ದೃಢನಿಶ್ಚಯಿ ವಿವೇಕಾನಂದ




ಜಯಪುರದಲ್ಲಿರುವಾಗ ಸ್ವಾಮಿ ವಿವೇಕಾನಂದರು ಪಾಣಿನಿಯ ಸಂಸ್ಕೃತ ವ್ಯಾಕರಣ ಕಲಿಯಲು ಅಲ್ಲಿಯ ಒಬ್ಬ ಪ್ರಸಿದ್ಧ ಪಂಡಿತರ ಬಳಿ ಹೋಗುತ್ತಿದ್ದರು. ಪಂಡಿತರು ಮೊದಲನೆಯ ಸೂತ್ರವನ್ನು ಅವರಿಗೆ ಹಲವು ಬಗೆಯಿಂದ ಹೇಳಿಕೊಟ್ಟರೂ ಅವರಿಗೆ ಅದು ಬರುತ್ತಿರಲಿಲ್ಲ. ಮೂರು ದಿವಸ ಪ್ರಯತ್ನ ಮಾಡಿದ ನಂತರ ಪಂಡಿತರು ಹೇಳಿದರು, "ಮೂರು ದಿವಸ ಪ್ರಯತ್ನ ಮಾಡಿದರೂ ನಾನು ನಿಮಗೆ ಒಂದು ಸೂತ್ರವನ್ನೂ ಕಲಿಸಲು ವಿಫಲನಾಗಿದ್ದೇನೆ. ಆದ್ದರಿಂದ ನೀವು ನನ್ನ ಬಳಿ ಕಲಿಯುವುದರ ಲಾಭವಿಲ್ಲ ಎಂದು ನನಗನಿಸುತ್ತದೆ". ಪಂಡಿತರ ಮಾತು ಕೇಳಿ ವಿವೇಕಾನಂದರಿಗೆ ತುಂಬಾ ದುಃಖವಾಯಿತು. ಎಲ್ಲಿಯ ವರೆಗೆ ಸೂತ್ರವನ್ನು ನಾನು ಅರಿಯುವುದಿಲ್ಲವೋ ಅಲ್ಲಿಯ ವರೆಗೆ ಊಟತಿಂಡಿ ಏನೂ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿದರು. ಅವರು ಏಕಾಗ್ರ ಚಿತ್ತದಿಂದ ಸೂತ್ರದ ಅಭ್ಯಾಸ ಮಾಡಿದರು. ನಂತರ ಪಂಡಿತರ ಬಳಿಗೆ ಹೋದರು. ಸ್ವಾಮಿ ವಿವೇಕಾನಂದರಿಂದ ಸೂತ್ರದ ಸಹಜ ಮತ್ತು ಸುಂದರವಾದ ವಿವರವನ್ನು ಕೇಳಿ ಪಂಡಿತರಿಗೆ ಆಶ್ಚರ್ಯವಾಯಿತು.

ಮಕ್ಕಳೇ, ’ಮನಸಿದ್ದರೆ ಮಾರ್ಗಎಂಬಂತೆ ದೃಢ ನಿರ್ಧಾರ ಮಾಡಿದರೆ ಯಾವುದನ್ನಾದರೂ ಸಾಧಿಸಬಹುದು.

Leave a Comment