ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಕೃತಿ ಮಾಡಿ ನಿಜವಾದ ಅರ್ಥದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸೋಣ !

೨೬ ಜನವರಿ ಈ ದಿನ ಭಾರತದ ಪ್ರಜಾಪ್ರಭುತ್ವ ದಿನ ಅಂದರೆ ಗಣರಾಜ್ಯೋತ್ಸವವಾಗಿದೆ. ಈ ಪ್ರಯುಕ್ತ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಂತಹ ಕೃತಿಗಳು ಹಾಗೂ ಆದರ್ಶ ಪ್ರಜಾಪ್ರಭುತ್ವವುಳ್ಳ ರಾಜ್ಯ ಬರುವುದಕ್ಕಾಗಿ ಅವಶ್ಯಕವಿರುವ ಬೇಡಿಕೆಗಳನ್ನು ಈ ಲೇಖನದಲ್ಲಿ ಮಂಡಿಸಲಾಗಿದೆ. ಈ ರೀತಿಯ ಕೃತಿ ಮಾಡುವುದರಿಂದ ಆದರ್ಶ ಪ್ರಜಾಪ್ರಭುತ್ವದ ರಾಜ್ಯ ಬರುತ್ತದೆ ಹಾಗೂ ಆಗಲೇ ಕ್ರಾಂತಿಕಾರರು ದೇಶಕ್ಕಾಗಿ, ಪರ್ಯಾಯವಾಗಿ ನಮಗಾಗಿ ಮಾಡಿದ ಬಲಿದಾನದ ಋಣವನ್ನು ನಿಜಾರ್ಥದಲ್ಲಿ ತೀರಿಸಬಹುದು.

ವಿದ್ಯಾರ್ಥಿ ಮಿತ್ರರೇ, ನಾವು ಪೌರನೀತಿಯಲ್ಲಿ ಪ್ರಜಾಪ್ರಭುತ್ವದ ವಾಖ್ಯೆಯನ್ನು ಕಲಿತುಕೊಂಡಿದ್ದೇವೆ. ಪ್ರಜೆಗಳು ಪ್ರಜೆಗಳ ಕಲ್ಯಾಣಕ್ಕಾಗಿ ನಡೆಸುತ್ತಿರುವ ರಾಜ್ಯವೆಂದರೆ ಪ್ರಜಾಪ್ರಭುತ್ವ, ಅಂದರೆ ಪ್ರಜಾತಂತ್ರ. ಆದರೆ ಮಿತ್ರರೇ, ಇಂದು ನಿಜವಾದ ಅರ್ಥದಲ್ಲಿ ಪ್ರಜೆಗಳ ರಾಜ್ಯವಿದೆಯೇ? ಇಲ್ಲವಲ್ಲ? ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಇಂದಿನ ದಯನೀಯ ಸ್ಥಿತಿಯ ಹಿಂದಿರುವ ಕಾರಣಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ.


ರಾಷ್ಟ್ರಾಭಿಮಾನದ ಅಭಾವವೇ ದೇಶದ ಎಲ್ಲ ಸಮಸ್ಯೆಗಳ ಹಿಂದಿನ ಕಾರಣ

ಇಂದು ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ದೇಶದಲ್ಲಿ ಭ್ರಷ್ಟಾಚಾರವು ಕೋಲಾಹಲವೆಬ್ಬಿಸಿದೆ. ದೇಶದ ಗಡಿಗಳು ಕೂಡ ಸುರಕ್ಷಿತವಾಗಿಲ್ಲ. ದೇಶದ ಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮೆಲ್ಲರ ಅಸ್ತಿತ್ವಕ್ಕೂ ಧಕ್ಕೆಯುಂಟಾಗುವುದು. ಇದಕ್ಕಾಗಿ ನಾವು ದೇಶದ ಭಾವೀ ಪ್ರಜೆಗಳು ಎಂಬ ಸಂಬಂಧದಿಂದ ಈ ವಿಷಯದ ಬಗ್ಗೆ ಗಂಭೀರವಾದ ವಿಚಾರ ಮಾಡಿ ಉಪಾಯವನ್ನು ಹುಡುಕಬೇಕಾಗಿದೆ, ಆಗಲೇ ಮುಂಬರುವ ಭಾರತವು ಆದರ್ಶ ಹಾಗೂ ಸುಜಲಾಂಸುಫಲಾಂ ಆಗುತ್ತದೆ. ಮಿತ್ರರೇ ನಮ್ಮೆಲ್ಲರಲ್ಲಿರುವ ರಾಷ್ಟ್ರಾಭಿಮಾನದ ಅಭಾವವೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ನನಗೆ ಅನಿಸುತ್ತದೆ. ನಾನು ಮಾಡುವ ಪ್ರತಿಯೊಂದು ಕೃತಿಯನ್ನು ನನ್ನಲ್ಲಿ ಹಾಗೂ ಇತರರಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗುವಂತೆಯೇ ಮಾಡುವೆನು ಎಂದು ನಾವು ಇಂದಿನಿಂದ ನಿರ್ಧರಿಸಬೇಕಾಗಿದೆ.

ಈಗಿನ ಪ್ರಜಾಪ್ರಭುತ್ವ ಹಾಗೂ ಆದರ್ಶ ಪ್ರಜಾಪ್ರಭುತ್ವದಲ್ಲಿನ ರಾಜಕಾರಣಿಗಳು

ಈಗಿನ ಪ್ರಜಾಪ್ರಭುತ್ವದ ರಾಜಕಾರಣಿಗಳು  ಆದರ್ಶ ಪ್ರಜಾಪ್ರಭುತ್ವದ ರಾಜಕಾರಣಿಗಳು
. ವಿಚಾರ  ಸ್ವಾರ್ಥಿ   ತಮ್ಮ ಬಗ್ಗೆ ವಿಚಾರ ಮಾಡುವಂತಹ ರಾಷ್ಟ್ರವೇ ನನ್ನ ಕುಟುಂಬವಾಗಿದೆ’, ಎಂದು ವಿಶಾಲವಾದ ಹಾಗೂ ಕಲ್ಯಾಣದ ವಿಚಾರ ಮಾಡುವವರು  
ಜನರಿಗೆ ಏನು ನೀಡುವರು  ದುಃಖ   ಆನಂದ  
ವೃತ್ತಿ  
.     ಸುಳ್ಳು ಹೇಳುವ   ಸತ್ಯ ಹೇಳುವ  
.    ಅಹಂಕಾರಿ   ನಮ್ರತೆ  
.    ಭ್ರಷ್ಟಾಚಾರಿಗಳು    ತನುಮನಧನ ಹಾಗೂ ಪ್ರಸಂಗ ಬಂದರೆ ಪ್ರಾಣವನ್ನು ತ್ಯಜಿಸುವಂತಹ  
ರಾಷ್ಟ್ರಾಭಿಮಾನ ರಾಷ್ಟ್ರಾಭಿಮಾನಶೂನ್ಯ ರಾಷ್ಟ್ರಾಭಿಮಾನಿ  
ದೇವರು ಹಾಗೂ ಧರ್ಮ   ಒಪ್ಪಿಕೊಳ್ಳದಿರುವ   ಶ್ರದ್ಧೆಯಿರುವ  

ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಸಲುವಾಗಿ ಮಾಡಬೇಕಾಗಿರುವ ಕೃತಿಗಳು

ವಿದ್ಯಾರ್ಥಿ ಮಿತ್ರರೇ  ಇಂತಹ ಪರಿಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ಕೆಳಗೆ ನೀಡಿದಂತೆ ಕೃತಿ ಮಾಡಲು ಇಂದಿನಿಂದಲೇ ನಿರ್ಧರಿಸೋಣ.

. ಧ್ವಜದ ಅಪಮಾನವನ್ನು ತಡೆಯುವುದು.

. ಕ್ರಾಂತಿಕಾರರ ಚರಿತ್ರೆಯ ಅಧ್ಯಯನ ಮಾಡಿ ಅವರ ಮೌಲ್ಯಗಳನ್ನು ಕೃತಿಯಲ್ಲಿ ತರುವುದು.

. ದೇಶಭಕ್ತಿ ಹಾಡುಗಳನ್ನು ಕಂಠಪಾಠ ಮಾಡುವುದು ಹಾಗೂ ಅದನ್ನು ಸಮೂಹದಲ್ಲಿ ಹಾಡುವುದು.

. ಕ್ರಾಂತಿಕಾರರ ಘೋಷವಾಕ್ಯಗಳನ್ನು ಹಾಗೂ ಅವರ ಚಿತ್ರಗಳನ್ನು ಮನೆಯಲ್ಲಿ ಹಾಕುವುದು.

