ತಂದೆ-ತಾಯಿ ಮತ್ತು ಮನೆಯಲ್ಲಿನ ಹಿರಿಯರಿಗೆ ಬಗ್ಗಿ ನಮಸ್ಕಾರ ಮಾಡಬೇಕು!

ಮಕ್ಕಳೇ, ಮುಂದಿನ ಲೇಖನವನ್ನು ಓದಿ ಮತ್ತು ಅದಕ್ಕನುಸಾರ ಆಚರಣೆ ಮಾಡಿ ಹಿರಿಯರ ಆಶೀರ್ವಾದ ಪಡೆಯಿರಿ !

ಭಾರತೀಯ ಪರಂಪರೆಗನುಸಾರ –

ಮುಸ್ಸಂಜೆಯ ವೇಳೆ ದೀಪ ಹಚ್ಚಿದ ನಂತರ, ಮನೆಯಿಂದ ಹೊರಗೆ ಹೋಗುವಾಗ, ಪ್ರಯಾಣದಿಂದ ಮನೆಗೆ ಮರಳಿದಾಗ, ಹೊಸ ಬಟ್ಟೆಯನ್ನು ಧರಿಸಿದಾಗ ಮುಂತಾದ ವಿವಿಧ ಪ್ರಸಂಗಗಳಲ್ಲಿ ಮನೆಯಲ್ಲಿರುವ ಹಿರಿಯರ ಕಾಲಿಗೆ ಬೀಳುವ ಪದ್ಧತಿಯಿದೆ.

ತಂದೆ-ತಾಯಿ, ಹಾಗೆಯೇ ಮನೆಯಲ್ಲಿ ನಮಗಿಂತ ವಯಸ್ಸಿನಲ್ಲಿ ದೊಡ್ಡವರಾದ ಎಲ್ಲ ವ್ಯಕ್ತಿಗಳಿಗೆ ಬಗ್ಗಿ, ಅಂದರೆ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸಬೇಕು.

ಕೆಲವು ಮಕ್ಕಳಿಗೆ ತಾಯಿ-ತಂದೆಯರಿಗೆ ಬಗ್ಗಿ ನಮಸ್ಕರಿಸಲು ನಾಚಿಕೆಯೆನಿಸುತ್ತದೆ. ಮಕ್ಕಳಿಗಾಗಿ ತಾಯಿ ದಿನದಲ್ಲಿ ೧೦ ಬಾರಿಯಾದರೂ ಕೆಳಗೆ ಬಾಗುತ್ತಾಳೆ. ಹೊರಗೆ ಆಟವಾಡುವಾಗ ನೆರೆಮನೆಯವರಿಗೆ ಮಕ್ಕಳಿಂದ ಏನಾದರೂ ಹಾನಿಯಾಗಿದ್ದರೆ, ನೆರೆಯವರು ಮಾಡಿದ ಅವಮಾನಗಳನ್ನು ತಂದೆಯು ಸಹಿಸುತ್ತಾನೆ. ಇಂತಹ ತಾಯಿ-ತಂದೆಯರಿಗೆ ಬಗ್ಗಿ ನಮಸ್ಕರಿಸಲು ಏಕೆ ನಾಚಿಕೆಯಾಗಬೇಕು?

ಮಕ್ಕಳೇ, ಇಂದಿನಿಂದ ಎಲ್ಲರೂ ತಾಯಿ-ತಂದೆಯರಿಗೆ ಬಗ್ಗಿ ನಮಸ್ಕಾರ ಮಾಡುವಿರಲ್ಲಾ ?

ದೊಡ್ಡವರಿಗೆ ಏಕೆ ಬಗ್ಗಿ ನಮಸ್ಕರಿಸಬೇಕು ?

ಕೇವಲ ತಂದೆ-ತಾಯಿಯರಿಗೆ ಮಾತ್ರವಲ್ಲ, ಅಕ್ಕ-ಅಣ್ಣಂದಿರೊಂದಿಗೆ ಮನೆಯಲ್ಲಿರುವ ಎಲ್ಲ ಹಿರಿಯರಿಗೂ ಬಗ್ಗಿ ನಮಸ್ಕರಿಸಬೇಕು. ಮಕ್ಕಳೇ, ಎಲ್ಲೆಲ್ಲಿ ದೊಡ್ಡತನವಿರುತ್ತದೆಯೋ, ಉದಾ. ವಯಸ್ಸು, ಜ್ಞಾನ, ಕಲೆ ಹೀಗೆ ಏನಾದರೂ ಇರಲಿ, ಅಲ್ಲಿ ನಿಮ್ಮ ಮಸ್ತಕವು ಬಾಗಲೇಬೇಕು.

ದೊಡ್ಡವರಿಗೆ ಬಗ್ಗಿ ನಮಸ್ಕರಿಸುವುದರಿಂದ ಅವರ ಬಗ್ಗೆ ಆದರಭಾವ ವ್ಯಕ್ತವಾಗುತ್ತದೆ, ಹಾಗೆಯೇ ನಮ್ಮಲ್ಲಿ ನಮ್ರತೆಯು ಬರುತ್ತದೆ. ‘ಬಗ್ಗಿ ನಮಸ್ಕರಿಸುವುದು’ ಗರ್ವವನ್ನು (ಅಹಂಕಾರ) ಕಡಿಮೆಗೊಳಿಸುವ ಸುಲಭ ಉಪಾಯವಾಗಿದೆ.

ಅಹಂಕಾರದಿಂದ ಮನುಷ್ಯನ ನಾಶವಾಗುತ್ತದೆ; ಆದರೆ ನಮ್ರತೆಯನ್ನು ಮೈಗೂಡಿಸಿಕೊಂಡವನು ಮಾತ್ರ ಸದಾ ಉಳಿದುಕೊಳ್ಳುತ್ತಾನೆ ಎಂಬ ವಚನವಿದೆ.

Leave a Comment