೧. ಬ್ರಹ್ಮ : ಶಿಷ್ಯನಲ್ಲಿ ಗುಣಗಳನ್ನು ನಿರ್ಮಿಸುವುದು.
೨. ವಿಷ್ಣು : ಶಿಷ್ಯನಲ್ಲಿ ಭಕ್ತಿಭಾವವನ್ನು ಉಳಿಸುವುದು.
೩. ಮಹೇಶ್ವರ : ಶಿಷ್ಯನಲ್ಲಿರುವ ಅವಗುಣಗಳನ್ನು ನಾಶ ಮಾಡುವುದು.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ
ಈ ತ್ರಿದೇವರ ತತ್ತ್ವಗಳಲ್ಲಿ ಜಾಗೃತ ತತ್ತ್ವಕ್ಕನುಸಾರ ದತ್ತನ ಕಾರ್ಯ
ಅ. ಬ್ರಹ್ಮ ಮತ್ತು ವಿಷ್ಣು : ಈ ರೂಪದಲ್ಲಿ ದತ್ತನಿಂದ ಜ್ಞಾನದಾನದ ಕಾರ್ಯ ಆರಂಭವಾಗುತ್ತದೆ ಮತ್ತು ಅವನು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಾನೆ.
ಆ. ಶಿವ ಮತ್ತು ವಿಷ್ಣು:ಈ ರೂಪದಲ್ಲಿ ದತ್ತನು ದುಷ್ಟರನ್ನು ದಂಡಿಸುತ್ತಾನೆ.
ಇ. ವಿಷ್ಣು:ಈ ರೂಪದಲ್ಲಿ ದತ್ತನು ಜ್ಞಾನದಾನ, ಮಾರ್ಗದರ್ಶನ ಮತ್ತು ದುಷ್ಟರನ್ನು ದಂಡಿಸುವ ಸಾಮರ್ಥ್ಯ ಇರುವುದರಿಂದ ದತ್ತಾತ್ರೇಯನು ಈ ರೂಪದಲ್ಲಿ ಸತತವಾಗಿರುತ್ತಾನೆ.