. ಯಾವುದಾದರೊಬ್ಬ ಕ್ರಾಂತಿಕಾರರನ್ನು ನಮಗೆ ಆದರ್ಶವಾಗಿ ಆರಿಸುವುದು.

. ಸ್ನೇಹಿತರ ಜನ್ಮದಿನದಂದು ಕ್ರಾಂತಿಕಾರರ ಚಿತ್ರ ಅಥವಾ ಅವರ ಬಗ್ಗೆ ಮಾಹಿತಿ ನೀಡುವ ಸಣ್ಣ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವುದು.

. ತಮ್ಮ ಶಾಲೆಗಳಲ್ಲಿ ಸಂಪೂರ್ಣ ವಂದೇ ಮಾತರಂಅನ್ನು ಹೇಳಲು ಆಗ್ರಹ ಮಾಡುವುದು.

. ರಾಷ್ಟ್ರಗೀತೆಯ ಅಪಮಾನವಾಗುತ್ತಿದ್ದರೆ ಅದನ್ನು ತಡೆಯುವುದು.

. ಕ್ರಾಂತಿಕಾರರ ಜೀವನದ ಮೇಲಾಧರಿಸಿದ ಚರ್ಚಾಕೂಟಗಳನ್ನು ಆಯೋಜಿಸುವುದು.

೧೦. ಪ್ರತಿಜ್ಞೆಯಂತೆ ನಡೆದುಕೊಳ್ಳುವುದು.

೧೧. ಕ್ರಾಂತಿಕಾರರ ಹಾಗೂ ದೇಶಭಕ್ತರ ಚಿತ್ರಗಳ ಪ್ರದರ್ಶನವನ್ನು ಆಯೋಜಿಸುವುದು.

೧೨. ಕ್ರಾಂತಿಕಾರರ ಚಿತ್ರಗಳಿಗೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಆಯೋಜಿಸುವುದು.

೧೩. ದೇಶಭಕ್ತಿಯನ್ನು ಮೂಡಿಸುವಂತಹ ಚಲನಚಿತ್ರ ಹಾಗೂ ಧಾರಾವಾಹಿಗಳನ್ನು ನೋಡುವುದು.

ಸ್ನೇಹಿತರೇ, ಮೇಲೆ ನೀಡಿರುವಂತಹ ಪ್ರತಿಯೊಂದು ಅಂಶಗಳನ್ನೂ ನಾವು ಆಚರಿಸಿದಾಗ ಅದು ನಿಜವಾದ ಪ್ರಜಾಪ್ರಭುತ್ವವಾಗಿರುತ್ತದೆ. ನಾವು ಪ್ರತಿಯೊಂದು ಅಂಶಗಳನ್ನು ಕೃತಿಯಲ್ಲಿ ತಂದುಕೊಳ್ಳೋಣ ಹಾಗೂ ನಮ್ಮ ಮಿತ್ರರಿಗೂ ಹಾಗೆ ಮಾಡಲು ಆಗ್ರಹಿಸೋಣ.

ದೇಶಪ್ರೇಮ ಜಾಗೃತಗೊಳಿಸುವ ಸಲುವಾಗಿ ಹಾಗೂ ಆದರ್ಶ ಪ್ರಜಾಪ್ರಭುತ್ವ ರಾಜ್ಯ ತರಲು ಮಾಡಬೇಕಾದ ಕೆಲವು ಬೇಡಿಕೆಗಳು

ಪ್ರಜಾಪ್ರಭುತ್ವ ದಿನದ ನಿಮಿತ್ತವಾಗಿ ನಾವು ಓರ್ವ ವಿದ್ಯಾರ್ಥಿ ಎಂದು ಕೆಲವು ಬೇಡಿಕೆಗಳನ್ನು ಮಾಡೋಣ. ಈ ಬೇಡಿಕೆಗಳೇನಾದರೂ ಈಗಿನ ರಾಜಕಾರಣಿಗಳು ಸ್ವೀಕರಿಸಿದರೆ, ಆಗ ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳ್ಳುತ್ತದೆ ಹಾಗೂ ಶೀಘ್ರವಾಗಿ ಆದರ್ಶ ಪ್ರಜಾಪ್ರಭುತ್ವ ರಾಜ್ಯ ಬರುವುದು. ಈ ಬೇಡಿಕೆಗಳಂತೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾಗಲಿ, ಎಂಬುದೇ ಭಗವಂತನ ಚರಣಗಳಲ್ಲಿ ಪ್ರಾರ್ಥನೆ !

