ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ದೇವತೆಗಳ ಉಪಾಸನೆ, ವಿವಿಧ ವ್ರತಗಳು ಮತ್ತು ಉತ್ಸವಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಕೆಲವು ಕನಿಷ್ಠ ದೇವತೆಗಳ ಉಪಾಸನೆಯೂ ಮಾಡುತ್ತಾರೆ. ಇದರಲ್ಲಿ ಸೂರ್ಯ, ಚಂದ್ರ, ಅಗ್ನಿ, ವಾಯು, ವರುಣ ಮತ್ತು ಇಂದ್ರ ಪ್ರಮುಖ ಕನಿಷ್ಠ ದೇವತೆಗಳಾಗಿದ್ದಾರೆ. ಮನುಷ್ಯನ ಮತ್ತು ಇತರೆ ಜೀವಿಗಳ ಜೀವನದಲ್ಲಿ ಈ ಕನಿಷ್ಠ ದೇವತೆಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಭಾರತೀಯ ಸಂಸ್ಕೃತಿಯು ಎಲ್ಲರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಲಿಸುತ್ತದೆ. ಇದಕ್ಕನುಸಾರ, ಸೂರ್ಯದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಥಸಪ್ತಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯೋಪಸನೆಯನ್ನು ಮಾಡಲಾಗುತ್ತದೆ.
ಮಹತ್ವ
ಸಂಖ್ಯೆಗಳಲ್ಲಿ '೭' ಈ ಸಂಖ್ಯೆಗೆ ಹೆಚ್ಚು ಮಹತ್ವ ಇದೆ. ಸಪ್ತಮಿಯಂದು ಶಕ್ತಿ ಮತ್ತು ಚೈತನ್ಯದ ಸಂಗಮ ಆಗಿರುತ್ತದೆ.
ಸೂರ್ಯ
ಸೂರ್ಯೋಪಾಸನೆಯ ಮಹತ್ವ : ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ.
೧. ಸೂರ್ಯೋಪಾಸನೆಯಿಂದ ಶರೀರದಲ್ಲಿರುವ ಚಂದ್ರನಾಡಿಯು ಪೂರ್ಣಪ್ರಮಾಣದಲ್ಲಿ ಮುಚ್ಚಿ ಹೋಗಿ ಸೂರ್ಯನಾಡಿಯು ಬೇಗ ಕಾರ್ಯರತವಾಗಲು ಸಹಾಯವಾಗುತ್ತದೆ. ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಅಧಿಕ ಶ್ರೇಷ್ಠವಾಗಿದೆ.
೨. ಸೂರ್ಯನಿಗೆ ಬೆಳೆಗ್ಗೆ ಅರ್ಘ್ಯ ಅರ್ಪಿಸಿ ಅವನ ದರ್ಶನ ಪಡೆದರೆ ಸಾಕು, ಅವನು ಪ್ರಸನ್ನನಾಗುತ್ತಾನೆ. ಸೂರ್ಯನ ದರ್ಶನ ಪಡೆಯುವುದು ಅವನ ಉಪಾಸನೆಯ ಒಂದು ಭಾಗವೇ ಆಗಿದೆ.
೩. ಉದಯಿಸುತ್ತಿರುವ ಸೂರ್ಯನೆಡೆಗೆ ನೋಡಿ 'ತ್ರಾಟಕ'ವನ್ನು ಮಾಡಿದರೆ ಕಣ್ಣುಗಳ ಕ್ಷಮತೆಯು ಹೆಚ್ಚುತ್ತದೆ.
೪. ಸೂರ್ಯನಮಸ್ಕಾರ ಮಾಡುವುದು: ಯೋಗಾಸನಗಳಲ್ಲಿ ಸೂರ್ಯನಮಸ್ಕಾರ ಮಹತ್ವದ ವ್ಯಾಯಾಮವಾಗಿದೆ. ಇದರಲ್ಲಿ ಸ್ಥೂಲ ಶರೀರದ ಉಪಯೋಗ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. ಹೀಗೆ ೨೦ ವರ್ಷ ನಿತ್ಯವೂ ಸೂರ್ಯನಮಸ್ಕಾರ ಮಾಡಿದರೆ ಸೂರ್ಯದೇವನು ಪ್ರಸನ್ನನಾಗುತ್ತಾನೆ.