ಆಚಾರ್ಯ ವರಾಹಮಿಹೀರರು ೬ನೆಯ ಶತಮಾನದಲ್ಲಿ ನಿರ್ಮಿಸಿದ ‘ಬೃಹದ್ಸಂಹಿತೆ’ ಈ ಗ್ರಂಥದಲ್ಲಿ ಒಂದು ಕೋಟಿ ವರ್ಷ ಉಳಿಯುವ ಸಿಮೆಂಟ್ಅನ್ನು ಹೇಗೆ ತಯಾರಿಸಬೇಕು, ಅದಕ್ಕೆ ಯಾವ ಕಲ್ಲುಗಳನ್ನು ಉಪಯೋಗಿಸಬೇಕು, ಕಬ್ಬಿಣವನ್ನು ಕಠಿಣ ಗೊಳಿಸುವ ಪ್ರಕ್ರಿಯೆ, ಉತ್ತಮ ಕಬ್ಬಿಣದ ಆಯುಧಗಳನ್ನು ತಯಾರಿಸುವ ಪದ್ಧತಿ ಮುಂತಾದವುಗಳ ಸವಿಸ್ತಾರ ಮಾಹಿತಿಯನ್ನು ನೀಡಲಾಗಿದೆ. ‘ಬೃಹದ್ಸಂಹಿತೆ’ಯ ಅಧ್ಯಯನಕಾರ ಲೆಫ್ಟಿನೆಂಟ್ ಕರ್ನಲ್ ಗ್ರೀನ್ ಅರ್ಮಿಟೆಂಜ್ ಇವರು ‘ಹಿಂದೂಗಳ ರಾಸಾಯನಿಕಗಳ ಬಗೆಗಿನ ಚಾತುರ್ಯವು ಅದ್ಭುತವಾಗಿದೆ’ ಎಂಬ ಶಬ್ದಗಳಲ್ಲಿ ವರಾಹಮಿಹೀರ ಇವರ ಪ್ರತಿಭೆಯನ್ನು ಪ್ರಶಂಸಿಸಿದ್ದಾರೆ.
ಎಲ್ಲಿ ಒಂದು ಒಂದೂವರೆ ಶತಮಾನದಲ್ಲಿ ಕುಸಿಯುವ ವಾಸ್ತುಗಳನ್ನು ಕಟ್ಟುವ ಪಾಶ್ಚಾತ್ಯರು ಮತ್ತು ಎಲ್ಲಿ ಸಾವಿರಾರು ವರ್ಷಗಳ ಕಾಲ ಉಳಿಯುವ ದೇವಸ್ಥಾನ ಗಳನ್ನು ಕಟ್ಟುವ ಹಿಂದೂಗಳ ಶ್ರೇಷ್ಠ ಋಷಿಮುನಿಗಳು!