ಬ್ರಿಟಿಷರ ಕಾಲದಲ್ಲಿ ಸಂಸ್ಕೃತಕ್ಕೆ ಗೌರವವಿತ್ತು. ಆಗ ಮ್ಯಾಟ್ರಿಕ್‌ನವರೆಗೆ ಸಂಸ್ಕೃತವು ಅವಶ್ಯಕವಾಗಿತ್ತು. ಸಂಸ್ಕೃತಕ್ಕೆ ಚಿತ್ರಕಲೆಯು ಪರ್ಯಾಯ ವಿಷಯವಾಗಿತ್ತು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಸಂಸ್ಕೃತವನ್ನೇ ಆರಿಸುತ್ತಿದ್ದರು. ಸ್ವಾತಂತ್ರ್ಯಾ ನಂತರ ಶಾಲಾ ಪಠ್ಯಕ್ರಮದಿಂದ ಸಂಸ್ಕೃತವನ್ನು ಕೀಳಾಗಿ ನೋಡಲು ಪ್ರಯತ್ನವಾಗುತ್ತಿದ್ದರೂ ಭಾರತದಲ್ಲಿನ ಕೆಲವು ಊರುಗಳು ಮಾತ್ರ ಸಂಸ್ಕೃತದ ಗುತ್ತಿಗೆಯನ್ನು ವಹಿಸಿಕೊಂಡಿವೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ‘ಮದ್ದೂರು’ ಎಂಬ ಊರಿನ ಜನರು ಪರಸ್ಪರರೊಂದಿಗೆ ಸಂಸ್ಕೃತದಲ್ಲಿಯೇ ಸಂಭಾಷಣೆ ಮಾಡುತ್ತಾರೆ. ಈ ಊರಿನ ರೈತರು ಮತ್ತು ತರಕಾರಿ ವ್ಯಾಪಾರಿಗಳು ಸಹ ಸಂಸ್ಕೃತದಲ್ಲಿಯೇ ಪರಸ್ಪರರೊಂದಿಗೆ ಮಾತನಾಡುತ್ತಾರೆ. ಮಧ್ಯಪ್ರದೇಶದ ರಾಜಗಡ ಜಿಲ್ಲೆಯ ‘ಝಿರಿ’ ಎಂಬ ಊರಿನ ಜನರು ಸಂಸ್ಕೃತ ಭಾಷೆಯಿಂದಲೇ ಎಲ್ಲ ವ್ಯವಹಾರಗಳನ್ನು ಮಾಡುತ್ತಾರೆ. ಊರಿನ ಕೆಲವು ಅಶಿಕ್ಷಿತ ಜನರಿಗೆ ಸಂಸ್ಕೃತದ ವ್ಯಾಕರಣ ತಿಳಿಯದಿದ್ದರೂ ಅವರು ಸಂಸ್ಕೃತವನ್ನು ಮಾತ್ರ ಉತ್ತಮವಾಗಿ ಮಾತನಾಡುತ್ತಾರೆ. ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ‘ಮೋಹದ’ ಎಂಬ ಊರಿನ ಜನರೆಲ್ಲರೂ ಸಂಸ್ಕೃತದಲ್ಲಿಯೇ ಸಂಭಾಷಣೆ ಮಾಡುತ್ತಾರೆ.