ಭಾರತದಲ್ಲಿನ ಪ್ರಮುಖ ಶಿವಸ್ಥಾನಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹದಿಮೂರನೆಯ ಪಿಂಡಕ್ಕೆ ಕಾಲಪಿಂಡವೆನ್ನುತ್ತಾರೆ. ಕಾಲದ ಆಚೆಗೆ ಹೋಗಿರುವ ಪಿಂಡವೆಂದರೆ (ದೇಹವೆಂದರೆ) ಕಾಲಪಿಂಡ.
ಹನ್ನೆರಡು ಜ್ಯೋತಿರ್ಲಿಂಗಗಳು
೧. ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ
೨. ಆಂಧ್ರ ಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ
೩. ಮಧ್ಯಪ್ರದೇಶದಲ್ಲಿ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ
೪. ಮಹಾರಾಷ್ಟ್ರದ ಪಾರ್ಲಿ ವೈಜನಾಥ
೫. ಮಹಾರಾಷ್ಟ್ರದ ಭೀಮಾಶಂಕರ
೬. ಮಹಾರಾಷ್ಟ್ರದ ನಾಗನಾಥ
೭. ಮಹಾರಾಷ್ಟ್ರದ ನಾಶಿಕದ ತ್ರ್ಯಂಬಕೇಶ್ವರ
೮. ತಮಿಳುನಾಡಿನ ರಾಮೇಶ್ವರ
೯. ಉತ್ತರಪ್ರದೇಶದ ಘೃಶ್ನೇಶ್ವರ
೧೦. ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ
೧೧. ಉತ್ತರಪ್ರದೇಶದ ಓಂಕಾರನಾಥ
೧೨. ಉತ್ತರಪ್ರದೇಶದ ಕೇದಾರನಾಥ
ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠಮಾಂಡು (ನೇಪಾಳ) ದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ.
ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳ ಮಹತ್ವ
ಸಂತರು ಸಮಾಧಿಯನ್ನು ಸ್ವೀಕರಿಸಿದ ನಂತರ ಅವರ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿ ನಡೆಯುತ್ತದೆ. ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯಲಹರಿ ಮತ್ತು ಸಾತ್ತ್ವಿಕ ಲಹರಿಗಳ ಪ್ರಮಾಣವು ಹೆಚ್ಚಿರುತ್ತದೆ. ಹೇಗೆ ಸಂತರ ಸಮಾಧಿಯು ಭೂಮಿಯ ಕೆಳಗಿರುತ್ತದೆಯೋ, ಹಾಗೆಯೇ ಜ್ಯೋತಿರ್ಲಿಂಗಗಳು ಮತ್ತು ಸ್ವಯಂಭೂ ಶಿವಲಿಂಗಗಳು ಭೂಮಿಯ ಕೆಳಗಿರುತ್ತವೆ. ಈ ಶಿವಲಿಂಗಗಳಲ್ಲಿ ಇತರ ಶಿವಲಿಂಗಗಳ ತುಲನೆಯಲ್ಲಿ ನಿರ್ಗುಣ ತತ್ತ್ವದ ಪ್ರಮಾಣವು ಹೆಚ್ಚಿರುವುದರಿಂದ ಅವುಗಳಿಂದ ಚೈತನ್ಯ ಮತ್ತು ಸಾತ್ತ್ವಿಕತೆಯು ಹೆಚ್ಚು ಪ್ರಮಾಣದಲ್ಲಿ ಮತ್ತು ಸತತವಾಗಿ ಪ್ರಕ್ಷೇಪಿಸುತ್ತಿರುತ್ತದೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಸತತವಾಗಿ ಶುದ್ಧವಾಗುತ್ತಿರುತ್ತದೆ, ಅದರೊಂದಿಗೆ ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳಿಂದ ಪಾತಾಳದ ದಿಕ್ಕಿನಲ್ಲಿಯೂ ಸತತವಾಗಿ ಚೈತನ್ಯ ಮತ್ತು ಸಾತ್ತ್ವಿಕತೆಯ ಪ್ರಕ್ಷೇಪಣೆಯಾಗಿ ಪಾತಾಳದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಅವರ ಯುದ್ಧವು ಸತತವಾಗಿ ನಡೆಯುತ್ತಿರುತ್ತದೆ. ಇದರಿಂದ ಪಾತಾಳದಲ್ಲಿನ ಶಕ್ತಿಶಾಲಿ ಕೆಟ್ಟ ಶಕ್ತಿಗಳ ಹಲ್ಲೆಯಿಂದ ಭೂಲೋಕದ ರಕ್ಷಣೆಯಾಗುತ್ತದೆ.
