ಮಕ್ಕಳೇ, ಶಿಕ್ಷಕರೊಂದಿಗೆ ನಿಮ್ಮ ವರ್ತನೆ ಹೀಗಿರಲಿ!

ನಾವು ನಮ್ಮ ಶಿಕ್ಷಕರೊಂದಿಗೆ ಆತ್ಮೀಯತೆಯಿಂದ ವರ್ತಿಸಬೇಕು. ನಮಗೆ ಅವರಿಂದಾಗಿ ಜ್ಞಾನಪ್ರಾಪ್ತಿಯಾಗುತ್ತದೆ. ಆದುದರಿಂದ ಅವರ ಬಗ್ಗೆ ನಾವು ಸತತ ಕೃತಜ್ಞರಾಗಿರಬೇಕು. ನಾವು ವಿದ್ಯಾರ್ಥಿಗಳಾಗಿದ್ದೇವೆ. ಜ್ಞಾನಗ್ರಹಿಸುವುದೇ ವಿದ್ಯಾರ್ಥಿಗಳ ಕರ್ಮವಾಗಿರುತ್ತದೆ. ಶಿಕ್ಷಕರೊಂದಿಗೆ ಗೌರವದಿಂದ ವರ್ತಿಸುವುದೇ ವಿದ್ಯಾರ್ಥಿಗಳ ಧರ್ಮವಾಗಿದೆ. ನಾವು ಶಿಕ್ಷಕರೊಂದಿಗೆ ಉದ್ಧಟತನದಿಂದ ವರ್ತಿಸಿದರೆ ಅಥವಾ ಅವರ ವಿರುದ್ಧ ಮಾತನಾಡಿದರೆ ಅಥವಾ ಅವರ ಮಾತನ್ನು ಕೇಳದಿದ್ದರೆ ನಾವು ಅಧರ್ಮಿಗಳಾಗುತ್ತೇವೆ. ನಮ್ಮ ವರ್ತನೆ ಧರ್ಮಕ್ಕನುಸಾರವಿರಬೇಕು.

ನಾನು ವಿದ್ಯಾರ್ಥಿಯಾಗಿದ್ದರೆ ನನ್ನ ವಿದ್ಯಾರ್ಥಿ ಧರ್ಮದ ಪಾಲನೆ ಮಾಡಲೇಬೇಕು. ಇಂದಿನಿಂದ ನಾವು ನಮ್ಮ ಧರ್ಮಕ್ಕನುಸಾರ ವರ್ತಿಸೋಣ. ಆಗ ದೇವರಿಗೆ ಇಷ್ಟವಾಗುತ್ತೇವೆ. ನಾವು ಕೃತಜ್ಞತೆಯಿಂದ ವರ್ತಿಸಿದರೆ ಶಿಕ್ಷಕರು ನಮಗೆ ಇನ್ನೂ ಹೊಸ ಜ್ಞಾನ ನೀಡಲು ಉತ್ಸುಕರಾಗುತ್ತಾರೆ. ಅವರಿಗೂ ತುಂಬಾ ಆನಂದವಾಗುತ್ತದೆ.

ಮಕ್ಕಳೇ, ಶಿಕ್ಷಕರೊಂದಿಗೆ ನಮ್ಮ ವರ್ತನೆಯು ಹೀಗಿರಬೇಕು !

