ಮನುಷ್ಯನ ಸಾತ್ತ್ವಿಕತೆಯು ಹೆಚ್ಚಾದರೆ ಅವನ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಆಯೋಜನಾಪೂರ್ವಕವಾಗಿ ಮತ್ತು ಏಕಾಗ್ರ ಮನಸ್ಸಿನಿಂದ ಮಾಡಿದ ಯಾವುದೇ ಕೃತಿಯು ಪರಿಪೂರ್ಣವಾಗಿರುತ್ತದೆ. ಅಧ್ಯಯನ ಮಾಡುವಾಗ, ಚಿತ್ರಕಲೆ ಮತ್ತು ಸಂಗೀತಕಲೆ ಇವುಗಳಂತಹ ಕಲೆಗಳನ್ನು ಕಲಿಯುವಾಗ ಅಥವಾ ಇತರ ಯಾವುದೇ ಕೃತಿಗಳನ್ನು ಮಾಡುವಾಗ ಮನಸ್ಸಿನ ಏಕಾಗ್ರತೆಯ ಅವಶ್ಯಕತೆ ಇರುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಲು ಸಾತ್ತ್ವಿಕತೆಯನ್ನೂ ಹೆಚ್ಚಿಸಬೇಕು. ಅದನ್ನು ಹೆಚ್ಚಿಸಲು ಮುಂದಿನ ವಿಷಯಗಳು ಉಪಯೋಗಕ್ಕೆ ಬರುತ್ತವೆ.
ಅಧ್ಯಯನ ಮಾಡಲು ಕುಳಿತುಕೊಳ್ಳುವ ಸ್ಥಳದಲ್ಲಿ ದೇವತೆಯ ಚಿತ್ರ ಮತ್ತು ನಾಮಪಟ್ಟಿಗಳನ್ನು ಹಾಕಬೇಕು
ದೇವತೆಯ ಚಿತ್ರವನ್ನು ನಮ್ಮೆದುರಿಗೆ ಇಟ್ಟು, ದೇವತೆಯ ಚರಣಗಳ ಕಡೆಗೆ ನೋಡುತ್ತಾ ಪ್ರಾರ್ಥನೆ ಮತ್ತು ನಾಮಜಪ ಮಾಡಿದರೆ ನಮ್ಮ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ನಾಮಪಟ್ಟಿಗಳ ಕಡೆಗೆ ಗಮನ ಹೋಗಿ ನಾಮಜಪದ ನೆನಪಾಗುತ್ತದೆ. ದೇವತೆಯ ಚಿತ್ರ ಮತ್ತು ನಾಮಪಟ್ಟಿಗಳಿಂದ ಸಾತ್ತ್ವಿಕತೆಯು ಸಿಗುತ್ತದೆ.
ದೇವತೆಯ ಚಿತ್ರದ ಎದುರಿಗೆ ಊದುಬತ್ತಿಯನ್ನು ಹಚ್ಚುವುದು
ಊದುಬತ್ತಿಯ ಸುಗಂಧದಿಂದ ವಾತಾವರಣದ ಮತ್ತು ವ್ಯಕ್ತಿಯ ಮನಸ್ಸಿನ ಶುದ್ಧಿಯಾಗುತ್ತದೆ. ವಾತಾವರಣದಲ್ಲಿ ಚೈತನ್ಯವು ಹರಡಿ ಪ್ರಸನ್ನತೆಯ ಅರಿವಾಗುತ್ತದೆ. ಇದರಿಂದ ದೀರ್ಘಕಾಲದವರೆಗೆ ಮನಸ್ಸಿನಲ್ಲಿ ಉತ್ಸಾಹವಿರುತ್ತದೆ ಮತ್ತು ಏಕಾಗ್ರತೆಯೂ ಸ್ಥಿರವಾಗಿ ಉಳಿಯುತ್ತದೆ.
