ವಿದ್ಯಾರ್ಥಿಗಳು ನಿಯಮಿತವಾಗಿ ಹಿತಕರ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರೆ ಪರೀಕ್ಷೆಯ ಸಮಯದಲ್ಲಿ ಅದರ ವಿಶೇಷ ಕಾಳಜಿಯನ್ನು ವಹಿಸಬೇಕು
ಪರೀಕ್ಷೆಯ ಸಮಯದಲ್ಲಿ ಲಘು ಆಹಾರವನ್ನು ಸೇವಿಸಬೇಕು. ಅದರಿಂದ ಶರೀರ ಹಾಗೂ ಮನಸ್ಸಿನ ಆರೋಗ್ಯವು ಚೆನ್ನಾಗಿ ಇದ್ದು ಅಧ್ಯಯನ ಮಾಡಲು ಉತ್ಸಾಹ ಬರುವುದು.
ದೇಹದಲ್ಲಿ ಉಷ್ಣತೆಯ ಬಾಧೆ ಇದ್ದಲ್ಲಿ ತಡ ರಾತ್ರಿ ಕುಳಿತು ಅಧ್ಯಯನ ಮಾಡದೇ ಇರುವುದು ಒಳಿತು
ಸೂರ್ಯನಮಸ್ಕಾರ, ಯೋಗಾಸನ, ಪ್ರಾಣಾಯಾಮ, ಓಂಕಾರ ಮತ್ತು ಹೊರಾಂಗಣ ಕ್ರೀಡೆ, ಇವುಗಳಲ್ಲಿ ನಿಮಗೆ ಇಷ್ಟವಾದ ವ್ಯಾಯಾಮವನ್ನು ಮಾಡಿ !
ಕಣ್ಣುಗಳಿಗೆ ಆಯಾಸ ಆಗದಿರಲು ನೇತ್ರಸ್ನಾನ, ತಣ್ಣೀರಿನಿಂದ ಕಣ್ಣುಗಳನ್ನು ಸ್ವಚ್ಚ ಮಾಡುವುದು, ಕಣ್ಣುಗಳ ವ್ಯಾಯಾಮ ಇತ್ಯಾದಿಗಳನ್ನು ನಿಯಮಿತವಾಗಿ ಮಾಡಿ ! ಅಧ್ಯಯನ ಮಾಡುವಾಗ ಮಧ್ಯ ಮಧ್ಯದಲ್ಲಿ ೧-೨ ನಿಮಿಷಗಳ ಕಾಲ ಕಣ್ಣುಗಳನ್ನು ಮುಚ್ಚಿ ಯಾವುದಾದರೊಂದು ವಸ್ತುವಿನ ಮೇಲೆ ಧ್ಯಾನ ಮಾಡಬೇಕು ಅಥವಾ ದೂರದಲ್ಲಿರುವ ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಬೇಕು.
ಮೆದುಳು ಸುಸ್ತಾದಲ್ಲಿ ಅವಶ್ಯಕತೆಗನುಸಾರ ನಿದ್ದೆ ಮಾಡಿ !
ಹಾಲು, ತುಪ್ಪ, ನೆನೆಸಿದ ಬಾದಾಮಿಯಂತಹ ಮೆದುಳಿಗೆ ಪೋಷಕವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ !
ಮಾನಸಿಕ ಖಿನ್ನತೆಯನ್ನು ತರುವಂತಹ ಪ್ರಸಂಗಗಳಿಂದ ದೂರವಿರಿ !