ಜ್ಯೋತಿರ್ಲಿಂಗದ ಅರ್ಥ
೧. ವ್ಯಾಪಕ ಬ್ರಹ್ಮಾತ್ಮಲಿಂಗ ಅಥವಾ ವ್ಯಾಪಕ ಪ್ರಕಾಶ
೨. ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮ, ಮಾಯೆ, ಜೀವ, ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ ಮತ್ತು ಪಂಚಮಹಾಭೂತಗಳು ಎಂಬ ಹನ್ನೆರಡು ತತ್ತ್ವಗಳನ್ನು ಹನ್ನೆರಡು ಜ್ಯೋತಿರ್ಲಿಂಗಗಳೆಂದು ಕರೆಯಲಾಗಿದೆ.
ಪಂಚಮಹಾಭೂತಲಿಂಗಗಳು
ದಕ್ಷಿಣ ಭಾರತದಲ್ಲಿ ಪಂಚಮಹಾಭೂತಗಳ ಮುಂದಿನ ಐದು ಲಿಂಗಗಳಿವೆ:ಪೃಥ್ವಿ–ಶಿವಕಾಂಚಿ, ಜಲ–ಜಂಬುನಾಥ, ತೇಜ–ಅರುಣಾಚಲಮ್, ವಾಯು–ಕಾಳಹಸ್ತಿ ಮತ್ತು ಆಕಾಶ–ಚಿದಂಬರಮ್.
ಅಮರನಾಥ
ಇದು ಕಾಶ್ಮೀರದಲ್ಲಿನ ಪ್ರಸಿದ್ಧ ಶಿವಕ್ಷೇತ್ರವಾಗಿದೆ. ಇದು ನಿಸರ್ಗವು ನಿರ್ಮಿಸಿದ ಒಂದು ಗುಹೆಯಾಗಿದೆ. ಈ ಗುಹೆಯಲ್ಲಿರುವ ಶಿವಲಿಂಗವು ಸ್ವಯಂಭೂ ಲಿಂಗವಾಗಿದ್ದು, ಅದು ಹಿಮದಿಂದ ತಯಾರಾಗಿದೆ. ಅಮರನಾಥ ಯಾತ್ರೆಯು ಹಿಂದೂಗಳ ಒಂದು ಪವಿತ್ರ ತೀರ್ಥಯಾತ್ರೆಯಾಗಿದ್ದು ಪ್ರತಿವರ್ಷ ಲಕ್ಷಗಟ್ಟಲೆ ಹಿಂದೂ ಭಕ್ತರು ಅಮರನಾಥಕ್ಕೆ ಭೇಟಿ ನೀಡುತ್ತಾರೆ. ಅಮರನಾಥನ ಒಂದು ವೈಶಿಷ್ಟ್ಯವೇನೆಂದರೆ ಮುಸಲ್ಮಾನ ಭಕ್ತರೂ ಅವನ ದರ್ಶನಕ್ಕೆ ಹೋಗುತ್ತಾರೆ. ಅಮರನಾಥವು ಒಂದು ಪ್ರಸಿದ್ಧ ಶಕ್ತಿಪೀಠವೂ ಆಗಿದೆ.