‘ಶ್ರೀಗಣಪತಿ’, ‘ಶ್ರೀಸರಸ್ವತಿ ದೇವಿ’ ಇವರಿಗೆ ಪ್ರಾರ್ಥನೆಯನ್ನು ಮಾಡಬೇಕು
ಮನಸ್ಸಿನಲ್ಲಿನ ಅನಾವಶ್ಯಕ ವಿಚಾರಗಳು ಕಡಿಮೆಯಾಗಿ ಮನಸ್ಸು ಏಕಾಗ್ರವಾಗಬೇಕು ಮತ್ತು ಅಧ್ಯಯನ ಮಾಡಿದ ವಿಷಯವು ಸರಿಯಾಗಿ ತಿಳಿಯಬೇಕೆಂದು ‘ಶ್ರೀಗಣಪತಿ’, ‘ಶ್ರೀಸರಸ್ವತಿ ದೇವಿ’ ಇವರಿಗೆ ಪ್ರಾರ್ಥನೆಯನ್ನು ಮಾಡಬೇಕು. ಅಧ್ಯಯನವನ್ನು ಪ್ರಾರಂಭಿಸುವಾಗ ಮೊದಲು ೧೦ ನಿಮಿಷ ಕುಲದೇವತೆಯ ನಾಮಜಪವನ್ನು ಮಾಡಬೇಕು, ನಾಮಜಪದಿಂದ ವಾಣಿಯು ಶುದ್ಧವಾಗುತ್ತದೆ. ಮನಸ್ಸಿನಲ್ಲಿನ ಅನಾವಶ್ಯಕ ವಿಚಾರಗಳು ಕಡಿಮೆಯಾಗುತ್ತವೆ ಮತ್ತು ಮನಸ್ಸು ಬೇಗನೆ ಏಕಾಗ್ರವಾಗುತ್ತದೆ.
ಪ್ರತಿಯೊಂದು ವಿಷಯದ ಅಧ್ಯಯನವನ್ನು (ಅಭ್ಯಾಸವನ್ನು) ಆಸಕ್ತಿಯಿಂದ ಮತ್ತು ಮನಃಪೂರ್ವಕವಾಗಿ ಮಾಡಬೇಕು
ಯಾವ ವಿಷಯದ ಅಧ್ಯಯನವನ್ನು ಮಾಡುವುದಿದೆ ಅಥವಾ ಯಾವ ಕಲೆಯನ್ನು ಕಲಿಯುವುದಿದೆ, ಅವುಗಳ ಮತ್ವ, ಅವುಗಳ ಲಾಭ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಬೇಕು. ಆನಂತರವೇ ಅಧ್ಯಯನವನ್ನು ಮಾಡಬೇಕು. ಆಸಕ್ತಿಯಿಂದ ಅಧ್ಯಯನ ಮಾಡುವುದರಿಂದ ಮನಸ್ಸು ಬೇಗನೇ ಏಕಾಗ್ರವಾಗಿ ಕಡಿಮೆ ಸಮಯದಲ್ಲಿ ವಿಷಯವು ತಿಳಿಯುತ್ತದೆ. ಅಧ್ಯಯನ (ಅಭ್ಯಾಸ) ಮಾಡಿ ತಿಳಿದುಕೊಂಡ ವಿಷಯಗಳ ಬಗ್ಗೆ ಚಿಂತನೆ ಮಾಡಿ ಆ ವಿಷಯಗಳನ್ನು ನಮ್ಮದೇ ಭಾಷೆಯಲ್ಲಿ ಬರೆಯಬೇಕು. ಇದರಿಂದ ವಿಷಯಗಳನ್ನು ತಿಳಿದುಕೊಂಡು ನಮ್ಮ ಶಬ್ದಗಳಲ್ಲಿ ತಪ್ಪುಗಳಿಲ್ಲದೆ ಬರೆಯುವ ಅಭ್ಯಾಸವಾಗುತ್ತದೆ.
ಇತರ ಕೆಲವು ಉಪಾಯಗಳು
೧. ನಿಯಮಿತವಾಗಿ ದೇವರ ಆರತಿಯನ್ನು ಮಾಡಬೇಕು
ಆರತಿಯನ್ನು ಮಾಡುವಾಗ ಪ್ರಕ್ಷೇಪಿತವಾಗುವ ಸತ್ತ್ವಲಹರಿಗಳಿಂದ ವಾತಾವರಣದಲ್ಲಿನ ರಜ-ತಮ ಕಣಗಳು ಕಡಿಮೆಯಾಗಿ ವಾತಾವರಣದ ಶುದ್ಧೀಕರಣವಾಗಲು ಸಹಾಯವಾಗುತ್ತದೆ. ಆರತಿಯಿಂದ ಪ್ರಕ್ಷೇಪಿತವಾಗುವ ಚೈತನ್ಯ ಲಹರಿಗಳನ್ನು ಗ್ರಹಣ ಮಾಡುವುದರಿಂದ ಮನಸ್ಸಿನ ಶಕ್ತಿ ಮತ್ತು ಮನಸ್ಸಿನ ವಿಚಾರ ಮಾಡುವ ಕ್ಷಮತೆಯು ಹೆಚ್ಚಾಗುತ್ತದೆ.