  • ಶಾಲೆಯಲ್ಲಿ ಶಿಕ್ಷಕರಿಗೆ ‘ಸರ್’ ಎನ್ನದೆ ‘ಗುರುಗಳೇ’ ಎಂದು ಹೇಳಿ.
  • ಶಿಕ್ಷಕರು ಭೇಟಿಯಾದಾಗ ವಿನಯಪೂರ್ವಕವಾಗಿ ಕೈ ಜೋಡಿಸಿ ‘ನಮಸ್ಕಾರ ಗುರುಗಳೇ’ ಎಂದು ಹೇಳಿ.
  • ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಶಿಕ್ಷಕರಿಗೆ ತಲೆ ಬಾಗಿಸಿ ನಮಸ್ಕಾರ ಮಾಡಿ.
  • ಶಿಕ್ಷಕರ ಬಗ್ಗೆ ಗೌರವ ಭಾವನೆಯಿಂದ, ಅವರನ್ನು ನಮ್ರತೆ ಮತ್ತು ಪ್ರೇಮದಿಂದ ಮಾತನಾಡಿಸಿ.
  • ತರಗತಿಯಲ್ಲಿ ಇತರ ಮಕ್ಕಳಿಗೂ ಗೌರವದಿಂದಿರಲು ಕಲಿಸಿ.
  • ಶಿಕ್ಷಕರಿಂದ ವಿವಿಧ ವಿಷಯಗಳ ಜ್ಞಾನ ದೊರೆತಾಗ ಅದರ ಬಗ್ಗೆ ಕೃತಜ್ಞರಾಗಿರಿ.

ಶಿಕ್ಷಕರಲ್ಲಿ ದೇವರನ್ನು ನೋಡಲು ಕಲಿಯಬೇಕು!

ಶಿಕ್ಷಕರು ಹೇಳಿದ ಪ್ರತಿಯೊಂದು ಕೃತಿ ಆಚರಣೆಗೆ ತಂದರೆ ಅವರಿಗೆ ಇಷ್ಟವಾಗುತ್ತದೆ. ‘ಅವರು ದೇವರ ಸಮಾನರಾಗಿದ್ದಾರೆ’ ಎಂಬಂತೆ ಅವರೊಂದಿಗೆ ವರ್ತಿಸಬೇಕು. ಓರ್ವ ವಿದ್ಯಾರ್ಥಿಯು ಕುಚೋದ್ಯ ಮಾಡಲು ಆರಂಭಿಸಿದರೆ ಎರಡನೆಯವನು ಹಾಗೆಯೇ ಮಾಡುತ್ತಾನೆ. ಅಲ್ಲದೇ ಈಗಿನ ಕೆಲವು ಮಕ್ಕಳು ಶಿಕ್ಷಕರ ಬೆನ್ನ ಹಿಂದೆ ಅವರನ್ನುಅಣಕಿಸುತ್ತಾರೆ. ಶಿಕ್ಷಕರು ತರಗತಿಯಲ್ಲಿ ಕಲಿಸುತ್ತಿರುವಾಗ ಅವರಿಗೆ ಕೇಳಿಸದಂತೆ ತಮ್ಮೊಳಗೆ ಅವರ ಅಪಹಾಸ್ಯ ಮಾಡುತ್ತಾರೆ. ಇದರಿಂದ ಇತರ ಎಲ್ಲ ಮಕ್ಕಳೂ ಶಿಕ್ಷಕರನ್ನು ನೋಡಿ ನಗುತ್ತಾರೆ. ಅದು ಯೋಗ್ಯವಾಗಿದೆಯೇ ಅಥವಾ ಅಯೋಗ್ಯವಾಗಿದೆಯೇ ಎಂದು ನೋಡುವುದಿಲ್ಲ. ಆದುದರಿಂದ ನಾವು ಕೆಟ್ಟ ಗುಣಗಳಿಂದ ದೂರವಿರಬೇಕು. ಮಕ್ಕಳೇ, ನಾವು ಮಿತ್ರರಲ್ಲಿ ನಮ್ಮ ವಿದ್ಯಾರ್ಥಿಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ನಮ್ಮ ಮಿತ್ರರಿಂದಾಗುವ ಅಧರ್ಮ ನಿಮಗೆ ಇಷ್ಟವಾಗುತ್ತದೆಯೇ? ಎಲ್ಲರಲ್ಲಿರುವ ಪರಮೇಶ್ವರನೊಬ್ಬನೇ ಇದ್ದಾನೆ. ನಮ್ಮ ಶಿಕ್ಷರಲ್ಲಿಯೂ ದೇವರಿದ್ದಾನೆ. ಆದರೆ ನಾವು ಅವರ ವಿರುದ್ಧ ಮಾತನಾಡುತ್ತೇವೆ. ಅಂದರೆ ನಾವು ದೇವರಿಗೆ ವಿರುದ್ಧ ಮಾತನಾಡಿದಂತಾಗುತ್ತದೆಯಲ್ಲವೇ?

