೧. ‘ಶುಭಂ ಕರೋತಿ’ ಹೇಳಿ! : ಕೈ-ಕಾಲು ಮತ್ತು ಮುಖ ತೊಳೆದು ಹಾಗೂ ದೇವರೆದುರು ದೀಪ ಬೆಳಗಿಸಿ ಮುಂದಿನ ಶ್ಲೋಕ ಹೇಳಬೇಕು
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ | ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತು ತೇ || ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ | |
ಅರ್ಥ: ದೀಪಜ್ಯೋತಿಯು ಶುಭ ಮತ್ತು ಕಲ್ಯಾಣ ಮಾಡುತ್ತದೆ, ಅದರಂತೆ ಆರೋಗ್ಯ ಮತ್ತು ಧನಸಂಪತ್ತನ್ನು ಕೊಡುತ್ತದೆ ಮತ್ತು ಶತ್ರುಬುದ್ಧಿಯನ್ನು ಅಂದರೆ ದ್ವೇಷವನ್ನು ನಾಶ ಮಾಡುತ್ತದೆ; ಆದುದರಿಂದ ಹೇ, ದೀಪಜ್ಯೋತಿಯೇ, ನಿನಗೆ ನಮಸ್ಕಾರ ಮಾಡುತ್ತೇನೆ.
೨. ಪ್ರಾರ್ಥನೆ ಮಾಡಿ ‘ಶ್ರೀರಾಮರಕ್ಷಾಸ್ತೋತ್ರ‘, ‘ಮಾರುತಿಸ್ತೋತ್ರ‘ ಇಂತಹ ಸ್ತೋತ್ರಗಳನ್ನು ಹೇಳಬೇಕು.
೩. ಹಿರಿಯರಿಗೆ ನಮಸ್ಕಾರ ಮಾಡಬೇಕು.
೪. ವಾರ, ತಿಥಿ, ನಕ್ಷತ್ರ, ಮಗ್ಗಿ ಇತ್ಯಾದಿಗಳನ್ನು ಬಾಯಿಪಾಠ ಮಾಡಬೇಕು.
‘ಶುಭಂ ಕರೋತಿ’ಯನ್ನು ನಾಳೆಯಲ್ಲ, ಇಂದೇ ಪ್ರಾರಂಭಿಸಿ ಮತ್ತು ದೂರದರ್ಶನಕ್ಕೆ ‘ಬಾಯ್ ಬಾಯ್’ ಮಾಡಿ!