ಉಪಾಸನೆಯನ್ನು ಮಾಡುವಾಗ ನಮ್ಮ ಹೃದಯದಲ್ಲಿರುವ ಭಕ್ತಿಯೆಂಬ ದೀಪವನ್ನು ತೆಜೋಮಯಗೊಳಿಸಲು ಮತ್ತು ದೇವರಿಂದ ಕೃಪಾಶೀರ್ವಾದವನ್ನು ಪಡೆಯಲು ಸುಲಭೋಪಾಯವೆಂದರೆ 'ಆರತಿ'. ಸಂತರು ಸಂಕಲ್ಪ ಮಾಡಿ ರಚಿಸಿದ ಆರತಿ ಹಾಡುಗಳನ್ನು ಹಾಡಿದರೆ ಆ ಉದ್ದೇಶವು ಖಂಡಿತವಾಗಿಯೂ ಈಡೇರುತ್ತದೆ. ಆದರೆ ಆರತಿಯನ್ನು ಹೃತ್ಪೂರ್ವಕವಾಗಿ, ಆರ್ತತೆಯಿಂದ ಮತ್ತು ಅಧ್ಯಾತ್ಮಶಾಸ್ತ್ರಕ್ಕನುಗುಣವಾಗಿ ಮಾಡಬೇಕು.
ಯಾವುದೇ ಉಪಾಸನೆಯನ್ನು ಮಾಡುವಾಗ ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡುವುದು ಯೋಗ್ಯವಾಗಿದೆ; ಯೋಗ್ಯ ಕೃತಿಗಳನ್ನು ಮಾಡುವುದರಿಂದ ಆ ಕೃತಿಯ ಪರಿಪೂರ್ಣ ಫಲವು ಪ್ರಾಪ್ತವಾಗುತ್ತದೆ. ಆರತಿ ಹಾಡನ್ನು ಹೇಗೆ ಹಾಡಬೇಕು, ಹಲವರಿಗೆ ಆರತಿಯನ್ನು ಹೇಗೆ ಬೆಳಗಬೇಕು, ಆರತಿಯ ಮುಂಚೆ ಮತ್ತು ನಂತರ ಮಾಡಬೇಕಾದ ಕೃತಿಗಳ ಯೋಗ್ಯ ಮಾಹಿತಿ ಇರುವುದಿಲ್ಲ; ಆದುದರಿಂದ ಅವರಿಂದ ಅಯೋಗ್ಯ ಕೃತಿಗಳಾಗಿ ಆರತಿಯ ಲಾಭ ಆಗುವುದಿಲ್ಲ. ಈ ಲೇಖನದಲ್ಲಿ ಅಧ್ಯಾತ್ಮಶಾಸ್ತ್ರಕ್ಕನುಸಾರ ಯೋಗ್ಯವಾಗಿ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ಆರತಿಯನ್ನು ಬೆಳಗುವ ಸಂಪೂರ್ಣ ಕೃತಿ
ಆರತಿಯನ್ನು ಬೆಳಗುವಾಗ ಮಾಡಬೇಕಾದ ಕೃತಿಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಅ. ಆರತಿಯ ಮುಂಚೆ ೩ ಸಲ ಶಂಖನಾದ ಮಾಡಬೇಕು
೧. ಶಂಖವಾನ್ನು ಊದುವಾಗ ಕುತ್ತಿಗೆ ಮೇಲೆ ಮಾಡಿ, ಊರ್ಧ್ವ ದಿಕ್ಕಿನೆಡೆಗೆ ಮನಸ್ಸಿನ ಏಕಾಗ್ರತೆಯನ್ನು ಸಾಧಿಸಬೇಕು.
೨. ಶಂಖವನ್ನು ಊದುವಾಗ ಕಣ್ಣುಗಳನ್ನು ಮುಚ್ಚಿಕೊಂಡು 'ಊರ್ಧ್ವ ದಿಕ್ಕಿನಿಂದ ನಮ್ಮೆಡೆಗೆ ಬರುವ ಈಶ್ವರನ ಮಾರಕ ಲಹರಿಗಳನ್ನು ಆಹ್ವಾನಿಸಿ ಅವುಗಳನ್ನು ಕಾರ್ಯನಿರತಗೊಳಿಸುತ್ತಿದ್ದೇವೆ' ಎಂಬ ಭಾವವನ್ನಿಡಬೇಕು.
೩. ಶಂಖ ಊದುವಾಗ ಆದಷ್ಟು ದೀರ್ಘ ಶ್ವಾಸವನ್ನು ಎಳೆದು, ಆ ಒಂದೇ ಉಸಿರಿನಲ್ಲಿ ಶಂಖವನ್ನು ಊದಬೇಕು.
