ಮಕ್ಕಳೇ, ಪರೀಕ್ಷೆಗೆ ಹೋಗುವಾಗ ಆಸನ ಕ್ರಮಾಂಕ, ಪ್ರವೇಶ ಪತ್ರ (ಹಾಲ್ ಟಿಕೆಟ್), ಪುರವಣಿಗಳ ಸಂಖ್ಯೆ, ಸಂವೀಕ್ಷಕರ (ಇನ್ವಿಜಿಲೇಟರ) ಸಹಿ, ಪರೀಕ್ಷೆಯ ಒತ್ತಡ, ಅಧ್ಯಯನದ ಭಾರ ಹೀಗೆ ಅನೇಕ ವಿಷಯಗಳನ್ನು ನೀವು ಎದುರಿಸಬೇಕಾಗುತ್ತದೆ. ಇಂತಹ ಒತ್ತಡದಲ್ಲಿ ನಿಮ್ಮಿಂದ ಗೊತ್ತಿಲ್ಲದೆಯೇ ಕೆಲವು ತಪ್ಪುಗಳು ನಡೆಯುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಯಲು ಈ ಲೇಖನವನ್ನು ಓದಿ.
ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಮೊದಲು ಏನು ಮಾಡಬೇಕು?
ಅ. ‘ಪರೀಕ್ಷಾ ಕೇಂದ್ರಕ್ಕೆ ಸುಮಾರು ಅರ್ಧ ಗಂಟೆ ಮುಂಚಿತವಾಗಿ ತಲುಪಬೇಕು. ಅಲ್ಲಿ ನಿಮ್ಮ ಪರೀಕ್ಷಾ ಕೊಠಡಿ (ಸಂಖ್ಯೆ) ಮತ್ತು ಆಸನವೆಲ್ಲಿದೆ ಎಂದು ಪರಿಶೀಲಿಸಬೇಕು.
ಆ. ‘ನಕಲು(ಕಾಪಿ) ಮಾಡಲು ಉಪಯೋಗಿಸಿರಬಹುದು’ ಎನ್ನಬಹುದಾದ ಯಾವುದೇ ವಸ್ತುವನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗಬಾರದು.
ಇ. ಕೆಂಪು, ಕಪ್ಪು ಮತ್ತು ಹಸಿರು ಶಾಯಿಗಳನ್ನು ಉತ್ತರಪತ್ರಿಕೆಯನ್ನು ತಿದ್ದುವಾಗ ಉಪಯೋಗಿಸುತ್ತಾರೆ, ಆದುದರಿಂದ ನೀಲಿ ಶಾಯಿಯ ಎರಡು ಲೇಖನಿಗಳನ್ನು (ಪೆನ್) ನಿಮ್ಮ ಜೊತೆ ಇಟ್ಟುಕೊಳ್ಳಿ.
ಈ. ಪರೀಕ್ಷೆ ಪ್ರಾರಂಭವಾಗುವ ಮೊದಲು ಕುಲದೇವತೆಗೆ ಅಥವಾ ಇಷ್ಟದೇವತೆಗೆ ಪ್ರಾರ್ಥನೆ ಮಾಡಬೇಕು.
ಉ. ಸಂವೀಕ್ಷಕರು ಹೇಳುವ ಸೂಚನೆಗಳನ್ನು ಗಮನವಿಟ್ಟು ಕೇಳಬೇಕು ಮತ್ತು ಅವರು ಫಲಕದಲ್ಲಿ ಬರೆದಿರುವುದನ್ನು ಸರಿಯಾಗಿ ಓದಬೇಕು. ಸಂವೀಕ್ಷರನ್ನು ಬಿಟ್ಟು ಬೇರೆ ಯಾರಿಗೂ ಏನೂ ಕೇಳಬಾರದು.
ಊ. ಉತ್ತರಪತ್ರಿಕೆಯು ಕೈಯಲ್ಲಿ ಸಿಕ್ಕಿದ ತಕ್ಷಣ ಪುಟಗಳನ್ನು ಮತ್ತು ಪುಟ ಸಂಖ್ಯೆಗಳನ್ನು ಪರಿಶೀಲಿಸಿ ನೋಡಬೇಕು. ದೋಷಗಳಿದ್ದರೆ ಅದನ್ನು ಹಿಂದುರಿಗಿಸಿ ಹೊಸ ಪತ್ರಿಕೆಯನ್ನು ಪಡೆಯಬೇಕು. ನಂತರವೇ ನಿಮ್ಮ ಆಸನ ಕ್ರಮಾಂಕ ಮತ್ತು ಇತರ ವಿವರಗಳನ್ನು ತುಂಬಿಸಬೇಕು.
