ಸೆಪ್ಟೆಂಬರ್ ೨೪ ರಂದು ಮೇಡಂ ಭಿಕಾಜಿ ರುಸ್ತುಮ್ ಕಾಮಾ ಇವರ ಜಯಂತಿಯಿದೆ. ಆ ನಿಮಿತ್ತ ಅವರಲ್ಲಿದ್ದ ರಾಷ್ಟ್ರಾಭಿಮಾನವನ್ನು ನೋಡೋಣ ! ‘೨೧ ಆಗಸ್ಟ್ ೧೯೦೭ ! ಜರ್ಮನಿಯ ಸ್ಟೂಟ್‌ಗಾರ್ಟ್ ಎಂಬ ನಗರದಲ್ಲಿ ‘ಅಂತಾರಾಷ್ಟ್ರೀಯ ಸಮಾಜವಾದಿ ಪರಿಷತ್ತು’ ಸೇರಿತ್ತು. ಈ ಪರಿಷತ್ತಿಗಾಗಿ ಜಗತ್ತಿನಿಂದ ೧ ಸಾವಿರ ಪ್ರತಿನಿಧಿಗಳು ಇಲ್ಲಿಗೆ ಬಂದಿದ್ದರು. ಹಿಂದೂಸ್ಥಾನದ ಪ್ರತಿನಿಧಿಯ ಸಮಯ ಬಂದಾಗ ರಾಜ ಮನೆತನವೆಂದೆನಿಸುವ ಮತ್ತು ಅಪಾರ ಆತ್ಮ ವಿಶ್ವಾಸವಿರುವ ಓರ್ವ ಪ್ರೌಢ ಮಹಿಳೆಯು ವ್ಯಾಸಪೀಠದ ಮೇಲೆ ಬಂದಳು. ಅವಳು, ‘ಹಿಂದೂಸ್ಥಾನದಲ್ಲಿ ಬ್ರಿಟೀಷರ ರಾಜ್ಯವಿದೆ, ಅದು ಮುಂದುವರಿಯುವುದು ಹಿಂದಿ ಜನರ ಹಿತಕ್ಕೆ ಅತ್ಯಂತ ಬಾಧಕವಿದೆ ಮತ್ತು ಆತಂಕದ ವಿಷಯವಾಗಿದೆ. ಆದರ್ಶ ಸಾಮಾಜಿಕ ವ್ಯವಸ್ಥೆಯ ದೃಷ್ಟಿಯಿಂದ ಯಾವುದೇ ಜನರ ಮೇಲೆ ಸರ್ವಾಧಿಕಾರ ಅಥವಾ ಹಿಂಸಾತ್ಮಕ ಆಡಳಿತವಿರಬಾರದು; ಆದುದರಿಂದ ಜಗತ್ತಿನ ಸ್ವಾತಂತ್ರ್ಯದ ಎಲ್ಲ ಪ್ರೇರಕರು ಆ ಬಳಲಿದ ದೇಶದಲ್ಲಿರುವ ಎಲ್ಲ ಮಾನವೀ ಜನಸಂಖ್ಯೆಯ ಒಂದನೇ ಐದಂಶದ ಜನರನ್ನು ಪಾರತಂತ್ರದಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಸಹಾಯ ಮಾಡಬೇಕು !’ ಎಂದು ಠರಾವನ್ನು ಮಂಡಿಸಿದರು. ಈ ಠರಾವನ್ನು ಮಂಡಿಸಿದ ನಂತರ ಅವಳು ತಾನು ತಂದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದಳು. ಕಠೋರ ಧ್ವನಿಯಲ್ಲಿ ಆಂಗ್ಲ ಭಾಷೆಯಲ್ಲಿ ಅವಳು, ‘ಇದು ಹಿಂದೂಸ್ಥಾನದ ಸ್ವಾತಂತ್ರದ ಧ್ವಜವಾಗಿದೆ. ನೋಡಿ, ನೋಡಿ ! ಈಗ ಇದರ ಜನ್ಮವಾಗಿದೆ. ಸಭ್ಯ ಗೃಹಸ್ಥರೇ, ಎದ್ದೇಳಿ ಮತ್ತು ಈ ಧ್ವಜಕ್ಕೆ ನಮಸ್ಕರಿಸಿ’ ಎಂದು ನಾನು ನಿಮಗೆ ಕರೆ ನೀಡುತ್ತೇನೆ ಎಂದು ಹೇಳಿದಳು. ಈ ನಾಟ್ಯಪೂರ್ಣ ಘಟನೆಯಿಂದ ಆಶ್ಚರ್ಯಚಕಿತರಾದ ಎಲ್ಲ ಪ್ರತಿನಿಧಿಗಳು ಎದ್ದು ನಿಂತು ಹಿಂದೂಸ್ಥಾನದ ಪ್ರಥಮ ಸ್ವತಂತ್ರ ರಾಷ್ಟ್ರಧ್ವಜವನ್ನು ನಮಸ್ಕರಿಸಿದರು. – ಶ್ರೀ. ಸಂಜಯ ಮುಳ್ಯೆ, ಗೋವಾ.