ಗಜಮುಖನೆ ಗಣಪತಿಯೇ ನಿನಗೆ ವಂದನೆ

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ…
||ಗಜಮುಖನೆ||

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಾ ಮಾಡಿ ಹರಸು ಎಂದೂ |೨|
ನಿನ್ನ ಸನ್ನಿ ಧಾನದಿ ತಲೆ ಭಾಗಿ ಕೈಯ್ಯ ಮುಗಿದು
ಬೇಡುವ ಭಕ್ತರಿಗೆ ನೀನೇ ದಯಾ ಸಿಂದು
||ಗಜಮುಖನೆ||

ಈರೇಳು ಲೋಕದ ಅನು ಅನುದಿನ
ಇಹ ಪರದ ಸಾಧನೆಗೆ ನೀನೇ ಕಾರಣ |೨ |
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ
||ಗಜಮುಖನೆ||

ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ |೨ |
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ
||ಗಜಮುಖನೆ||

Leave a Comment