ಸೃಷ್ಟಿಯ ನಿರ್ಮಿತಿಯ ನಂತರ ಪ್ರತ್ಯಕ್ಷ ಈಶ್ವರನೇ ಮನುಷ್ಯ ಪ್ರಾಣಿಗೆ ಮೋಕ್ಷಪ್ರಾಪ್ತಿಗೆ ಉಪಯೋಗವಾಗುವಂತಹ ಮತ್ತು ಚೈತನ್ಯದಿಂದ ತುಂಬಿ ತುಳುಕುವಂತಹ ಒಂದು ಭಾಷೆಯನ್ನು ನೀಡಿದನು. ಅದುವೇ ಸಂಸ್ಕೃತ ಭಾಷೆ. ಆದರೆ ಪ್ರಸ್ತುತ ದೇವವಾಣಿಯಾದ ಸಂಸ್ಕೃತದ ಅವಹೇಳನವಾಗುತ್ತಿದೆ. ಈ ಬಗ್ಗೆ ಕೆಲವು ಸತ್ಯಸಂಗತಿಗಳನ್ನು ಈ ಲೇಖನದ ಮೂಲಕ ನಿಮ್ಮ ಮುಂದಿಡುತ್ತಿದ್ದೇವೆ.
ಸಂಕಲನಕಾರರು: ಶ್ರೀ.ಸಂಜಯ ಮುಳ್ಯೆ, ರತ್ನಾಗಿರಿ.
ಶೇ.೧೦೦ರಷ್ಟು ಚೈತನ್ಯಮಯ ಭಾಷೆ!
ಸಂಸ್ಕೃತ ಭಾಷೆಯು ಹೇಗೆ ನಿರ್ಮಾಣವಾಯಿತು ಎಂದು ಹೇಳುವಾಗ ಪಾಶ್ಚಾತ್ಯರ ಹುಚ್ಚು ಹಿಡಿದ ಕೆಲವು ಜನರು, ಮೊದಲ ಬಾರಿಗೆ ಮನುಷ್ಯನಿಗೆ ತನ್ನ ಬಾಯಿಯಿಂದ ಸ್ವರವು ಬರುತ್ತದೆ ಎಂದು ತಿಳಿಯಿತು. ಆ ಧ್ವನಿಯಿಂದ ಗುರುತು, ಗುರುತುಗಳಿಂದ ಚಿಹ್ನೆ ಮತ್ತು ಚಿಹ್ನೆಗಳಿಂದ ಅಕ್ಷರಗಳಾದವು. ಅವುಗಳಿಂದ ವಸ್ತುಗಳ ಹೆಸರುಗಳು ಹೀಗೆ ಎಲ್ಲ ಭಾಷೆಗಳು ಮತ್ತು ಸಂಸ್ಕೃತ ಭಾಷೆಯೂ ನಿರ್ಮಾಣವಾಯಿತು ಎಂದು ಹೇಳುತ್ತಾರೆ, ಆದರೆ ಇದು ಸಂಪೂರ್ಣ ಸುಳ್ಳಾಗಿದೆ. ಈ ಸೃಷ್ಟಿಯು ಈಶ್ವರನ ಸಂಕಲ್ಪದಿಂದ ನಿರ್ಮಾಣವಾಯಿತು. ಮಾನವರ ನಿರ್ಮಿತಿಯ ನಂತರ ಮಾನವನಿಗೆ ಅವಶ್ಯವಾದಂತಹ ಎಲ್ಲವನ್ನೂ ಈಶ್ವರನೇ ನೀಡಿದನು. ಇಷ್ಟು ಮಾತ್ರವಲ್ಲದೇ ಮಾನವನಿಗೆ ಮುಂದೆ ಯಾವ ಅವಶ್ಯಕತೆಗಳು ನಿರ್ಮಾಣವಾಗಬಹುದು ಅವುಗಳನ್ನೂ ನೀಡುವ ವ್ಯವಸ್ಥೆಯನ್ನು ಈಶ್ವರನು ಮಾಡಿಟ್ಟಿದ್ದಾನೆ.