೪. ಶಂಖ ನಾದವು ಮೆಲುಧ್ವನಿಯಿಂದ ಪ್ರಾರಂಭಿಸಿ ದೊಡ್ಡ ಧ್ವನಿಯಲ್ಲಿ ಕೊನೆಗೊಳ್ಳಬೇಕು
ಆ. ಶಂಖನಾದದ ನಂತರ ಆರತಿಯನ್ನು ಪ್ರಾರಂಭಿಸಬೇಕು
೧. 'ಭಗವಂತನು ನಮ್ಮ ಮುಂದೆ ಪ್ರತ್ಯಕ್ಷವಾಗಿ ಇದ್ದಾನೆ, ಮತ್ತು ನಾವು ಅವನಿಗೆ ಆರತಿಯನ್ನು ಮಾಡುತ್ತಿದ್ದೇವೆ' ಎಂಬ ಭಾವವನ್ನಿಟ್ಟುಕೊಂಡು ಆರತಿಯನ್ನು ಮಾಡಬೇಕು.
೨. ಆರತಿ ಹಾಡಿನ ಅರ್ಥವನ್ನು ತಿಳಿದುಕೊಂಡು ಹಾಡಬೇಕು
೩. ಆರತಿ ಹಾಡಿನ ಶಬ್ದಗಳ ಉಚ್ಚಾರವು ಅಧ್ಯಾತ್ಮಶಾಸ್ತ್ರಾನುಸಾರ ಯೋಗ್ಯವಾಗಿರಬೇಕು
ಇ. ಆರತಿಯನ್ನು ಹಾಡುವಾಗ ಚಪ್ಪಾಳೆ ತಟ್ಟಬೇಕು
೧. ಪ್ರಾಥಮಿಕ ಹಂತದ ಸಾಧಕರು : ಲಯಬದ್ಧವಾಗಿ ಹಾಡಲು ಚಪ್ಪಾಳೆಯನ್ನು ನಿಧಾನವಾಗಿ ತಟ್ಟಬೇಕು
೨. ಮುಂದಿನ ಹಂತದ ಸಾಧಕರು : ಚಪ್ಪಾಳೆಯನ್ನು ತಟ್ಟದೇ ಅಂತರ್ಮುಖವಾಗಲು ಪ್ರಯತ್ನಿಸಬೇಕು
ಈ. ಆರತಿಯನ್ನು ಹಾಡುವಾಗ ಚಪ್ಪಾಳೆಯ ಜೊತೆಗೆ ಇನ್ನಿತರ ವಾದ್ಯಗಳನ್ನು ಬಾರಿಸಬೇಕು
೧. ಘಂಟೆಯನ್ನು ಮಧುರ ಸ್ವರದಲ್ಲಿ ಬಾರಿಸಬೇಕು ಮತ್ತು ಅದರ ನಾದವು ಲಯಬದ್ಧವಾಗಿರಬೇಕು.
೨. ತಾಳ, ಜಾಂಜ್ (ಚಕ್ರತಾಳ), ಹಾರ್ಮೋನಿಯಂ, ತಬಲಾ ಈ ವಾದ್ಯಗಳ ಲಯಬದ್ಧವಾದ ಜೊತೆಯನ್ನು ನೀಡಬೇಕು.
ಉ. ಆರತಿಗಳನ್ನು ಹಾಡುವಾಗ ದೇವರಿಗೆ ಆರತಿಯನ್ನು ಬೆಳಗಬೇಕು.
೧. ಆರತಿಯನ್ನು ದೇವರ ಸುತ್ತಲೂ ಗಡಿಯಾರದ ಮುಳ್ಳು ಗಳು ತಿರುಗುವ ದಿಕ್ಕಿನಲ್ಲಿ ಪೂರ್ಣ ವರ್ತುಲಾಕಾರದಲ್ಲಿ ತಿರುಗಿಸ ಬೇಕು.
೨. ಆರತಿಯನ್ನು ಬೆಳಗುವಾಗ ದೇವರ ತಲೆಯ ಮೇಲಿನಿಂದ ಬೆಳಗಿಸದೆ ದೇವರ ಅನಾಹತಚಕ್ರದಿಂದ ಆಜ್ಞಾಚಕ್ರದ ವರೆಗೆ ಬೆಳಗಿಸಬೇಕು.
ಊ. 'ಘಾಲೀನ ಲೋಟಾಂಗಣ' ಪ್ರಾರ್ಥನೆಯನ್ನು ಮಾಡಬೇಕು.