. ಪ್ರಜಾಪ್ರಭುತ್ವ ದಿನದಂದು ಆಗುವ ರಾಷ್ಟ್ರಧ್ವಜದ ವಿಡಂಬನೆಯನ್ನು ನಿಲ್ಲಿಸಿ !

. ರಾಷ್ಟ್ರೀಯ ಶಿಕ್ಷಣದಲ್ಲಿ ಸಮಾನತೆಯಿರಬೇಕು. ಅಂತಾರಾಷ್ಟ್ರೀಯ, ಕೇಂದ್ರಸರಕಾರ ಹಾಗೂ ರಾಜ್ಯ ಹೀಗೆ ಶಿಕ್ಷಣವನ್ನು ತುಂಡರಿಸಿ ನಮ್ಮಲ್ಲಿರುವ ರಾಷ್ಟ್ರೀಯತೆಯ ಭಾವನೆಯನ್ನು ನಾಶಗೊಳಿಸಬೇಡಿ.

. ಪ್ರತಿಯೊಬ್ಬನಿಗೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಸಿಗಬೇಕು.

. ನಮಗೆ ಸೈನ್ಯದ ಶಿಕ್ಷಣವನ್ನು ನೀಡಿ.

. ನಮ್ಮಲ್ಲಿ ದೇಶಪ್ರೇಮ ನಿರ್ಮಿಸಿದಂತಹ ಆದರ್ಶ ಕ್ರಾಂತಿಕಾರರ ಅಪಕೀರ್ತಿ ಆಗಲು ಬಿಡಬೇಡಿ.

. ನಮ್ಮಲ್ಲಿರುವ ಸಂಘಭಾವನೆ ಹೆಚ್ಚಾಗಲೆಂದು ಜಾತಿ, ಧರ್ಮ ಹಾಗೂ ಪಂಥ ಇವುಗಳಡಿ ನಮ್ಮನ್ನು ವಿಂಗಡಿಸಬೇಡಿ.

. ಪ್ರಜಾಪ್ರಭುತ್ವದ ದಿನವನ್ನು ತಿಥಿಗನುಸಾರವಾಗಿ ಆಚರಿಸಿ.

. ನಮಗೆ ಸಿಕ್ಕಿರುವ ಅಂಕಗಳಿಗನುಸಾರ (ಮಾರ್ಕ್ಸ್) ವಿದ್ಯಾಲಯದಲ್ಲಿ ಪ್ರವೇಶ ನೀಡಿ, ಮೀಸಲಾತಿ ಬೇಡ.

. ಎಲ್ಲಾ ಶಾಲೆಗಳಲ್ಲಿಯೂ ಸಂಪೂರ್ಣ ವಂದೇ ಮಾತರಂ ಹೇಳುವುದನ್ನು ಕಡ್ಡಾಯಗೊಳಿಸಿ.

. ಎಲ್ಲಾ ಶಾಲೆಗಳಲ್ಲಿನ ಪ್ರಾರ್ಥನೆ ಒಂದೇ ರೀತಿಯಲ್ಲಿ ಇರಲಿ.

ಶಾಲೆಯ ಸಮವಸ್ತ್ರ ಆಂಗ್ಲರಂತೆ, ಉದಾ. ಟೈ, ಟೀ ಶರ್ಟ್ ಹೀಗೆ ಬೇಡ.

ವಿದ್ಯಾರ್ಥಿ ಮಿತ್ರರೇ, ಈ ಮೇಲಿನ ಎಲ್ಲಾ ಅಂಶಗಳನ್ನು ಆಚರಣೆಗೆ ತರುವುದಕ್ಕಾಗಿ ನಾವು ಈ ಪ್ರಜಾಪ್ರಭುತ್ವದ ದಿನದಂದು ನಿಶ್ಚಯಿಸೋಣ.’

ಶ್ರೀ. ರಾಜೇಂದ್ರ ಪಾವಸಕರ (ಗುರುಜಿ), ಪನವೇಲ್.

Leave a Comment