ಪಾಶ್ಚಾತ್ಯ ಅಣುವಿಜ್ಞಾನಿ ಜಾನ್ ಡಾಲ್ಟನ್ ಇವರಿಗಿಂತ ೨೫೦೦ ವರ್ಷಗಳ ಮೊದಲೇ ಆಚಾರ್ಯ ಕಣಾದರು ಎಲ್ಲ ವಸ್ತುಗಳು ಪರಮಾಣುಗಳಿಂದ ನಿರ್ಮಾಣವಾಗಿವೆ ಎಂದು ಹೇಳಿದ್ದರು. ಮೊತ್ತ ಮೊದಲು ಕಣಾದರ ‘ವೈಶೇಷಿಕ ದರ್ಶನ ಸೂತ್ರ’ದಲ್ಲಿ ಪರಮಾಣುಗಳ ಬಗ್ಗೆ ಹೇಳಲಾಗಿತ್ತು. ಅಣುಶಾಸ್ತ್ರದಲ್ಲಿ ಆಚಾರ್ಯ ಕಣಾದ ಮತ್ತು ಇತರ ಭಾರತೀಯ ವಿಜ್ಞಾನಿಗಳು ಯುರೋಪಿಯನ್ ವಿಜ್ಞಾನಿಗಳ ತುಲನೆಯಲ್ಲಿ ಜಗದ್ವಿಖ್ಯಾತರಾಗಿದ್ದರು ಎಂದು ಪ್ರಸಿದ್ಧ ಇತಿಹಾಸಕಾರ ಟಿ.ಎನ್. ಕೊಲೆಬ್ರುಕ್ ಇವರು ಹೇಳಿದ್ದಾರೆ.
ಹಿಂದೂಗಳೇ ಹೀಗಿದೆ ನಮ್ಮ ಗೌರವಶಾಲಿ ಇತಿಹಾಸ! ಪಾಶ್ಚಾತ್ಯ ವಿಜ್ಞಾನಿಗಳನ್ನು ಹೊಗಳುವುದರಲ್ಲಿ ಮಾಡುವುದರಲ್ಲಿ ಧನ್ಯತೆಯನ್ನು ಕಾಣಬೇಡಿರಿ. ಹಿಂದೂಧರ್ಮ, ಧರ್ಮಗ್ರಂಥಗಳು ಮತ್ತು ನಮ್ಮ ಪೂರ್ವಜರ ಮೇಲೆ ಅಭಿಮಾನವನ್ನು ಇಟ್ಟುಕೊಳ್ಳಿರಿ!