ತ್ರೇತಾಯುಗದಲ್ಲಿ ಶಬ್ದಾತೀತ ಜ್ಞಾನವನ್ನು ಗ್ರಹಿಸುವ ಕ್ಷಮತೆಯು ಜೀವಗಳಲ್ಲಿ ಕಡಿಮೆಯಾಯಿತು. ಆದುದರಿಂದ ಶಬ್ದಗಳ ಮಾಧ್ಯಮದಿಂದ ಜೀವಕ್ಕೆ ಜ್ಞಾನಪ್ರಾಪ್ತಿಯಾಗಿ ಮೋಕ್ಷಪ್ರಾಪ್ತಿಯು ಸುಲಭವಾಗಿ ಆಗಬೇಕೆಂದು ಶ್ರೀ ದತ್ತಗುರುಗಳು ಸಂಸ್ಕೃತ ಭಾಷೆಯನ್ನು ನಿರ್ಮಿಸಿದರು. ನಾವು ಈಶ್ವರ ಪ್ರಾಪ್ತಿಗಾಗಿ ಉಪಯೋಗಕ್ಕೆ ಬರುವಂತಹ ಈ ಭಾಷೆಯನ್ನು ಅಂದರೆ ಕಲ್ಪವೃಕ್ಷವನ್ನು ಕಿತ್ತೆಸೆದು ಆಂಗ್ಲರೂಪಿ ಪಾಪಾಸುಕಳ್ಳಿಯನ್ನು ಆಲಂಗಿಸಿ ಕೊಳ್ಳುತ್ತಿದ್ದೇವೆ. ಆಂಗ್ಲ ಭಾಷೆಯು ಆಸುರೀ ಭಾಷೆಯಾಗಿದೆ. ಕಪ್ಪು ಶಕ್ತಿಯನ್ನು ಹರಡಲು ಅಸುರರು ನಿರ್ಮಿಸಿದ ಈ ಭಾಷೆಯಲ್ಲಿ ಅದರ ಮೂಲ ಶಬ್ದಗಳು ಎಷ್ಟಿವೆ ಎಂಬುದನ್ನು ಯಾರೂ ಸರಿಯಾಗಿ ಹೇಳಲಾರರು. ವ್ಯಾಪಾರದ ನಿಮಿತ್ತ ದೇಶ ವಿದೇಶಗಳನ್ನು ಸುತ್ತುವಾಗ ಆಯಾಯ ಭಾಷೆಗಳಲ್ಲಿನ ಶಬ್ದಗಳನ್ನು ತಂದು ಆಂಗ್ಲಭಾಷೆಯು ಹಬ್ಬಿಕೊಂಡಿತು. ಇದಕ್ಕೆ ವಿರುದ್ಧವಾಗಿ ಸಂಸ್ಕೃತದ ಭಾಷಾಸಂಗ್ರಹ ಮತ್ತು ಶಬ್ದರಚನೆಯನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ ಇದೆ. ಸೂರ್ಯ ಮತ್ತು ಚಂದ್ರರಿಗೆ ಆಂಗ್ಲದಲ್ಲಿ ಒಂದೊಂದೇ ಹೆಸರಿದೆ. ಆದರೆ ಸೂರ್ಯ-ಚಂದ್ರರಿಗೆ ಸಂಸ್ಕೃತದಲ್ಲಿರುವ ಸಮಾನಾರ್ಥಕ ಶಬ್ದಗಳನ್ನು ಎಣಿಸಲು ಎರಡೂ ಕೈಗಳ ಬೆರಳುಗಳು ಕಡಿಮೆ ಬೀಳುತ್ತವೆ. ಉದಾ. ಸೂರ್ಯ ಶಬ್ದಕ್ಕೆ ಮಿತ್ರ, ರವಿ, ಸೂರ್ಯ, ಭಾನು ಇತ್ಯಾದಿ ಹೆಸರುಗಳಿವೆ. ಈ ದೇವಲೋಕ ಭಾರತೀಯ ಸುಸಂಸ್ಕೃತನವನ್ನು ಎಷ್ಟು ವರ್ಣಿಸುವುದು? ಲಕ್ಷಗಟ್ಟಲೆ ಶಬ್ದಗಳಿರುವ ಈ ಭಾಷೆಯಲ್ಲಿ ಬೀಗ ಎಂಬ ಅರ್ಥವಿರುವ ಶಬ್ದವಿಲ್ಲದಿರಲು ಕಾರಣವೇನಿರಬಹುದು? ಕೌತ್ಸನಿಗೆ ಗುರುದಕ್ಷಿಣೆ ನೀಡಲು ಸಾಧ್ಯವಾಗಬೇಕೆಂದು ಕುಬೇರನು ಚಿನ್ನದ ನಾಣ್ಯಗಳ ಮಳೆಯನ್ನು ಸುರಿಸಿದರೂ ಅದರಲ್ಲಿನ ಒಂದೇ ಒಂದು ನಾಣ್ಯವನ್ನೂ ಯಾರೂ ಎತ್ತಿಕೊಂಡಿರಲಿಲ್ಲ, ಕಳ್ಳತನವಾಗುತ್ತಿರಲಿಲ್ಲ. ಹಾಗಾಗಿ ಬೀಗ ಹಾಕುವ ಸಂಸ್ಕೃತಿ ಇರಲಿಲ್ಲ. ಈ ಭಾಷೆಯಲ್ಲಿ ಒಂದೇ ಒಂದು ಬೈಗುಳವಿಲ್ಲ. ಬೈಗುಳದ ಸಮೀಪಕ್ಕೆ ಅತ್ಯಂತ ಕಷ್ಟದಿಂದ ಕೊಂಡೊಯ್ಯುವಂತಹ ಒಂದೇ ಒಂದು ಶಬ್ದವಿದೆ, ಅದುವೇ ಮೂಢ (ಮೂರ್ಖ)! ಭಾಷೆಯ ಸುಸಂಸ್ಕೃತಿಯು ನಾಗರಿಕರಲ್ಲಿಯೂ ಮೂಡುತ್ತದೆ. ಹಾಗಾಗಿ ಸಂಸ್ಕೃತ ಕಲಿಯಿರಿ ಮತ್ತು ಸುಸಂಸ್ಕೃತರಾಗಿರಿ ಎಂದು ಹೇಳಬೇಕೆನಿಸುತ್ತದೆ.
