೧.ಯುಗಾದಿಯಂದು ಆದಷ್ಟು ಹೆಚ್ಚು ಮಿತ್ರರಿಗೆ ಶುಭಾಶಯ ಪತ್ರ, ದೂರವಾಣಿ, ಕಿರುಸಂದೇಶ (ವಾಟ್ಸಾಪ್) ಮೂಲಕ ಹೊಸವರ್ಷದ ಶುಭಾಶಯ ನೀಡಲು ಹೇಳಿ!
೨.ಈ ಶುಭದಿನ ಒಳ್ಳೆಯ ಕಾರ್ಯ ಮಾಡಿದರೆ ಅದು ಹೆಚ್ಚು ಫಲಪ್ರದವಾಗಿರುತ್ತದೆ. ಹಾಗಾಗಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಪ್ರತಿದಿನ ೧ ಗಂಟೆ ನೀಡುವ ನಿರ್ದಾರ ಮಾಡಿ!
೩. ನಿಮ್ಮ ಮನೆಯವರಿಗೂ ಹಾಗೂ ಪರಿಚಯದವರಿಗೂ ಮೇಲಿನ ವಿಷಯಗಳ ಬಗ್ಗೆ ತಿಳಿಸಿಹೇಳಲು ಮತ್ತು ಆಚರಣೆಗೆತರಲು ಹೇಳಿ!
೪. ಶುಭಾಶಯ ನೀಡುವಾಗ ಹಸ್ತಲಾಘವ ಮಾಡದೇ ಕೈಜೋಡಿಸಿ ನಮಸ್ಕಾರ ಮಾಡಿ!
೫. “ಹ್ಯಾಪಿ ಯುಗಾದಿ” ಎನ್ನದೇ ಮಾತೃಭಾಷೆಯಲ್ಲಿ ‘ಹೊಸ ವರ್ಷದ ಹಾರ್ದಿಕ ಶುಭಾಶಯ’ ಎನ್ನಿರಿ !
ಮೂರೂವರೆ ಮುಹೂರ್ತಗಳಲ್ಲಿ ಒಂದು
ಯುಗಾದಿ ಪಾಡ್ಯ, ಅಕ್ಷಯ ತೃತೀಯಾ ಮತ್ತು ದಸರಾ (ವಿಜಯದಶಮಿ) ಎಂದರೆ ಪ್ರತಿಯೊಂದು ಒಂದು ಮತ್ತು ಕಾರ್ತಿಕ ಶುಕ್ಲ ಪ್ರತಿಪದೆಯೆಂದರೆ ಅರ್ಧ ಹೀಗೆ ಮೂರೂವರೆ ಮುಹೂರ್ತಗಳಿವೆ. ಈ ಮುಹೂರ್ತಗಳ ವೈಶಿಷ್ಟ್ಯವೇನೆಂದರೆ ಇತರ ದಿನಗಳಲ್ಲಿ ಎಲ್ಲ ಶುಭಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗುತ್ತದೆ, ಆದರೆ ಈ ದಿನಗಳಂದು ಮುಹೂರ್ತವನ್ನು ನೋಡುವುದರ ಆವಶ್ಯಕತೆಯಿರುವುದಿಲ್ಲ. ಈ ದಿನಗಳ ಪ್ರತಿ ಘಳಿಗೆಯೂ ಶುಭಮುಹೂರ್ತವೇ ಆಗಿರುತ್ತದೆ.