ಭಗವಂತನ ಪೂಜೆ ಮಾಡಿ
ಮನೆಯ ದೇವರ ಕೊಣೆಯಲ್ಲಿ ಪೂಜೆ ಆಗಿದ್ದಲ್ಲಿ, ಸ್ನಾನದ ನಂತರ ದೇವರ ಕೊಣೆಯ ಮುಂದೆ ನಿಂತುಕೊಂಡು ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ. ಊದುಬತ್ತಿಯನ್ನು ಉರಿಸಿ ದೇವರಿಗೆ ಅರ್ಪಿಸಿ. ಪೂಜೆ ಅಗಿರದ್ದಿದ್ದರೆ ಹಿರಿಯರ ಅನುಮತಿ ಪಡೆದು ನಾವು ಸ್ವತಃ ಪೂಜೆ ಮಾಡಬಹುದು.
ಶ್ರೀ ಗಣೇಶ ವಂದನೆ ಮತ್ತು ಇತರ ಶ್ಲೋಕಗಳನ್ನು ಪಠಿಸಿ
ದೇವರ ಪೂಜೆಯ ನಂತರ,ಗಣಪತಿ ದೇವರನ್ನು ವಂದಿಸಿ; ಮತ್ತೆ ಎರಡೂ ಕೈಗಳನ್ನು ಜೋಡಿಸಿ ಮುಂದಿನ ಶ್ಲೋಕವನ್ನು ಪಠಿಸಿ
ವಕ್ರತುಂಡ ಮಹಾಕಾಯ ಸೂರ್ಯಕೋಟಿಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ || |
ಅರ್ಥ : (ಕೆಟ್ಟವರನ್ನು ನಾಶಮಾಡುವ) ವಕ್ರ ಸೊಂಡಿಲಿನ, ಮಹಾಕಾಯ (ಶಕ್ತಿವಂತ) ಮತ್ತು ಕೋಟಿ ಕೋಟಿ ಸೂರ್ಯಗಳ ತೆಜಸ್ಸನ್ನು ಧರಿಸಿರುವ ಶ್ರೀ ಗಣಪತಿಯೇ, ನನ್ನ ಎಲ್ಲ ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೆ ಸಫಲವಾಗಲಿ.
ಗೊತ್ತಿರುವ ಇತರ ಶ್ಲೋಕಗಳನ್ನು ಪಠಿಸಿ. ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ!
ಅ. ದೇವರೇ, ದಿನವಿಡೀ ಒಳ್ಳೆಯ ಕಾರ್ಯಗಳನ್ನು ಮಾಡುವಲ್ಲಿ ನೀವು ನನಗೆ ಸಹಾಯ ಮಾಡಿ, ಮತ್ತು ಕೆಟ್ಟ ಕಾರ್ಯಗಳಿಂದ ನನ್ನನ್ನು ದೂರವಿಡಿ.
ಆ. ಹೇ ಕುಲದೇವರೇ, ನನಗೆ ನಿರಂತರವಾಗಿ ನಿಮ್ಮ ನಾಮಜಪದ ಸ್ಮರಣೆಯಾಗಲಿ, ಹೀಗೆ ಕೃಪೆ ಮಾಡಿ.
ಇ. ಹೇ ಶ್ರೀರಾಮ, ಎಲ್ಲ ಹಿರಿಯರಿಗೆ ಗೌರವಾದರ ನೀಡಲು ನನಗೆ ಕಲಿಸಿರಿ.
ಈ. ಹೇ ಶ್ರೀಕೃಷ್ಣ, ನನಲ್ಲಿ ದೇಶ ಮತ್ತು ಧರ್ಮದ ಬಗ್ಗೆ ಪ್ರೀತಿ ನಿರ್ಮಾಣವಾಗಲಿ.
ದೇವರಿಗೆ ನಮಸ್ಕಾರ ಮಾಡಿ
ಕುಲದೇವರಿಗೆ ಅಥವಾ ಉಪಾಸ್ಯದೇವರಿಗೆ ಮತ್ತು ಇತರ ದೇವತೆಗಳಿಗೆ ಮನಃಪೂರ್ವಕವಾಗಿ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಸಾಷ್ಟಾಂಗ ನಮಸ್ಕಾರ ಮಾಡಲು ಆಗದಿದ್ದಾಲ್ಲಿ ಕೈ ಜೋಡಿಸಿ ನಮಸ್ಕಾರ ಮಾಡಿ.
