು ಮತ್ತು ಕ್ಷಣದೊಳಗೆ ಸ್ವರಾಜ್ಯದ ಕೇಸರಿ ಧ್ವಜವು ಹಾರಾಡುವುದು ಎಂದು ಅನಿಸುತ್ತಿತ್ತು . ಆದರೆ ಕೆಲವು ಸಿಪಾಯಿಗಳು ಇಂತಹ ಶೂರ ಸಿಪಾಯಿಗಳಿಗೆ ಸಹಾಯ ಮಾಡುವುದನ್ನು ಬಿಟ್ಟು ಅತ್ತ ಇತ್ತ ಓಡಾಡುತ್ತ ಎಲ್ಲೆಡೆಗಳಲ್ಲಿ ಗೊಂದಲವನ್ನು ಮಾಡತೊಡಗಿದರು . ಅವರ ವಿಶ್ವಾಸಘಾತವು ಇತರರನ್ನು ಹಿಂತಿರುಗುವಂತೆ ಮಾಡಿತು. ಆದರೆ ಅಯೋಧ್ಯೆಯ ಒಬ್ಬ ಶೂರ ಸಿಪಾಯಿಯು ಹಿಂತಿರುಗುವಾಗ ದೇಶಕ್ಕಾಗಿ ಏನಾದರು ಮಾಡಿ ವೀರಮುಕ್ತಿಯನ್ನು ಪಡೆಯಬೇಕೆಂದು ಸತ್ತಂತೆ ನಟಿಸಿ ಅಲ್ಲಿಯೇ ಬಿದ್ದುಕೊಂಡಿದ್ದನು. ಆಂಗ್ಲರ ಸೈನ್ಯದಲ್ಲಿ ಶೂರನೆಂದು ಹೆಸರುವಾಸಿಯಾಗಿದ್ದ ಮತ್ತು ಅನೇಕ ಬಾರಿ ಶತ್ರುಗಳ ಮೇಲೆ ದಾಳಿ ಮಾಡಿದ ಕ್ಯಾಪ್ಟನ್ ಜೆನ್ಕಿನ್ಸ್ನು ಅಲ್ಲಿಂದ ಓಡುತ್ತಾ ಹೋಗುತ್ತಿದ್ದನು. ಈ ಸತ್ತಂತೆ ನಟಿಸುತ್ತಿದ್ದ. ಸಿಪಾಯಿಯು ಅವನ ಮೇಲೆ ಗುಂಡು ಹಾರಿಸಿ ಅವನನ್ನು ಕ್ಷಣದೊಳಗೆ ಕೊಂದು ಹಾಕಿದನು ಮತ್ತು ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದನು !
ಹೇ ಸ್ವರ್ಗವಾಸಿ ಸಿಪಾಯಿಗಳೇ!
ಇಂತಹ ಅನೇಕ ಸಿಪಾಯಿಗಳು ಸ್ವಧರ್ಮದ (ಹಿಂದೂ ಧರ್ಮದ) ರಕ್ಷಣೆಗಾಗಿ ಈ ಕ್ರಾಂತಿಯುದ್ಧದಲ್ಲಿ ಒಟ್ಟಾಗಿದ್ದರು. ಆಂಗ್ಲರು ತಮ್ಮ ದೇಶಕ್ಕೆ ಕಳುಹಿಸಿದ ವರದಿಗಳಿಂದ ಮತ್ತು ಸ್ವಾ.ಸಾವರಕರರ ಪ್ರಯತ್ನಗಳಿಂದ ನಮಗೆ ಅವರ ಪರಾಕ್ರಮವಾದರೂ ತಿಳಿಯಿತು. ಅವರಲ್ಲಿನ ಅನೇಕರ ಹೆಸರುಗಳು ಆಂಗ್ಲರಿಗೂ ಸರಿಯಾಗಿ ಗೊತ್ತಿರಲಿಲ್ಲ ಹಾಗಾಗಿ ಅವರು ಅಜ್ಞಾತರಾಗಿಯೇ ಉಳಿದರು. ಹೇ, ವೀರ ಸಿಪಾಯಿಗಳೆ, ಕೈಗೆ ಸಿಕ್ಕಿದ್ದೇ ಶಸ್ತ್ರ, ಮುಂದೆ ಆಗುವವನೇ ಸೇನಾಪತಿ, ಹಿಂದೆ ಬರುವವರೇ ಸಹಾಯಕರು ಎಂಬ ಸಮಯದಲ್ಲಿ ದೃಢ ನಿರ್ಧಾರಮಾಡಿ ನೀವು ಈ ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದಿರಿ. ನಿಮ್ಮ ತಂದೆ–ತಾಯಿ, ನಿಮ್ಮ ಪತ್ನಿ–ಮಕ್ಕಳಿಗೆ ನಿಮ್ಮ ನಂತರ ಏನಾಗಬಹುದು ಎಂಬ ವಿಚಾರವನ್ನೂ ಸಹ ಮಾಡದೇ ಕೇವಲ ‘ಸ್ವಧರ್ಮ’ ಎಂಬ ಅಕ್ಷರಗಳಿಗಾಗಿ ತಾವು ಶತ್ರುಗಳ ಮೇಲೆ ಧಾವಿಸಿ ಆಕ್ರಮಣ ಮಾಡಿದಿರಿ. ಸಿಪಾಯಿಗಳೇ, ನೀವು ಧನ್ಯರು !