ಮಕ್ಕಳೇ, ನಾವು ಶಾಲೆಗೆ ಹೇಗೆ ಹೋಗುತ್ತೇವೆ ಎಂದು ಯೋಚಿಸಿ? ರಾತ್ರಿಯಿಡೀ ದೂರಚಿತ್ರವಾಹಿನಿಯನ್ನು ವೀಕ್ಷಿಸಿದ ಪರಿಣಾಮ ಮಾರನೇ ದಿನ ಬೆಳಗ್ಗೆ ಎಚ್ಚರವಾಗುವಾಗ ತಡವಾಗಿರುತ್ತದೆ.ಸ್ನಾನಕ್ಕೆ ಸಮಯ ಇಲ್ಲದೆ, ತಲೆಕೂದಲನ್ನು ಬಾಚಣಿಕೆಯಿಂದ ಬಾಚದೇ ಹಾಗೆಯೇ ಬಿಡುತ್ತೇವೆ. ತರಾತುರಿಯಲ್ಲಿ ಚಹಾ ಕುಡಿದು, ಪುಸ್ತಕ-ವಹಿಗಳನ್ನು ಚೀಲದೊಳಗೆ ತುರುಕಿಸಿ ಶಾಲಾ ವಾಹನವನ್ನು ಏರುತ್ತೇವೆ. ಇದೇ ಅವಸರದಲ್ಲಿ ಶಾಲೆಯನ್ನು ತಲುಪಿದರೆ, ತರಗತಿ ಪ್ರಾರಂಭವಾಗಿರುತ್ತದೆ, ಆಗ ಹಿಂದಿನ ದಿನ ಗೃಹಪಾಠ ಮಾಡುವುದನ್ನು ಮರೆತಿರುವ ವಿಷಯ ನೆನಪಾಗುತ್ತದೆ. ಈಗ ಏನಾದರೂ ಶಿಕ್ಷೆ ಅನುಭವಿಸಲಿಕ್ಕೆ ಇದೆ; ಇಂತಹ ಸ್ಥಿತಿಯಲ್ಲಿ ಪಾಠಗಳು ಒಳ್ಳೆಯ ರೀತಿಯಲ್ಲಿ ಹೇಗೆ ತಾನೇ ಅರ್ಥೈಸಿಕೊಳ್ಳುವುದು? ಆದುದರಿಂದ ಮುಂದಿನ ಅಂಶಗಳನ್ನು ಅಳವಡಿಸಿಕೊಳ್ಳಿ !
ಶಾಲೆಗೆ ಹೋಗಲು ಪೂರ್ವಸಿದ್ಧತೆ
೧. ಶಾಲೆಯಲ್ಲಿ ನೀಡಿದ ಗೃಹಪಾಠವನ್ನು ಪೂರ್ಣಗೊಳಿಸಬೇಕು.
೨. ಶಾಲೆಯ ವೇಳಾಪಟ್ಟಿಗನುಸಾರ ಪುಸ್ತಕ ಹಾಗೂ ವಹಿಗಳನ್ನು ಹಾಗೂ ಇತರ ಸಾಹಿತ್ಯಗಳನ್ನು ಶಾಲಾ ಚೀಲದಲ್ಲಿ ಸ್ವತಃ ಜೋಡಿಸಬೇಕು.
೩. ಉಗುರುಗಳನ್ನು ಕತ್ತರಿಸಿರಬೇಕು (ಇದನ್ನು ವಾರಕ್ಕೊಮ್ಮೆಯಾದರೂ ಮಾಡಿದರೆ ಒಳ್ಳೆಯದು)
೪. ಸಮವಸ್ತ್ರವನ್ನು ಸ್ವಚ್ಚವಾಗಿ ತೊಳೆದು ಇಸ್ತ್ರೀ ಮಾಡಿರಬೇಕು
೫. ವಿದ್ಯಾರ್ಥಿಗಳು ಹಣೆಗೆ ತಿಲಕವನ್ನು ಹಚ್ಚಿರಬೇಕು
೬. ವಿದ್ಯಾರ್ಥಿನಿಯರು ಬಳೆಗಳನ್ನು ತೊಡಬೇಕು, ಕುಂಕುಮವನ್ನು ಹಚ್ಚಬೇಕು ಮತ್ತು ಎರಡು ಅಥವಾ ಒಂದು ಜಡೆಯನ್ನು ಹಾಕಿಕೊಳ್ಳಬೇಕು. ಜಡೆಗೆ ಸಮವಸ್ತ್ರಕ್ಕೆ ಹೊಂದುವ 'ರಿಬ್ಬನ್' ಕಟ್ಟಬೇಕು.
೭. ಊಟದ ಡಬ್ಬಿ ಹಾಗೂ ನೀರಿನ ಬಾಟಲಿಯನ್ನು ಮರೆಯದೆ ತೆಗೆದುಕೊಂಡು ಹೋಗಬೇಕು
ಶಾಲೆಗೆ ಹೋಗುವುದು
೧. ಮನೆಯಿಂದ ಹೊರಡುವಾಗ, ಶಾಲೆಗೆ ಸರಿಯಾದ ಸಮಯದಲ್ಲಿ ತಲಪುವ ಹಾಗೆ ಆಯೋಜನೆ ಮಾಡಬೇಕು.
೨. ಹೊರಡುವಾಗ ತಾಯಿಗೆ ಹಾಗೂ ಮನೆಯಲ್ಲಿನ ಇತರ ಹಿರಿಯರಿಗೆ (ಉದಾ : ಅಜ್ಜಿ-ತಾತ) ಹೇಳಿ ಹಾಗೂ ದೇವರಿಗೆ ನಮಸ್ಕಾರ ಮಾಡಿ ಹೊರಡಬೇಕು.
೩. ದಾರಿಯಲ್ಲಿ ಹೋಗುವಾಗ ಮನಸ್ಸಿನಲ್ಲಿ ಕುಲದೇವತೆ ಅಥವಾ ಇಷ್ಟ ದೇವತೆಯ ನಾಮಜಪವನ್ನು ಮಾಡಬೇಕು.