ಕೆಲವು ವರ್ಷಗಳ ಹಿಂದೆ, ಮಾಧ್ಯಮಿಕ ಹಾಗೂ ಮಹಾವಿದ್ಯಾಲಯಗಳ ಪರೀಕ್ಷೆಗಳು ಪ್ರಾರಂಭ ಆದಮೇಲೆ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುವುದರ ಸುದ್ದಿಗಳು ಕೇಳಿ ಬರುತ್ತಿದ್ದವು. ಆದರೆ ಇತ್ತೀಚೆಗೆ ವಿದ್ಯಾರ್ಥಿಗಳು ಕೇವಲ ಪರೀಕ್ಷೆಯ ಅಪಯಶಸ್ಸು ಮತ್ತು ಅಧ್ಯಯನದ ಒತ್ತಡ ಮಾತ್ರವಲ್ಲದೇ, ತಂದೆ-ತಾಯಿಯರ ಕಠೋರ ಮಾತುಗಳು, ಯಾವುದಾದರೊಂದು ವಿಷಯವು ತಮ್ಮ ಮನಸ್ಸಿನಂತೆ ಆಗದಿರುವುದು ಮುಂತಾದ ಕಾರಣಗಳಿಂದಲೂ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಆತ್ಮಹತ್ಯೆಯ ವಿಚಾರಗಳು ಅಯೋಗ್ಯವಾಗಿವೆ !
ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು ಯಾವುದೇ ಸಮಸ್ಯೆಯ ಪರಿಹಾರವಲ್ಲ ! ಮನಸ್ಸಿನಲ್ಲಿ ಆತ್ಮಹತ್ಯೆಯ ವಿಚಾರ ಬರುವ ಮಕ್ಕಳು ತಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ವಿಚಾರಗಳನ್ನು ಬಿಂಬಿಸಬೇಕು. ಆತ್ಮಹತ್ಯೆಗೆ ಕೇವಲ ಒಂದೇ ಕಾರಣವಿರುತ್ತದೆ, ಆದರೆ ಬದುಕಲು ಅನೇಕ ಕಾರಣಗಳಿರುತ್ತವೆ. ಉದಾ :
ಅ. ನನಗೆ ತಂದೆ-ತಾಯಿಯ ಪ್ರೇಮವನ್ನು ಅನುಭವಿಸಿಲಿಕ್ಕೆ ಇದೆ.
ಆ. ನನಗೆ ಗೆಳೆಯರ ಜೊತೆಗೆ ಆಟವಾಡಿ ಅವರ ಒಡನಾಟದ ಆನಂದ ಅನುಭವಸಿಲಿಕ್ಕೆ ಇದೆ.
ಇ. ನನ್ನ ದೇಶದಲ್ಲಿ ತುಂಬಾ ಸುಂದರವಾದ ತಾಣಗಳಿವೆ, ಅವೆಲ್ಲವನ್ನು ನಾನು ನೋಡಬೇಕು.
ಈ. ಇಲ್ಲಿರುವ ಜನರಿಂದ, ಸಮಾಜದಿಂದ ಅನೇಕ ವಿಷಯಗಳನ್ನು ಕೇಳಿ ತಿಳಿದುಕೊಳ್ಳಲು ಇದೆ.
ಉ. ಜನ್ಮ ನೀಡಿದ ತಂದೆ-ತಾಯಿಯನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳುವ ಜವಾಬ್ದಾರಿಯು ನನ್ನ ಮೇಲಿದೆ.
ಶಿವಾಜಿ ಮಹಾರಾಜರು, ಲೋಕಮಾನ್ಯ ತಿಲಕರು, ಸ್ವಾ. ಸಾವರಕರ ರಂತಹ ರಾಷ್ಟ್ರಪುರುಷರಿಗೆ ಹಾಗೂ ಕನಕದಾಸರು, ಗೊರಾ ಕುಂಭಾರ, ತುಕಾರಾಮ ಮಹಾರಾಜರಂತಹ ಸಂತರಿಗೂ ಜೀವನದಲ್ಲಿ ದುಃಖದ ಪ್ರಸಂಗಗಳನ್ನು ಎದುರಿಸಬೇಕಾಯಿತು, ಅನೇಕ ಯಾತನೆಗಳನ್ನು ಸಹಿಸಬೇಕಾಯಿತು. ಅವರ ತುಲನೆಯಲ್ಲಿ ನಮಗಾಗುವ ಪರೀಕ್ಷೆಯ ಅಪಯಶಸ್ಸಿನ ದುಃಖವು ನಗಣ್ಯವಾಗಿದೆ. ಕಠಿಣ ಪ್ರಸಂಗಗಳಲ್ಲಿ ಈ ಮೇಲಿನ ಆದರ್ಶ ವ್ಯಕ್ತಿಗಳು ಯಾವತ್ತೂ ಎದೆಗುಂದಲಿಲ್ಲ; ಅವರು ಆತ್ಮವಿಶ್ವಾಸದಿಂದ ಪರಿಶ್ರಮಪಟ್ಟು ಯಶಸ್ಸಿನ ಶಿಖರವನ್ನು ಏರಿದರು; ಆದ್ದರಿಂದಲೇ ಜನಸಾಮಾನ್ಯರು ಅವರ ಆದರ್ಶವನ್ನು ಪಾಲಿಸುತ್ತಾರೆ !
ಆತ್ಮಹತ್ಯೆಯ ವಿಚಾರಗಳ ನಿಜವಾದ ಉಪಾಯವೆಂದರೆ ‘ಸಾಧನೆ’!
ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರವೃತ್ತರಾಗುವುದರ ನಿಜವಾದ ಕಾರಣವೆಂದರೆ ‘ಮನಸ್ಸಿನ ದೌರ್ಬಲ್ಯ’. ಧ್ಯಾನ, ನಾಮಜಪದಂತಹ ‘ಸಾಧನೆ’ಯನ್ನು ಮಾಡುವುದರಿಂದಲೇ ಮನೋಬಲವು ಹೆಚ್ಚುತ್ತದೆ. ಇದರಿಂದ ದುಃಖವನ್ನು ಸಹಿಸುವ ಕ್ಷಮತೆಯೂ ಹೆಚ್ಚಾಗುತ್ತದೆ. ಇಂತಹ ವಿದ್ಯಾರ್ಥಿಯು ಆತ್ಮಹತ್ಯೆಯ ವಿಚಾರದ ಮೇಲೆ ಸಹಜವಾಗಿ ಜಯಗಳಿಸುತ್ತಾನೆ.
ಇಂತಹ ಪ್ರಯೋಗಗಳನ್ನು ಅನೇಕ ಮಹಾವಿದ್ಯಾಲಯಗಳಲ್ಲಿ ಮಾಡಿ ನೋಡಿದ್ದಾರೆ, ಹಾಗೂ ಅದರಿಂದ ಅವರಿಗೆ ಅಧ್ಯಯನದಲ್ಲಿ ಲಾಭ ಕೂಡ ಆಗಿದೆ. ಆದುದರಿಂದ ಮಕ್ಕಳೇ, ಮನೋಬಲ ಹೆಚ್ಚಿಸಲು ಇಂದಿನಿಂದಲೇ ಸಾಧನೆಯನ್ನು ಪ್ರಾರಂಭಿಸಿ !
(ಆಧಾರ: ಸನಾತನ ಸಂಸ್ಥೆ ನಿರ್ಮಿತ ‘ಅಧ್ಯಯನ ಹೇಗೆ ಮಾಡಬೇಕು ?‘ ಗ್ರಂಥ)