ಶ್ರೀ ಗಣಪತಿ, ಶ್ರೀ ಸರಸ್ವತೀದೇವಿ ಮತ್ತು ಕುಲದೇವತೆ / ಇಷ್ಟ ದೇವತೆಯ ಚಿತ್ರಗಳನ್ನು (ಅಥವಾ ಇವುಗಳಲ್ಲಿ ಉಪಲಬ್ಧವಿರುವ ಚಿತ್ರವನ್ನು) ನಿಮ್ಮ ಅಧ್ಯಯನದ ಸ್ಥಳ ಅಥವಾ ಕೊಠಡಿಯಲ್ಲಿ ಇಟ್ಟುಕೊಳ್ಳಿ.
೧. ದೇವರ ಚಿತ್ರಗಳ ಮುಂದೆ ಸಾತ್ವಿಕ ಊದುಬತ್ತಿಗಳನ್ನು ಹಚ್ಚಿರಿ
ಊದುಬತ್ತಿಯ ಸುಗಂಧವು ವಾತಾವರಣ ಹಾಗು ಮನಸ್ಸನ್ನು ಶುದ್ಧ ಮಾಡುತ್ತದೆ. ಹಾಗೆಯೇ, ವಾತಾವರಣದಲ್ಲಿ ಈಶ್ವರೀ ಚೈತನ್ಯವು ಪಸರಿಸಿ ಪ್ರಸನ್ನತೆಯ ಅನುಭವವಾಗುತ್ತದೆ. ಇದರಿಂದ ಮನಸ್ಸು ಉತ್ಸಾಹದಿಂದ ತುಂಬಿ ಏಕಾಗ್ರತೆಯೂ ಹೆಚ್ಚಾಗುತ್ತದೆ.
೨. ಪ್ರಾರ್ಥನೆಯನ್ನು ಮಾಡಿ
ಅ. ಅಧ್ಯಯನವನ್ನು ಪ್ರಾರಂಭಿಸುವ ಮೊದಲು, ವಿದ್ಯೆಯ ದೇವತೆಗಳಾದ ಶ್ರೀ ಗಣಪತಿ ಮತ್ತು ಶ್ರೀ ಸರಸ್ವತೀ ದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಿ, 'ಅಧ್ಯಯನವು ಚೆನ್ನಾಗಿ ನಡೆಯಲು ನನಗೆ ಬುದ್ಧಿಯನ್ನು ನೀಡಿ ಮತ್ತು ನಾನು ಅಧ್ಯಯನ ಮಾಡಲಿರುವ ಪಾಠಗಳು ನನಗೆ ಮನದಟ್ಟಾಗಲಿ'.
ಆ. ಅಧ್ಯಯನವನ್ನು ಮಾಡುವಾಗ ಪದೇ ಪದೇ ಕುಲದೇವತೆ ಅಥವಾ ಇಷ್ಟ ದೇವರಿಗೆ ಮುಂದಿನಂತೆ ಪ್ರಾರ್ಥನೆ ಮಾಡಿ 'ನನ್ನ ಅಧ್ಯಯನವು ಏಕಾಗ್ರತೆಯಿಂದ ಆಗಲಿ' ಎಂದು.
ಇ. ಅಧ್ಯಯನವನ್ನು ಪ್ರಾರಂಭಿಸುವ ಮೊದಲು, ೧೦ ನಿಮಿಷ ನಾಮಜಪವನ್ನು ಮಾಡಿ: ಪ್ರಾರ್ಥನೆ ಮಾಡಿದ ನಂತರ ಅಧ್ಯಯನದಲ್ಲಿ ಏಕಾಗ್ರತೆಯನ್ನು ಸಾಧಿಸಲು ೧೦ ನಿಮಿಷಗಳ ಕಾಲ ಕುಲದೇವತೆ ಅಥವಾ ಇಷ್ಟ ದೇವತೆಯ ನಾಮಜಪವನ್ನು ಮಾಡಿ.
ಆಧಾರ : ದೈನಿಕ ಸನಾತನ ಪ್ರಭಾತ ಪತ್ರಿಕೆ