ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಒಂದು ಪ್ರಸಂಗವನ್ನು ಇಲ್ಲಿ ನೀಡುತ್ತಿದ್ದೇವೆ. ಸರ್ವ ಧರ್ಮ ಸಮ್ಮೇಲನಕ್ಕಾಗಿ ಸ್ವಾಮಿ ವಿವೇಕಾನಂದರು ಭಾರತದ ಪ್ರತಿನಿಧಿಯಾಗಿ ಚಿಕಾಗೋ, ಅಮೇರಿಕಾಗೆ ಹೋಗಿದ್ದರು. ಅಲ್ಲಿ ಸ್ವಾಮಿ ವಿವೇಕಾನಂದರು ಎಲ್ಲ ಶ್ರೋತೃಗಳ ಮನಸ್ಸನ್ನು ಗೆದ್ದು ’ನ ಭೂತೋ ನ ಭವಿಷ್ಯತಿ’ ಎಂಬಂತೆ ಎಲ್ಲರ ಮೇಲೆ ಪ್ರಭಾವಬೀರಿದರು. ಇದರಿಂದಾಗಿ ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಪಾಶ್ಚಾತ್ಯರಿಗೆ ತಿಳಿಯಿತು. ಆಗ ಸ್ವಾಮಿ ವಿವೇಕಾನಂದರಿಗೆ ಅನೇಕ ಸಂಸ್ಥೆಗಳಿಂದ ವ್ಯಾಖ್ಯಾನ ನೀಡಬೇಕೆಂದು ಆಮಂತ್ರಣ ಬರಲು ಶುರುವಾಯಿತು. ಅಲ್ಲಿ ಅವರು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗದ ಬಗ್ಗೆಅನೇಕ ವಿಷಯಗಳನ್ನುಮಂಡಿಸಿದರು. ಎಲ್ಲಾ ಶ್ರೋತೃಗಳು ಮಂತ್ರಮುಗ್ಧರಾಗಿ, ಸಮಯದರಿವಿಲ್ಲದೆ ಸ್ವಾಮೀಜಿಯವರ ಮಾತನ್ನು ಕೇಳುತ್ತಿದ್ದರು. ಜನರಿಗೆ ಇನ್ನೂ ಮುಂದಿನ ವಿಷಯ ಕೇಳಬೇಕೆಂದು ತೀವ್ರ ಇಚ್ಛೆ ಉಂಟಾಗುತ್ತಿತ್ತು.
ಇಂತಹಒಂದು ಕಾರ್ಯಕ್ರಮ ಮುಗಿದ ನಂತರ ಶ್ರೋತೃಗಳು ಸ್ವಾಮಿ ವಿವೇಕಾನಂದರನ್ನು ತೀವ್ರ ಜಿಜ್ಞಾಸೆಯಿಂದ ಪ್ರಶ್ನೆಗಳನ್ನು ಕೇಳಿದರು, "ಹೇ ಮಹಾನ ಸಂನ್ಯಾಸಿ, ನೀವು ಈ ಅಲೌಕಿಕ ಜ್ಞಾನವನ್ನು ಯಾವ ಶಾಲೆಯಲ್ಲಿ ಅಥವಾ ವಿಶ್ವವಿದ್ಯಾಲಯದಲ್ಲಿ ಕಲಿತಿರಿ? ಕೃಪೆ ಮಾಡಿ ನಮಗೆ ವಿಸ್ತಾರವಾಗಿ ಹೇಳಿರಿ". ಅದಕ್ಕೆ ಸ್ವಾಮಿ ವಿವೇಕಾನಂದರು, "ಅವಶ್ಯವಾಗಿ, ಈ ಜ್ಞಾನವು ನನಗೆ ಕೇವಲ ನನ್ನ ಗುರುಗಳಿಂದ ಸಿಕ್ಕಿದೆ" ಎಂದು ಹೇಳಿದರು. ಆಗ ಶ್ರೋತೃಗಳು ಅಧೀರರಾಗಿ, "ನಿಮ್ಮ ಗುರುಗಳು ಯಾರು?" ಎಂದು ಕೇಳಿದರು. ಆಗ ಸ್ವಾಮಿ ವಿವೇಕಾನಂದರು ಹೇಳಿದರು, "ನಿಮಗೆ ಈ ಬಗ್ಗೆ ತಿಳಿಯಲು ತೀವ್ರ ಜಿಜ್ಞಾಸೆ ಇದ್ದರೆ ನಾನು ಅವಶ್ಯವಾಗಿ ಹೇಳುವೆನು". ಅದೇ ದಿವಸ ಸ್ವಾಮಿ ವಿವೇಕಾನಂದರ ವಿಶೇಷ ಪ್ರವಚನದ ಆಯೋಜನೆಯನ್ನು ಮಾಡಲಾಯಿತು. ಪ್ರವಚನದ ಹೆಸರು ’ನನ್ನ ಗುರು’, ಇದರ ಕುರಿತು ವರ್ತಮಾನ ಪತ್ರಿಕೆಗಳಲ್ಲಿ ಪ್ರಸಿದ್ಧಿಯನ್ನು ನೀಡಲಾಯಿತು. ಹಾಗಾಗಿ ಕುತೂಹಲದಿಂದ ಶ್ರೋತೃಗಳ ಸಾಗರವೇ ಅಲ್ಲಿ ನಿರ್ಮಾಣವಾಯಿತು. ಪ್ರವಚನ ಶುರುವಾಗುವ ವೇಳೆ ಸ್ವಾಮಿ ವಿವೇಕಾನಂದರು ಎದ್ದು ವ್ಯಾಸಪೀಠಕ್ಕೆ ಬರುತ್ತಿದ್ದರು ಆಗ ಒಮ್ಮೆಲೆಶಾಂತಿನಿರ್ಮಾಣವಾಯಿತು. ನೆರೆದಿರುವ ಜನಸಾಗರವನ್ನು ನೋಡಿ ಸ್ವಾಮಿ ವಿವೇಕಾನಂದರಿಗೆ ಸದ್ಗುರುಗಳ ಬಗ್ಗೆ ಕೃತಜ್ಞತೆಯು ಉಕ್ಕಿ ಬಂತು. ಅವರು ಮಾತಾಡಲು ಶೂರು ಮಾಡಿದಾಗ ಮೊದಲು ಹೇಳಿದ್ದು ’ನನ್ನ ಗುರುದೇವ!‘ ಈ ವಾಕ್ಯವನ್ನು ಅತ್ಯಂತ ಭಾವಾವಸ್ಥೆಯಲ್ಲಿಉದ್ಗರಿಸಿದ್ದರು.
ಅವರು ಭಾವದಲ್ಲಿ ಹೇಳಿದ ಕಾರಣ ಅವರ ಕಣ್ಣಿನ ಮುಂದೆ ಸಾಕ್ಷಾತ್ ಗುರುಗಳ ರೂಪ ಕಾಣಿಸಿತು. ಇದರಿಂದಾಗಿ ಅವರ ಕಂಠ ಗದ್ಗದಿತವಾಯಿತು. ಕಣ್ಣುಗಳಿಂದ ಅಶ್ರುಗಳು ಬರಲಾರಂಭಿಸಿಮತ್ತುರೋಮಾಂಚಿತವಾಗಿ ನಡುಗಲಾರಂಭಿಸಿದರು. ಇದರಿಂದಾಗಿ ಅವರು ೧೦ ನಿಮಿಷ ಏನೂ ಹೇಳಲೇ ಇಲ್ಲ. ಅವರ ಈ ಅವಸ್ಥೆಯನ್ನು ನೋಡಿಶ್ರೋತೃಗಳು ಆಶ್ಚರ್ಯಚಕಿತರಾಗಿದ್ದರು. ಇದಕ್ಕೆ ಮುಂಚೆ ದೇಹಕ್ಕೆ ನೋವಾದಾಗ, ತುಂಬಾ ದುಃಖಕರ ಪ್ರಸಂಗ ನಡೆದಾಗ ಅಥವಾ ತಂದೆ–ತಾಯಿ, ನೆಂಟರ ಮೃತ್ಯುವಾದಾಗ ಮಾತ್ರ ಕಣ್ಣಲ್ಲಿ ನೀರು ಬರುವುದನ್ನು ಜನರು ನೋಡಿದ್ದರು. ಇದರಿಂದಾಗಿ ಜನರು ಸ್ವಾಮಿ ವಿವೇಕಾನಂದರನ್ನು ಹುಚ್ಚರಂತೆ ನೋಡಿದರು.
ಗುರೋರ್ಮೌನಂ ತು ವ್ಯಾಖ್ಯಾನಂ ಶಿಷ್ಯಸ್ತು ಛಿನ್ನಸಂಶಯಃ
ಅರ್ಥ :ಗುರುಗಳು ಮೌನದಲ್ಲಿ ಶಿಷ್ಯನಿಗೆ ಕಲಿಸಿದರು ಮತ್ತು ಶಿಷ್ಯನು ಮೌನದಲ್ಲಿ ಅದನ್ನು ಕಲಿತನು.
ಈ ಪ್ರಸಂಗದಿಂದ ಸ್ವಾಮಿ ವಿವೇಕಾನಂದರಲ್ಲಿ ಅವರ ಗುರುಗಳ ಬಗ್ಗೆ ಅಪಾರವಾದ ಭಾವಶಕ್ತಿ ಜಾಗೃತವಾಯಿತೆಂದು ಕಲಿಯಲು ಸಿಗುತ್ತದೆ.