ಋ. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕೆಲವುತೊಂದರೆಗಳಗುವ ಸಾಧ್ಯತೆಗಳಿವೆ (ಉದಾ : ಪ್ರಶ್ನೆಗೆ ಉತ್ತರ ನೆನಪಾಗದೆ ಇರುವುದು). ಇದನ್ನು ತಪ್ಪಿಸಲು ಪರೀಕ್ಷೆ ಪ್ರಾರಂಭವಾಗುವ ಮೊದಲುಕಣ್ಣುಗಳನ್ನು ಮುಚ್ಚಿ, ಕುಲದೇವತೆ / ಇಷ್ಟದೇವತೆ ಮತ್ತು ಬುದ್ಧಿ ದೇವತೆಗಳಿಗೆ ಪ್ರಾರ್ಥನೆ ಮಾಡಿ,ಮನಸ್ಸಿನಲ್ಲಿ’ದೇವರ ಕೃಪೆ ನನ್ನ ಮೇಲಾಗುತ್ತಿದೆ. ಇದರಿಂದ ನನಗೆ ಚೈತನ್ಯ ಸಿಗುತ್ತಿದೆ ಮತ್ತು ನಾನು ನಿರಾಯಾಸವಾಗಿ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸುತ್ತಿದ್ದೇನೆ’ಎಂಬ ಕಲ್ಪನೆ ಮಾಡಬೇಕು.
ಎ. ಪ್ರಶ್ನೆ ಪತ್ರಿಕೆಯು ಪರೀಕ್ಷೆ ಪ್ರಾರಂಭವಾಗುವ ೧೦ ನಿಮಿಷ ಮುಂಚಿತವಾಗಿ ಕೈಯಲ್ಲಿ ಸಿಗುತ್ತದೆ. ಪುಟಗಳ ಸಂಖ್ಯೆ ಮತ್ತು ಪ್ರಶ್ನೆಗಳ ಕ್ರಮಾಂಕಗಳು ಸರಿಯಾಗಿವೆಯೆಂದು ಪರಿಶೀಲಿಸಬೇಕು. ಹೀಗೆ ಮಾಡಿ ಪತ್ರಿಕೆಯಲ್ಲಿ ಸೂಕ್ತ ಸ್ಥಳದಲ್ಲಿಆಸನ ಕ್ರಮಾಂಕವನ್ನು ಬರೆಯಬೇಕು.
ಏ. ಪ್ರಶ್ನೆಪತ್ರಿಕೆಯ ಮೇಲೆ ಬರೆಯುವುದು, ಅದನ್ನು ಬೇರೆಯವರ ಜೊತೆ ವಿನಿಮಯ ಮಾಡುವುದು ನಿಷಿದ್ಧ. ಅನೇಕ ಪರೀಕ್ಷೆಗಳಲ್ಲಿ ಪ್ರಶ್ನೆಗಳಿಗೆ ಗುರುತು ಹಾಕುವುದನ್ನು ಕೂಡ ನಿಷೇಧಿಸುತ್ತಾರೆ.
ಐ. ಪ್ರಶ್ನೆಪತ್ರಿಕೆಯಲ್ಲಿ ಪ್ರತಿಯೊಂದು ಪ್ರಶ್ನೆಯ ಆರಂಭದಲ್ಲಿ ಕೊಟ್ಟಿರುವ ಸೂಚನೆಗಳನ್ನು ಗಮನವಿಟ್ಟು ಓದಿ. ಯಾವ ಪ್ರಶ್ನೆಗೆ ಎಷ್ಟು ಅಂಕಗಳಿವೆ ಮತ್ತು ಯಾವ ಪ್ರಶ್ನೆಗೆ ಅಥವಾ ಉಪಪ್ರಶ್ನೆಗೆ ಪರ್ಯಾಯ ಪ್ರಶ್ನೆಗಳಿವೆ ಎಂಬುದರ ಕಡೆಗೆ ಗಮನವಿರಲಿ.
ಓ. ಪ್ರಾರಂಭ ಗಂಟೆ ಬಾರಿಸಿದ ಮೇಲೆಯೇ ಉತ್ತರ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಬೇಕು. ಬರೆಯುವಾಗ ‘ದೇವರೇ ನನ್ನಿಂದ ಉತ್ತರಪತ್ರಿಕೆಯನ್ನು ಬರೆಸಿಕೊಳ್ಳುತ್ತಿದ್ದಾನೆ’ ಎಂಬ ಭಾವವಿರಲಿ. ‘ಖಂಡಿತವಾಗಿಯೂ ಯಶಸ್ವಿಯಾಗುತ್ತೇನೆ’ ಎಂಬ ಪ್ರಬಲ ಇಚ್ಛೆಯಿಂದ ಉತ್ತರಪತ್ರಿಕೆಯಲ್ಲಿ ಬರೆಯಬೇಕು.
ಆಧಾರ : ‘ದೈನಿಕ ಗೋಮಾಂತಕ ‘, ೧೧.೩.೨೦೧೧