ಭಾಸ್ಕರಾಚಾರ್ಯರು (ದ್ವಿತೀಯ) ‘ಸೂರ್ಯಸಿದ್ಧಾಂತ’ ಎಂಬ ಗ್ರಂಥದಲ್ಲಿ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಬರೆದಿದ್ದಾರೆ. ಇದರಿಂದ ಗುರುತ್ವಾಕರ್ಷಣ ಶಕ್ತಿಯನ್ನು ಐಸಾಕ್ ನ್ಯೂಟನ್ ಇವರಿಗಿಂತ ೫೦೦ ವರ್ಷ ಮೊದಲೇ ಅವರು ಕಂಡುಹಿಡಿದಿದ್ದರು ಎಂಬುದು ಸಿದ್ಧವಾಗುತ್ತದೆ. ಗಣಿತಶಾಸ್ತ್ರದ ‘ಲೀಲಾವತಿ’ ಮತ್ತು ‘ಬೀಜಗಣಿತ’ ಎಂಬ ಗ್ರಂಥಗಳನ್ನೂ ಅವರು ಬರೆದಿದ್ದಾರೆ. ಭೂಮಿತಿ ಮತ್ತು ಖಗೋಲಶಾಸ್ತ್ರ ಇವುಗಳ ವಿಷಯದಲ್ಲಿಯೂ ಅವರು ಮಾಡಿದ ಸಂಶೋಧನೆಯು ಅತ್ಯಮೂಲ್ಯವಾಗಿದೆ.