ದತ್ತನ ಎಲ್ಲ ತೀರ್ಥಕ್ಷೇತ್ರಗಳೂ ಅತ್ಯಂತ ಜಾಗೃತವಾಗಿವೆ. ಈ ತೀರ್ಥಕ್ಷೇತ್ರಗಳಿಗೆ ಹೋದಾಗ ಬಹಳಷ್ಟು ಭಕ್ತರಿಗೆ ಶಕ್ತಿಯ ಅನುಭೂತಿಯು ಬರುತ್ತದೆ. ಉದಾಹರಣೆಗೆ ನೃಸಿಂಹವಾಡಿಯು ಎಷ್ಟು ಜಾಗೃತವಾಗಿದೆ ಎಂಬುದರ ಅನುಭವವು ಅನೇಕರು ತಮ್ಮ ಕಷ್ಟಗಳ ಪರಿಹಾರವಾಗಿ ಅನುಭವಿಸಿದ್ದಾರೆ.
೧. ಮಾಹೂರ: ಕಿನವಟ ತಾಲ್ಲೂಕು, ನಾಂದೇಡ ಜಿಲ್ಲೆ, ಮಹಾರಾಷ್ಟ್ರ.
೨. ಗಿರನಾರ: ಜುನಾಗಡದ ಹತ್ತಿರ, ಸೌರಾಷ್ಟ್ರ. ಇದಕ್ಕೆ ೧೦,೦೦೦ ಮೆಟ್ಟಿಲುಗಳಿವೆ.
೩. ಕಾರಂಜಾ: ಶ್ರೀನೃಸಿಂಹ ಸರಸ್ವತಿಗಳ ಜನ್ಮಸ್ಥಾನ. ಲಾಡ-ಕಾರಂಜೆ ಇದು ಇದರ ಇನ್ನೊಂದು ಹೆಸರಾಗಿದೆ. ಕಾಶಿಯ ಬ್ರಹ್ಮಾನಂದ ಸರಸ್ವತಿಯವರು ಈ ಸ್ಥಳದಲ್ಲಿ ಮೊತ್ತಮೊದಲು ದತ್ತಮಂದಿರವನ್ನು ಸ್ಥಾಪಿಸಿದರು.
೪. ಔದುಂಬರ: ಶ್ರೀನೃಸಿಂಹ ಸರಸ್ವತಿಯವರು ಇಲ್ಲಿ ಚಾತುರ್ಮಾಸಕ್ಕಾಗಿ ಉಳಿದುಕೊಂಡಿದ್ದರು. ಈ ಸ್ಥಳವು ಮಹಾರಾಷ್ಟ್ರದ ಭಿಲವಡಿಯಿಂದ ೧೦ಕಿ.ಮೀ. ಅಂತರದಲ್ಲಿ ಕೃಷ್ಣಾ ನದಿತೀರದಲ್ಲಿದೆ.
೫. ನರಸೋಬಾನವಾಡಿ: ಇದು ಮಹಾರಾಷ್ಟ್ರದಲ್ಲಿದ್ದು ದತ್ತಾವತಾರಿ ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ಹನ್ನೆರಡು ವರ್ಷಗಳ ಕಾಲ ಇದ್ದರು. ಇಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮವಿದೆ. ಇದು ಟೇಂಬೇ ಸ್ವಾಮಿಗಳ ಪ್ರೇರಣಾ ಸ್ಥಾನವಾಗಿದೆ.
೬. ಗಾಣಗಾಪುರ: ಇದು ಕರ್ನಾಟಕದಲ್ಲಿ ಪುಣೆ-ರಾಯಚೂರು ಮಾರ್ಗದಲ್ಲಿದೆ. ಇಲ್ಲಿ ಭೀಮಾ ಮತ್ತು ಅಮರಜಾ ನದಿಗಳ ಸಂಗಮವಿದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿಯವರು ೨೩ವರ್ಷಗಳ ಕಾಲ ವಾಸ ಮಾಡಿದರು ಮತ್ತು ಇಲ್ಲಿಯೇ ಎಲ್ಲ ಕಾರ್ಯಗಳನ್ನು ಮಾಡಿದರು. ಇಲ್ಲಿಂದಲೇ ಅವರು ಶ್ರೀಶೈಲಕ್ಕೆ ಪ್ರಯಾಣ ಮಾಡಿದರು.
೭. ಕುರವಪುರ: ಈ ಕ್ಷೇತ್ರ ಕರ್ನಾಟಕದಲ್ಲಿದ್ದು, ಕೃಷ್ಣೆಯ ನೀರಿನಲ್ಲಿ ಈ ದ್ವೀಪವಿದೆ. ಇದು ಶ್ರೀಪಾದ ಶ್ರೀವಲ್ಲಭರ ಕಾರ್ಯ ಸ್ಥಾನವಾಗಿದೆ.
೮. ಪೀಠಾಪುರ: ಆಂಧ್ರಪ್ರದೇಶದಲ್ಲಿದೆ. ಶ್ರೀಪಾದ ಶ್ರೀವಲ್ಲಭರ ಜನ್ಮಸ್ಥಾನ. ಟೇಂಬೇ ಸ್ವಾಮಿಯವರು ಅದನ್ನು ಬೆಳಕಿಗೆ ತಂದರು.
೯. ವಾರಾಣಸಿ: ಇಲ್ಲಿ ನಾರದಘಾಟ್.ನಲ್ಲಿ ದತ್ತಾತ್ರೇಯರ ಮಠವಿದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿಯವರ ವಂಶಜರು ಇಂದಿಗೂ ಇದ್ದಾರೆ. ಅವರ ಅಡ್ಡಹೆಸರು ಕಾಳೆಯಾಗಿದೆ. ಮುಂದೆ ಕಾಳೆ ಎಂಬುದು ಕಾಲಿಯಾ ಆಗಿ ಅಪಭ್ರಂಶವಾಯಿತು.
೧೦. ಶ್ರೀಶೈಲ: ಹೈದರಾಬಾದಿನ ಹತ್ತಿರವಿದೆ. ಶ್ರೀ ನೃಸಿಂಹ ಸರಸ್ವತಿಯವರು ಇಲ್ಲಿ ಪ್ರಸ್ಥಾನ ಮಾಡಿದರು.
೧೧.ಭಟ್ಟಗಾವ (ಭಡಗಾವ): ಇದು ಕಾಠ್ಮಂಡುವಿನಿಂದ (ನೇಪಾಳ) ೩೫ಕಿ.ಮೀ. ಅಂತರದಲ್ಲಿದೆ.
೧೨. ಪಾಂಚಾಳೇಶ್ವರ: ಬೀಡ ಜಿಲ್ಲೆ, ಮಹಾರಾಷ್ಟ್ರ.