ಮಕ್ಕಳು ಶಿಕ್ಷಕರೊಂದಿಗೆ ಹೇಗೆ ವರ್ತಿಸಬೇಕು?

ವಿದ್ಯಾರ್ಥಿ ಮಿತ್ರರೇ, ನಮಗೆ ಆದರ್ಶವಾಗಿರುವವರು ಹಾಗೂ ಪ್ರತಿದಿನ ಹೊಸಹೊಸ ಜ್ಞಾನವನ್ನು ನೀಡುವವರೆಂದರೆ ಶಿಕ್ಷಕರು. ಶಿಕ್ಷಕರು ನಮಗಾಗಿ ತಮ್ಮ ತನು, ಮನದ ತ್ಯಾಗವನ್ನು ಮಾಡುತ್ತಾರೆ. ಅವರು ನಮಗೆ ಪ್ರತಿದಿನ ಜ್ಞಾನ ನೀಡಲು ಶ್ರಮಿಸುತ್ತಿರುತ್ತಾರೆ. ನಮಗಾಗಿ ಅವರು ಯಾವುದೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಇಂತಹ ಶಿಕ್ಷಕರೊಂದಿಗೆ ನಮ್ಮ ವರ್ತನೆ ಹೇಗಿರಬೇಕು? ವಿದ್ಯಾರ್ಥಿ ಮಿತ್ರರೇ, ನಾವು ಅವರೊಂದಿಗೆ ಕೃತಜ್ಞತಾಭಾವದಿಂದ ವರ್ತಿಸಬೇಕು. ಅವರಿಂದಾಗಿ ನಮಗೆ ಜೀವನದ ದಿಕ್ಕು ಸಿಗುತ್ತದೆ. ನಮಗೆ ಬಾಲ್ಯಾವಸ್ಥೆಯಲ್ಲಿ ಸರಿ-ತಪ್ಪು ಯಾವುದೆಂದು ತಿಳಿಯುವುದಿಲ್ಲ. ಅದುದರಿಂದ ಶಿಕ್ಷಕರೇ ನಮಗೆ ಒಳ್ಳೆಯ ಅಂಶಗಳನ್ನು ತಿಳಿಸಿ ಹೇಳುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ಕೆಲವೊಮ್ಮೆ ನಮ್ಮ ಮೇಲೆ ಸಿಟ್ಟು ಮಾಡುತ್ತಾರೆ, ಕೆಲವೊಮ್ಮೆ ಹೊಡೆಯುತ್ತಾರೆ, ಕೆಲವೊಮ್ಮೆ ಬೈಯುತ್ತಾರೆ! ಆದರೆ ಇದರ ಅರ್ಥ ಅವರು ನಮ್ಮನ್ನು ಪ್ರೀತಿಸುವುದಿಲ್ಲವೆಂದಲ್ಲ. ‘ನೀವು ಒಳ್ಳೆಯ ಸಂಸ್ಕಾರವಂತ ಮತ್ತು ಜ್ಞಾನಿಯಾಗಬೇಕು’ ಎನ್ನುವುದು ಅವರ ಉದ್ದೇಶವಾಗಿರುತ್ತದೆ. ಒಳ್ಳೆಯ ಧ್ಯೇಯದಿಂದ ಅವರು ಕೆಲವೊಮ್ಮೆ ಕಠೋರವಾಗುತ್ತಾರೆ. ನಮಗೆ ಬಾಲ್ಯಾವಸ್ಥೆಯಲ್ಲಿ ಅದು ತಿಳಿಯುವುದಿಲ್ಲ. ಅದರಿಂದ ಕೆಲವು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಉದ್ಧಟತನದಿಂದ ವರ್ತಿಸುತ್ತಾರೆ. ಅವರಿಗೆ ಎದುರುತ್ತರ ನೀಡುತ್ತಾರೆ ಮತ್ತು ಅವರ ಮಾತನ್ನು ಕೇಳುವುದಿಲ್ಲ.