‘ಶತಪಥ ಬ್ರಾಹ್ಮಣ’ದಲ್ಲಿ ಸೃಷ್ಟಿಯ ನಿರ್ಮಾಣದ ಬಗ್ಗೆ ವರ್ಣನೆ ಇದೆ. ಎಲ್ಲಕ್ಕಿಂತ ಮೊದಲು ಪ್ರಜಾಪತಿ ಇದ್ದನು. ಅವನು ಪ್ರಕಾಶವನ್ನು ಹೆಚ್ಚಿಸಿದನು. ಅದರಿಂದ ಜಲದ ನಿರ್ಮಿತಿಯಾಯಿತು. ಆದರೆ ಆ ಜಲವೂ ಬಿಸಿಯಾಗತೊಡಗಿತು. ಅದು ಬಾಷ್ಪವಾಗಿ ಅನಂತರ ತಣ್ಣಗಾಗಿ ಅದರಿಂದ ಪರಮಾಣುರೂಪಿ ಮಣ್ಣು ನಿರ್ಮಾಣವಾಯಿತು. ಈ ಪರಮಾಣುಗಳ ಪರಸ್ಪರ ಘರ್ಷಣೆಯಿಂದ ಮರಳಿನ ನಿರ್ಮಾಣವಾಯಿತು ಮತ್ತು ಅದರ ನಂತರ ಅದರಲ್ಲಿನ ಪರಮಾಣುಗಳ ಪರಸ್ಪರ ಆಕರ್ಷಣೆಯಿಂದಾಗಿ ಅದು ಕಲ್ಲಾಯಿತು. ಅದರ ನಂತರ ಕ್ರಮೇಣ ಮೃದುಕಲ್ಲು ಮತ್ತು ಗಟ್ಟಿಕಲ್ಲು ಆಯಿತು. ಅವುಗಳ ಹೆಚ್ಚು ಆಕರ್ಷಣೆಯಿಂದಾಗಿ ಕಬ್ಬಿಣವು ತಯಾರಾಯಿತು. ಅಧಿಕ ಉಷ್ಣತೆಯಿಂದಾಗಿ ಅದರ ಮೇಲೆ ತೆಳುವಾದ ಪದರವು ಕಾಣಲಾರಂಭಿಸಿತು. ಹೆಚ್ಚು ಆಕರ್ಷಣೆ ಮತ್ತು ಉಷ್ಣತೆಯಿಂದಾಗಿ ಲೋಹವು ಚಿನ್ನಕ್ಕೆ ರೂಪಾಂತರವಾಯಿತು. ನಿಧಾನವಾಗಿ ಭೂಮಿ ತಣ್ಣಗಾದ ನಂತರ ಭೂಮಿಯ ಮೇಲೆ ಉಷ್ಣ ನೀರಿನ ಸ್ವರೂಪ ಉತ್ಪನ್ನವಾದುದರಿಂದ ತೇವಯುಕ್ತ ಮಣ್ಣು, ಒಣ ಮಣ್ಣು, ಅಗ್ನಿಯ ರೂಪದಿಂದಾದ ಪದರುಗಳು, ಮರಳು, ಸಣ್ಣ ಕಲ್ಲು, ಲೋಹ ಮತ್ತು ಚಿನ್ನ ಮುಂತಾದವುಗಳಂತೆ ಧಾತುರೂಪಿ ಇಂದ್ರಿಯರಹಿತ ವಸ್ತುಗಳ ಸೃಷ್ಟಿಯು ನಿರ್ಮಾಣವಾಯಿತು.’ (ಶತಪಥ ಬ್ರಾಹ್ಮಣ ೧.೩.೧.೫)