ರಂಗಪಂಚಮಿ ಎಂದರೆ ಸ್ತ್ರೀಯರ ಮೇಲೆ ಬಲೂನ ಎಸೆಯುವ ವಿಕೃತಿ!
‘ರಂಗಪಂಚಮಿಯ ಉದಾಹರಣೆ ನೀಡುವುದಿದ್ದರೆ ಈ ರಂಗಪಂಚಮಿಯ ಆಟದಲ್ಲಿ ಪರಸ್ಪರ ಬಣ್ಣವನ್ನು ಎರಚುವುದಿರುತ್ತದೆ. ಹಿಂದೆ ಈ ಆಟವನ್ನು ತಮ್ಮ ಪರಿಚಯದವರೊಂದಿಗೆ ಆಡಲಾಗುತ್ತಿತ್ತು. ಭಗವಾನ ಶ್ರೀಕೃಷ್ಣನು ಮಥುರಾ ಮತ್ತು ವೃಂದಾವನದಲ್ಲಿ ಗೋಪ-ಗೋಪಿಯರೊಂದಿಗೆ ರಂಗಪಂಚಮಿ ಆಡಿದ ದಾಖಲೆಗಳಿವೆ. ಅದರ ಮೇಲಿನ ಕಾವ್ಯ ಮತ್ತು ಚಿತ್ರಗಳು ಜನಪ್ರಿಯತೆ ಪಡೆದಿವೆ, ಆದರೆ ಇಂದು ರಂಗಪಂಚಮಿಯಲ್ಲಿ ಹಿಂದಿನಭಾವಉಳಿದಿಲ್ಲ. ರಂಗ ಪಂಚಮಿಯ ೧೫ದಿನಗಳಿಗಿಂತ ಮುಂಚಿನಿಂದಲೂ ನೀರಿನಿಂದ ತುಂಬಿದ ಪುಗ್ಗೆಯನ್ನು ಹುಡುಗಿಯರ ಮತ್ತು ಮಹಿಳೆಯಯರ ಮೇಲೆ ಎಸೆಯಲಾಗುತ್ತಿದೆ. ವಾಹನದಲ್ಲಿ ಪ್ರಯಾಣ ಮಾಡುವ ಎಷ್ಟೋ ಪ್ರವಾಸಿಗರಿಗೆ ಇದರ ಅನುಭವವಾಗಿದೆ. ಇದರಿಂದ ಕೆಲವರಿಗೆ ಜೀವಮಾನವಿಡಿ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗಿದೆ. ಇದರ ವಿರುದ್ಧ ಕಾನೂನನ್ನು ತಯಾರಿಸಲಾಗಿದೆ, ಆದರೆ ಸಾಕಾಗುವುದಿಲ್ಲ. ಇಂದಿಗೂ ಬಲೂನು ಎಸೆಯುವುದು ರಾಜಾರೋಷವಾಗಿ ನಡೆಯುವುದು ಕಂಡುಬರುತ್ತಿದೆ. ಇದನ್ನು ಒಂದು ರೀತಿಯ ವಿಕೃತಿ ಎಂದು ಹೇಳಬಹುದು. ಶಾಲೆಯಿಂದಲೇ ಈ ವಿಷಯವು ಆರಂಭವಾಗಿರುವುದು ಕಂಡು ಬರುತ್ತಿದೆ. ಇಂತಹರಂಪಾಟದಿಂದ ರಂಗಪಂಚಮಿಯು ಬಣ್ಣ ಕಳೆದುಕೊಂಡಂತಾಗಿದೆ.
ಕಳ್ಳತನ, ಮಾರಣಾಂತಿಕ ಜಗಳ ಮತ್ತು ಅಪಾಯಕಾರಿ ವಸ್ತುಗಳ ಆಹುತಿಯೆಂದರೆ ಹೋಳಿ!
ಹೋಳಿ ಆಚರಿಸುವ ತಪ್ಪುಪದ್ಧತಿ ಈಗ ಹಳ್ಳಿಹಳ್ಳಿಗೂ ಹರಡಿದೆ ಮತ್ತು ಅದರಿಂದ ಮಾರಣಾಂತಿಕ ಜಗಳಗಳ ಪ್ರಾರಂಭವಾಯಿತು. ಇನ್ನೊಂದು ಊರಿನಿಂದ ಕಟ್ಟಿಗೆ ಕದ್ದು ತರುವುದು ಮತ್ತು ಅದಕ್ಕಾಗಿ ಜಗಳವಾಡುವುದು, ಇದರಿಂದ ಹೋಳಿ ಕಲುಷಿತವಾಯಿತು. ಹೋಳಿಗಾಗಿ ಚಂದಾ ಬೇಡುವುದು ಮತ್ತು ಆ ಹಣವನ್ನು ಮಾದಕ ದ್ರವ್ಯಕ್ಕಾಗಿ ಖರ್ಚು ಮಾಡುವುದು. ಹೋಳಿಯೆದುರು ಬೊಬ್ಬೆ ಹೊಡೆಯುವುದು, ಅಸಭ್ಯವಾಗಿ ವರ್ತಿಸುವುದು ಹೀಗೆ ಈ ಹಬ್ಬವನ್ನು ಆಚರಿಸಲಾಯಿತು. ಇದರಿಂದ ಸುಸಂಸ್ಕೃತ ಮತ್ತು ಸಭ್ಯ ಜನರಿಗೆ ಇದು ಇಷ್ಟವಾಗಲಿಲ್ಲ.
ಧೂಳಿವಂದನ ಅಂದರೆ ಪರಸ್ಪರ ದೋಷಾರೋಪಣೆ !
ಹಿಂದೆ ಧೂಳಿವಂದನದ ಉದ್ದೇಶವು ಚೆನ್ನಾಗಿತ್ತು. ಆ ನಿಮಿತ್ತ ಊರು ಸ್ವಚ್ಛವಾಗುತ್ತಿತ್ತು. ಯುವಕರು ಊರನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಪ್ರಯತ್ನಿಸುತ್ತಿದ್ದರು, ಆದರೆ ಈಗ ಅದರಲ್ಲಿ ಹೊಡೆದಾಟ-ಬಡಿದಾಟ ಪ್ರಾರಂಭವಾಯಿತು ಮತ್ತು ಧೂಳಿವಂದನದ ಸ್ವರೂಪವು ದೋಷಾರೋಪಣೆಯಾಯಿತು