ದೇವರ ನಾಮವನ್ನು ಜಪಿಸಿ
ಕೊನೆಯದಾಗಿ ಕನಿಷ್ಟಪಕ್ಷ ೧೦ ನಿಮಿಷ ಕುಳಿತುಕೊಂಡು ದೇವರ ನಾಮವನ್ನು ಜಪಿಸಬೇಕು. ‘ನಾನು ಯಾವ ದೇವರ ಹೆಸರನ್ನು ಜಪಿಸಬೇಕು’ ಎಂಬ ಪ್ರಶ್ನೆಯು ನಿಮ್ಮಲ್ಲಿ ಈಗ ಉದ್ಭವಿಸಿರಬೇಕು.
ಅ. ಮಕ್ಕಳೇ, ಇತರ ದೇವಿ ದೇವತೆಗಳಿಗಿಂತ ನಮ್ಮ ಕುಲದೇವರು ನಮ್ಮ ಕರೆಗೆ ಬೇಗ ಸ್ಪಂದಿಸುತ್ತಾರೆ. ಆದುದರಿಂದ ಅವರ ಉಪಾಸನೆ ಮಾಡಲು ಅವರ ನಾಮಜಪಿಸಿ.
ಆ. ನಾಮಜಪ ಮಾಡುವಾಗ ದೇವಿ ದೇವತೆಗಳ ಹೆಸರಿನ ಮುಂದೆ ‘ಶ್ರೀ’ ಉಪಯೋಗಿಸಬೇಕು; ಹೆಸರನ್ನು ಚತುರ್ಥಿ ಪ್ರತ್ಯಯದಲ್ಲಿ ಹೇಳಬೇಕು ಮತ್ತು ನಮಃ ಸೇರಿಸಿರಬೇಕು. ಉದಾ : ಕುಲದೇವತೆ ಭಾವಾನೀದೇವಿ ಇದ್ದಲ್ಲಿ ‘ಶ್ರೀ ಭಾವನೀದೇವ್ಯೈ ನಮಃ’ ಎಂದು ಜಪಿಸಬೇಕು. ಉಪಾಸ್ಯದೇವತೆ ಗಣಪತಿ ಆಗಿದ್ದಲ್ಲಿ ‘ಶ್ರೀ ಗಣೇಶಾಯ ನಮಃ’ ಎಂದು ಜಪಿಸಬೇಕು. ಕುಲದೇವರು ಯಾರೆಂದು ತಿಳಿಯದಿದ್ದರೆ ಉಪಾಸ್ಯದೆವತೆಯ ನಾಮಜಪ ಮಾಡಬೇಕು.
ಇ. ದಿನವಿಡೀ ಸಮಯ ಸಿಕ್ಕಿದಾಗ ನಾಮಜಪ ಮಾಡಲು ಪ್ರಯತ್ನಿಸಬೇಕು.
ಸೂರ್ಯಾಸ್ತದ ಸಮಯದಲ್ಲಿ ಇದನ್ನು ಮಾಡಿ !
‘ಶುಭಂ ಕರೋತಿ’ಯನ್ನು ಪಠಿಸಿ ! : ಸೂರ್ಯಾಸ್ತದ ನಂತರ ಸಂಧಿಕಾಲವು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನಾವು ಆಚಾರ ಪಾಲನೆಯನ್ನು ಮಾಡಬೇಕು. ಮುಖ, ಕೈ ಕಾಲುಗಳನ್ನು ತೊಳೆದು, ದೇವರ ಮುಂದೆ ದೀಪವನ್ನು ಉರಿಸಿ ಕೈ ಮುಗಿದು ಮುಂದಿನ ಶ್ಲೋಕವನ್ನು ಪಠಿಸಿ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ | ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತುತೆ || |
ಅರ್ಥ: ದೀಪದ ಜ್ಯೋತಿಯು ಶುಭ ಮತ್ತು ಕಲ್ಯಾಣವನ್ನು ಉಂಟುಮಾಡುತ್ತದೆ, ಸ್ವಾಸ್ಥ್ಯ ಮತ್ತು ಐಶ್ವರ್ಯವನ್ನು ನೀಡುತ್ತದೆ, ಶತ್ರುಬುದ್ಧಿ ಅಂದರೆ ದ್ವೇಷದ ನಾಶ ಮಾಡುತ್ತದೆ, ಆದುದರಿಂದ ಹೇ ದೀಪಜ್ಯೋತಿಯೇ ನಿನಗೆ ನಮಸ್ಕಾರ.
ಸ್ತೋತ್ರಗಳನ್ನು ಪಠಿಸಿ : ‘ಶ್ರೀರಮರಕ್ಷಾ ಸ್ತೋತ್ರ‘, ‘ಹನುಮಾನ್ ಚಾಲೀಸಾ‘ ಮುಂತಾದ ಸ್ತೋತ್ರಗಳನ್ನು ಪಠಿಸಿ.