ಮಕ್ಕಳ ಜೀವನದಲ್ಲಿ ಆಟ ಮತ್ತು ಮನೋರಂಜನೆ

ಮಕ್ಕಳುದೊಡ್ಡವರು ಎನ್ನದೆ ಎಲ್ಲರ ಜೀವನದಲ್ಲಿ ಆಟಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಪ್ರಾಚೀನ ಕಾಲದ ಸಮಕಾಲೀನ ಆಟಗಳ ಉಲ್ಲೇಖ ನಮಗೆ ಸಿಗುತ್ತದೆ. ಕೆಲವರಿಗೆ ಆಟ ಆಡುವುದು ಸಮಯವನ್ನು ವ್ಯರ್ಥ ಮಾಡಿದ ಹಾಗೆ ಅನ್ನಿಸುತ್ತದೆ, ಆದರೆ ಆಟದ ಲಾಭಗಳು ಅದರ ನ್ಯೂನತೆಗಳ ತುಲನೆಯಲ್ಲಿ ಅಪಾರವಾಗಿವೆ.

ಆಟ, ಮಕ್ಕಳವಿಕಾಸದಲ್ಲಿಅಪಾರ ಮಹತ್ವವನ್ನು ಹೊಂದಿದೆ

ಒಂದು ಮಗುವಿನ ಶಾರೀರಿಕ, ಸಾಮಾಜಿಕ, ಮಾನಸಿಕ ಮತ್ತು ಬೌದ್ಧಿಕ ವಿಕಾಸದಲ್ಲಿ ಆಟಗಳು ತುಂಬಾ ಉಪಯುಕ್ತವಾಗಿವೆ. ಆಟಆಡುತ್ತ ಮಕ್ಕಳು ಇತರ ಮಕ್ಕಳ ಜೊತೆ ಹೊಂದಿಕೊಂಡು ಹೋಗುವುದನ್ನು, ಅವರನ್ನು ಸಹಕರಿಸುವುದನ್ನು ಕಲಿತುಕೊಳ್ಳುತ್ತಾರೆ. ಎಲ್ಲರೊಂದಿಗೂ ಬೆರೆಯಲು ಕಲಿಯುತ್ತಾರೆ. ಧಾರ್ಮಿಕ ಉತ್ಸವ, ಕೌಟುಂಬಿಕ ಸಮಾರಂಭಗಳು, ಪ್ರವಾಸ ಇತ್ಯಾದಿಗಳು ಜೀವನದಲ್ಲಿ ಸ್ವಲ್ಪ ವೈವಿಧ್ಯತೆಯನ್ನು ತುಂಬಿ ಆನಂದದ ವಾತಾವರಣವನ್ನು ನಿರ್ಮಿಸುತ್ತವೆ.
ಅ. ಅಧ್ಯಯನ, ಇತರ ಕೆಲಸಗಳಿಂದ ಆಗುವ ಬವಣೆಯನ್ನು ದೂರವಾಗಿಸಲು ಆಟಗಳು ಒಂದು ಉತ್ತಮ ಮಾಧ್ಯಮ.

ಆ. ಆಟಗಳಲ್ಲಿ ತಂಡಗಳು ಇದ್ದಲ್ಲಿ ಮಕ್ಕಳಲ್ಲಿ ಸಮಷ್ಟಿ ಭಾವ ನಿರ್ಮಾಣವಾಗುತ್ತದೆ.

ಇ. ಆಟಗಳಿಂದ ಕಲ್ಪನಾ ಶಕ್ತಿಯ ವೃದ್ಧಿಯಾಗುತ್ತದೆ.

ಈ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಲು ಆಟಗಳು ಕಲಿಸುತ್ತವೆ. ಹಾಗೆಯೇ ಪರಾಭವಗೊಂಡಾಗ ಅದನ್ನೂ ನಗುಮುಖದಿಂದ ಎದುರಿಸಲು ಕಲಿಸುತ್ತವೆ.

ಉ. ನಿಯಮಗಳನ್ನು ಪಾಲಿಸುವ ಸಂಸ್ಕಾರವನ್ನು ಆಟಗಳು ಕಲಿಸುತ್ತವೆ.

ಊ. ಕೆಲವು ಆಟಗಳಿಂದ ಬುದ್ಧಿ, ಆಯೋಜನ ಕೌಶಲ್ಯ, ವಿವೇಚನೆ ಮುಂತಾದ ಗುಣಗಳ ವೃದ್ಧಿಯಾಗುವ ಸಾಧ್ಯತೆಯೂ ಇದೆ.

ಮಕ್ಕಳ ಮಾನಸಿಕ ಬೆಳವಣಿಗೆಯಾಗಲು'ಆಟ'ಸಹಾಯಕ

ಸೈಕಲ್ ಓಡಿಸುವುದು, ಕ್ರೀಡಾಂಗಣಗಲ್ಲಿ ಆಡುವ ಆಟಗಳಿಂದ ಮಕ್ಕಳ ಶಾರೀರಿಕ ವ್ಯಾಯಾಮ ಆಗುತ್ತದೆ, ಇದರಿಂದ ಅವರ ಶರೀರ ಸುಧೃಡವಾಗಲು ಸಹಾಯವಾಗುತ್ತದೆ. ಸ್ನಾಯುಗಳ ಔಚಿತ್ಯಪೂರ್ಣ ಉಪಯೋಗವನ್ನು ಕಲಿತು ಅವುಗಳ ಬೆಳವಣಿಗೆಯೂ ಆಗುತ್ತದೆ. ಬಾಲವಿಹಾರದಲ್ಲಿ ಮಕ್ಕಳಿಗೆ ಆಟಿಕೆ ಮತ್ತು ಆಟಗಳ ಮಾಧ್ಯಮದಿಂದ ಶಿಕ್ಷಣವನ್ನು ನೀಡುತ್ತಾರೆ. ಇಂತಹ ಆಟಗಳಿಂದ ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತೆ.

ಅದುಮಿಟ್ಟ ಭಾವನೆಗಳುಉದ್ರಿಕ್ತಗೊಂಡಾಗ ಅಪಾರ ಹಾನಿ ಮಾಡಬಲ್ಲವು

ಮಗುವು ತನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಮಾಡಲು ಆಶಕ್ತವಾಗಿದ್ದರೆ, ಅದುಮಿಟ್ಟುಕೊಂಡ ಭಾವನೆಗಳನ್ನು ಸಿಡಿಮಿಡಿಗೊಂಡು, ಆಟಿಕೆಗಳನ್ನು ಅಥವಾ ಇತರ ವಸ್ತುಗಳನ್ನು ಒಡೆದು ನುಚ್ಚುನೂರು ಮಾಡುವುದರ ಮೂಲಕ ವ್ಯಕ್ತ ಮಾಡುತ್ತದೆ. ಹೀಗೆ ಮಾಡಿ ತನ್ನ ಮನಸ್ಸಿನಲ್ಲಿರುವ ತುಮುಲವನ್ನು ವ್ಯಕ್ತಪಡಿಸಲು ಮಾರ್ಗ ಹುಡುಕುತ್ತದೆ.

Leave a Comment