ಈಗ ಪ್ರಶ್ನೆಯೇನೆಂದರೆ ಆ ಕಾಲದಲ್ಲಿ ‘ಮಸೂರ’ಗಳು ಅಥವಾ ‘ಲೆನ್ಸ್’ ಇದ್ದವೇನು? ಇದರ ಉತ್ತರ ‘ಹೌದು’,ಏಕೆಂದರೆ ಆದಿಶಂಕರಾಚಾರ್ಯರು ‘ಅಪರೋಕ್ಷಾನುಭೂತಿ’ಯಲ್ಲಿನ ೮೧ನೇ ಶ್ಲೋಕದಲ್ಲಿ
ಸೂಕ್ಷ್ಮತ್ವೇ ಸರ್ವ ವಸ್ತೂನಾಂ ಸ್ಥೂಲತ್ವಂ ಚ ಉಪನೇತ್ರತಃ| |
‘ಉಪನೇತ್ರ’ ಅಂದರೆ ‘ಕನ್ನಡಕ’ ಎಂದು ಉಪಯೋಗಿಸಿದ್ದಾರೆ ಮತ್ತು ಇದು ಜನರ ದೈನಂದಿನ ಬಳಕೆಯ ವಸ್ತುವಾಗಿತ್ತು ಎಂಬುದು ತಿಳಿದು ಬರುತ್ತದೆ. ಆದುದರಿಂದ ‘ದೂರದರ್ಶಕ’ ಯಂತ್ರಗಳೂ ಇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ಶಂಕರಾಚಾರ್ಯರ ಕಾಲವನ್ನು ಸುಮಾರು ಕ್ರಿ.ಪೂ.೮೦೦ (800 BC) ಎಂದು ತಿಳಿಯಲಾಗುತ್ತದೆ. ಭಾರತದಲ್ಲಿ ಆ ಕಾಲದಲ್ಲಿಯೇ ‘ಮಸೂರ’ವನ್ನು ಉಪಯೋಗಿಸಲಾಗುತ್ತಿತ್ತು ಎಂಬುದು ಇದರಿಂದ ತಿಳಿದುಬರುತ್ತದೆ. ‘ಯುರೋಪದಲ್ಲಿ ಮಾತ್ರ ಹದಿನಾರನೇ ಶತಮಾನ ಆರಂಭವಾದ ನಂತರ ಮಸೂರವನ್ನು ಶೋಧಿಸಲಾಯಿತು’.