ಎ. 'ಕರ್ಪೂರಗೌರಂ ಕರುಣಾವತಾರಂ' ಮಂತ್ರವನ್ನು ಹೇಳುತ್ತಾ ಕರ್ಪೂರ-ಆರತಿಯನ್ನು ಬೆಳಗಬೇಕು.
ಏ. ಕರ್ಪೂರದ ಆರತಿಯನ್ನು ಸ್ವೀಕರಿಸಬೇಕು
ಆರತಿಯನ್ನು ಹೇಗೆ ಸ್ವೀಕರಿಸುವುದು? ಎರಡೂ ಅಂಗೈಗಳನ್ನು ಜ್ಯೋತಿಯ ಮೇಲಿಟ್ಟು, ಎಡಗೈಯನ್ನು ತಲೆಯ ಮೇಲೆನಿಂದ ಹಿಡಿದು ಕುತ್ತಿಗೆಯ ತನಕ ಕೊಂಡೊಯ್ಯಬೇಕು. (ಕಾರಣಾಂತರದಿಂದ ಕರ್ಪೂರದ ಆರತಿಯನ್ನು ಮಾಡದಿದ್ದರೆ ತುಪ್ಪದ ನೀಲಾಂಜನದ ಜ್ಯೋತಿಯ ಮೇಲೆ ಅಂಗೈ ಹಿಡಿದು ಆರತಿಯನ್ನು ಸ್ವೀಕರಿಸಬಹುದು.)
ಓ. ದೇವರಿಗೆ ಶರಣಾಗತಭಾವದಿಂದ ನಮಸ್ಕರಿಸಬೇಕು.
ಔ. ಅನಂತರ ದೇವರ ಸುತ್ತಲೂ ಪ್ರದಕ್ಷಿಣೆಯನ್ನು ಹಾಕಬೇಕು. ದೇವರ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಲು ಸಾಧ್ಯವಿಲ್ಲದಿದ್ದರೆ ನಿಂತಲ್ಲಿಯೇ ಸ್ವಂತದ ಸುತ್ತಲೂ ಮೂರು ಪ್ರದಕ್ಷಿಣೆಗಳನ್ನು ಹಾಕಬೇಕು.
ಅಂ. ಇದರ ನಂತರ ಮಂತ್ರಪುಷ್ಪಾಂಜಲಿಯನ್ನು ಹೇಳಬೇಕು.
ಕ. ಮಂತ್ರಪುಷ್ಪಾಂಜಲಿಯನ್ನು ಹೇಳಿದ ನಂತರ, ದೇವರ ಚರಣಗಳಿಗೆ ಹೂವು ಮತ್ತು ಅಕ್ಷತೆಯನ್ನು ಅರ್ಪಿಸಬೇಕು.
ಖ. ಅದಾದ ನಂತರ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು.
ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ | |
ಅರ್ಥ : ನನಗೆ ನಿನ್ನ ಆವಾಹನೆ ಮತ್ತು ಅರ್ಚನೆ, ಹಾಗೆಯೇ ನಿನ್ನ ಪೂಜೆಯನ್ನು ಹೇಗೆ ಮಾಡಬೇಕು ಎಂಬುದೂ ತಿಳಿದಿಲ್ಲ. ಪೂಜೆ ಮಾಡುವಾಗ ಏನಾದರೂ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸು. ಹೇ ದೇವಾ, ನಾನು ಮಂತ್ರಹೀನ, ಕ್ರಿಯಾಹೀನ ಮತ್ತು ಭಕ್ತಿಹೀನ ನಾಗಿದ್ದೇನೆ. ನಾನು ನಿನ್ನ ಆರತಿ / ಪೂಜೆಯನ್ನು ಮಾಡಿದ್ದೇನೆ, ಅದನ್ನು ನೀನು ಪರಿಪೂರ್ಣವಾಗಿ ಮಾಡಿಸಿಕೋ. ಹಗಲುರಾತ್ರಿ ನನ್ನಿಂದ ತಿಳಿದೋ ತಿಳಿಯದೆಯೋ ಸಾವಿರಾರು ಅಪರಾಧ ಗಳಾಗುತ್ತವೆ. ‘ನಾನು ನಿನ್ನ ದಾಸನಾಗಿದ್ದೇನೆ’, ಎಂದು ತಿಳಿದು ನನ್ನನ್ನು ಕ್ಷಮಿಸು.
ಗ. ತದನಂತರ ದೇವತೆಗಳ ಹೆಸರಿನ ಜಯಘೋಷವನ್ನು ಮಾಡಬೇಕು.
ಆರತಿ ಸಂಗ್ರಹ (ಮರಾಠಿ)