ಪ್ರತಿನಿತ್ಯ ಮಾರುತಿ ಸ್ತೋತ್ರ ಅಥವಾ ರಾಮರಕ್ಷಾ ಸ್ತೋತ್ರ ಅಥವಾ ಇತರ ದೇವತೆಗಳ ಸ್ತೋತ್ರಗಳನ್ನು ಪಠಿಸಬೇಕು, ಸಂಸ್ಕೃತ ಭಾಷೆಯು ಸಾತ್ತ್ವಿಕವಾಗಿದೆ. ಸ್ತೋತ್ರದಲ್ಲಿನ ಸಂಸ್ಕೃತ ಶಬ್ದಗಳ ಉಚ್ಛಾರದಿಂದ ಮನಸ್ಸಿನ ಮೇಲೆ ಸಾತ್ತ್ವಿಕತೆಯ ಸಂಸ್ಕಾರವಾಗುತ್ತದೆ. ಏಕಾಗ್ರತೆಯು ಹೆಚ್ಚುತ್ತದೆ. ಸ್ತೋತ್ರವನ್ನು ಪಠಿಸುವವರ ಶರೀರದ ಸುತ್ತಲೂ ದೇವತೆಯ ಸಾತ್ತ್ವಿಕತೆಯ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ.
೨. ಮನಸ್ಸಿನಲ್ಲಿ ಬರುವ ಅನಾವಶ್ಯಕ ವಿಚಾರಗಳ ಮೇಲೆ ಸ್ವಯಂಸೂಚನೆಗಳನ್ನು ನೀಡುವುದು
ಮನಸ್ಸಿನಲ್ಲಿ ಬರುವ ಅನಾವಶ್ಯಕ ವಿಚಾರಗಳನ್ನು ದೂರಗೊಳಿಸಲು ‘ಸ್ವಯಂಸೂಚನೆಗಳನ್ನು ನೀಡುವುದು’ ಪರಿಣಾಮಕಾರಕ ಉಪಾಯವಾಗಿದೆ. ಇದಕ್ಕಾಗಿ ಮುಂದಿನಂತೆ ಸ್ವಯಂಸೂಚನೆಯನ್ನು ನೀಡಬೇಕು – ‘ನಾನು ಅನಾವಶ್ಯಕ ವಿಚಾರಗಳನ್ನು ಮಾಡುತ್ತಿರುವಾಗ ನನಗೆ ಅದರ ಅರಿವಾಗಿ ನಾನು ನಾಮಜಪವನ್ನು ಮಾಡುವೆನು’. ಈ ರೀತಿ ಸೂಚನೆಯನ್ನು ದಿನಕ್ಕೆ ೫ ಸಲ ನೀಡಬೇಕು ಮತ್ತು ಪ್ರತಿ ಸಲ ೫ ಬಾರಿ ಇದನ್ನು ಹೇಳಿಕೊಳ್ಳಬೇಕು.
೩. ಉಪ್ಪಿನ ನೀರಿನಲ್ಲಿ ಕಾಲುಗಳನ್ನಿಟ್ಟು ನಾಮಜಪ ಮಾಡುವುದು
ಶರೀರದ ವಿವಿಧ ಚಲನವಲನದಿಂದ ನಮ್ಮ ಶರೀರದಲ್ಲಿನ ಮತ್ತು ಮನಸ್ಸಿನಲ್ಲಿನ ರಜೋಗುಣವು ಹೆಚ್ಚಾಗುತ್ತದೆ. ಅದೇ ರೀತಿ ಮಲ-ಮೂತ್ರಗಳ ನಿರ್ಮಿತಿಯಿಂದ ಶರೀರದಲ್ಲಿನ ಮತ್ತು ಮನಸ್ಸಿನಲ್ಲಿನ ತಮೋಗುಣವು ಹೆಚ್ಚಾಗುತ್ತದೆ. ಶರೀರದಲ್ಲಿನ ರಜ-ತಮ ಗುಣಗಳ ವೃದ್ಧಿಯಿಂದ ಮನಸ್ಸಿನ ಮೇಲೆ ಪರಿಣಾಮವಾಗಿ ಮನಸ್ಸಿನ ಚಂಚಲತೆಯು ಹೆಚ್ಚಾಗುತ್ತದೆ ಮತ್ತು ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳ ಪ್ರಮಾಣವು ಹೆಚ್ಚಾಗುತ್ತದೆ. ಕಲ್ಲುಪ್ಪಿನ ನೀರಿನಲ್ಲಿ ೧೫ ನಿಮಿಷಗಳವರೆಗೆ ಕಾಲುಗಳನ್ನಿಟ್ಟು ದೇವತೆಯ ನಾಮಜಪ ಮಾಡುವುದರಿಂದ ಶರೀರ ಮತ್ತು ಮನಸ್ಸಿನಲ್ಲಿನ ರಜ-ತಮವು ಕಡಿಮೆಯಾಗಿ ಮನಸ್ಸಿನ ಏಕಾಗ್ರತೆಯು ಹೆಚ್ಚಾಗಲು ಸಹಾಯವಾಗುತ್ತದೆ.