ಯಾವತ್ತೂ ಭ್ರಷ್ಟವಾಗದಂತಹ ಭಾಷೆ!
ಸಂಸ್ಕೃತ ಭಾಷೆಯು ಹಿಂದೂ ಸಂಸ್ಕೃತಿಯ ದೊಡ್ಡ ಕೊಡುಗೆಯಾಗಿದೆ. ಹಿಂದೂಗಳಿಗೆ ನಾವು ಎಷ್ಟು ದೊಡ್ಡ ಸಂಸ್ಕೃತಿಯ ವಾರಸುದಾರರಾಗಿದ್ದೇವೆ ಎಂಬುದು ಸಂಸ್ಕೃತ ಭಾಷೆಯಿಂದಲೇ ತಿಳಿಯುತ್ತದೆ. ಅಮೇರಿಕನ್ ಕಳ್ಳರ ವಿರುದ್ಧ ಅರಶಿನದ ಪೇಟೆಂಟ್ ಕುರಿತಾದ ಹೋರಾಟವನ್ನು ಗೆಲ್ಲುವಾಗ ಸಂಸ್ಕೃತ ಭಾಷೆಯು ನಮಗೆ ಬಹಳ ಸಹಾಯಕ್ಕೆ ಬಂದಿತು. ಸಂಸ್ಕೃತ ಭಾಷೆಯ ಮೂಲ ಸ್ವರೂಪವು ಲಕ್ಷಗಟ್ಟಲೆ ವರ್ಷಗಳಿಂದ ಉಳಿದುಕೊಂಡು ಬರಲು ಅವುಗಳಲ್ಲಿನ ವ್ಯಾಕರಣದ ಪರಿಪೂರ್ಣತ್ವವೇ ಕಾರಣವಾಗಿದೆ. ಈ ಪರಿಪೂರ್ಣ ವ್ಯಾಕರಣದಿಂದಾಗಿ ಸಂಸ್ಕೃತ ಭಾಷೆಯನ್ನು ಇತರ ಭಾಷೆಗಳಂತೆ ಪ್ರದೇಶಕ್ಕನುಸಾರವಾಗಿ ಬರೆಯಲು ಆಗುವುದಿಲ್ಲ ಮತ್ತು ಅದರ ಶಬ್ದಗಳು ಪ್ರಾದೇಶಿಕ ಉಚ್ಚಾರಕ್ಕನುಸಾರವಾಗಿ ಬದಲಾಗುವುದಿಲ್ಲ. ಪ್ರದೇಶಾನುರೂಪವಾದ ಲೇಖನದ ಉದಾಹರಣೆಯನ್ನು ನೀಡುವುದಾದರೆ ಇಂಗ್ಲೆಂಡ್ ನಲ್ಲಿ colour(ಬಣ್ಣ) ಎಂದು ಬರೆಯಲಾಗುತ್ತದೆ ಮತ್ತು ಅಮೇರಿಕಾವು colour ಹೀಗೆ ಬರೆಯುವುದರಲ್ಲಿ ಧನ್ಯತೆಯನ್ನು ಕಾಣುತ್ತದೆ. ಸಂಸ್ಕೃತ ಭಾಷೆಯಲ್ಲಿ ಪ್ರಾದೇಶಿಕ ಉಚ್ಚಾರ ಎಂಬ ಹೆಸರಿಲ್ಲ. ಕಾಶ್ಮೀರದ ಪಂಡಿತರು ವೇದಗಳನ್ನು ಹೇಗೆ ಉಚ್ಚರಿಸುತ್ತಾರೆಯೋ ಅದೇ ರೀತಿ ಕೇರಳದ ಪಂಡಿತರೂ ಉಚ್ಚರಿಸುತ್ತಾರೆ. ಸಂಸ್ಕೃತಭಾಷೆಯನ್ನು ಅದರ ವ್ಯಾಕರಣದ ನಿಯಮಕ್ಕನುಸಾರ
ಸಮಾಸ-ಸಂಧಿಗಳಿಗನುಸಾರವಾಗಿಯೇ ಬರೆಯಬೇಕಾಗುತ್ತದೆ. ಹಾಗಾಗಿ ಅದು ಭ್ರಷ್ಟವಾಗುವ ಸಾಧ್ಯತೆಗಳಿಲ್ಲ. ಆದುದರಿಂದ ಅದರಲ್ಲಿನ ಪ್ರಾಚೀನ ಜ್ಞಾನಭಂಡಾರವೂ ಮೂಲಸ್ವರೂಪದಲ್ಲಿದ್ದ ಹಾಗೆಯೇ ಉಪಲಬ್ಧವಿದೆ. ಇದಾಯಿತು ಅಭಿಮಾನ ಪಡುವಂತಹ ವಿಷಯ.