ಕನ್ನಡದಲ್ಲೇ ಏಕೆ ಮಾತಾನಾಡಬೇಕು?

ಪ್ರಯೋಗ

ನಾವು ಒಂದು ಪ್ರಯೋಗವನ್ನು ಮಾಡೋಣ. ಮೊದಲಿಗೆ ೧೦ ಬಾರಿಹ್ಯಾಪಿ ಬರ್ಥ್ ಡೇಎಂದು ಹೇಳಿ ಅನಂತರ ೧೦ ಬಾರಿಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳುಎಂದು ಹೇಳಿರಿ. ಹೀಗೆ ಮಾಡಿದಾಗ ಏನನಿಸಿತು ಎಂಬುದನ್ನು ಅರಿತುಕೊಂಡು ಅನಂತರವೇ ಮುಂದಿನ ಭಾಗವನ್ನು ಓದಿರಿ.

ಆಂಗ್ಲ ಭಾಷೆಯು ತಮ ಪ್ರಧಾನ ಭಾಷೆಯಾಗಿದೆ. ಅಂದರೆ ಅದರಲ್ಲಿ ಒಳ್ಳೆಯ ಸ್ಪಂದನಗಳು ಇರುವುದಿಲ್ಲ. ಆದ್ದರಿಂದ ನಾವು ಆಂಗ್ಲಭಾಷೆಯಲ್ಲಿ ಶುಭಾಶಯ ನೀಡಿದರೆ ಅದರಿಂದ ಏನೂ ಉಪಯೋಗವಾಗುವುದಿಲ್ಲ ಬದಲಾಗಿ ಶುಭಾಶಯ ನೀಡುವವರು ಮತ್ತು ಪಡೆಯುವವರಿಗೆ ತೊಂದರೆಯಾಗುತ್ತದೆ. ಶುಭಾಶಯ ನೀಡುವಾಗ ನಾವು ಆಂಗ್ಲ ಭಾಷೆಯಲ್ಲಿ ನೀಡದೆ ಕನ್ನಡದಲ್ಲೇ ಕೊಟ್ಟು ಸ್ವಭಾಷಾಭಿಮಾನವನ್ನು ಹೆಚ್ಚಿಸೋಣ. ನಮ್ಮ ಹಿಂದೂಗಳ ಹಬ್ಬ ಮತ್ತು ಉತ್ಸವಗಳ ಸಮಯದಲ್ಲಿ ಆಂಗ್ಲದಲ್ಲಿ ಶುಭಾಶಯ ನೀಡುವುದು ನಮಗೆ ಯೋಗ್ಯವೆನಿಸುತ್ತದೆಯೇನು? ಯಾವ ಆಂಗ್ಲರು ೨೦೦ ವರ್ಷಗಳಷ್ಟು ಕಾಲ ನಮ್ಮ ದೇಶದಲ್ಲಿ ನಮ್ಮನ್ನು ಗುಲಾಮರನ್ನಾಗಿಸಿ ರಾಜ್ಯವಾಳಿದರೋ, ಯಾರು ಭಾರತೀಯರ ಮೇಲೆ ಅನ್ಯಾಯ, ಅತ್ಯಾಚಾರ ಮಾಡಿದರೋ, ಅಂತಹ ಆಂಗ್ಲರಂತೆ ಉಡುಪುಗಳನ್ನು ಧರಿಸುವುದು, ಹುಟ್ಟುಹಬ್ಬ ಆಚರಿಸುವುದು, ಅವರಂತೆ ಮಾತನಾಡುವುದು ನಮಗೆ ಯೋಗ್ಯವೇ?

ನಮ್ಮಲ್ಲಿ ಸ್ವಭಾಷಾಭಿಮಾನ ಕಡಿಮೆಯಾಗುತ್ತಾ ಹೋಗುತ್ತಿರುವುದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ನಾವು ಅಮ್ಮಅಪ್ಪನ ಬದಲಿಗೆ ಮಮ್ಮಿಡ್ಯಾಡಿ ಎನ್ನುವುದು. ಆದರೆ ಮಕ್ಕಳೇ, ಶಬ್ದಗಳ ಅರ್ಥವೇನೆಂಬುದನ್ನು ಎಂದಾದರೂ ವಿಚಾರ ಮಾಡಿದ್ದೀರೇನು? ಮಮ್ಮಿ ಎಂದರೆ ಈಜಿಪ್ತ್ ಪಿರಿಮಿಡ್ ಗಳಲ್ಲಿನ ಸತ್ತವರ ಶವ ಮತ್ತು ಡ್ಯಾಡಿ ಎಂದರೆ ಡೆಡ್ (ಮೃತ) ಎಂದರ್ಥವಾಗಿದೆ. ನಮ್ಮನ್ನು ಹೆತ್ತುಹೊತ್ತು ಸಾಕಿದ ಅಮ್ಮಅಪ್ಪನನ್ನೇ ಸತ್ತವರ ಶವಕ್ಕೆ ಹೋಲಿಸುವ ಕೆಟ್ಟ ಭಾಷೆಯನ್ನೇ ನಾವು ರಾಜಾರೋಷವಾಗಿ ಉಪಯೋಗಿಸುತ್ತಿದ್ದೇವೆ. ಇದಕ್ಕಿಂತ ಅಮ್ಮಅಪ್ಪ ಎಂದರೆ ನಮ್ಮಲ್ಲಿ ಸ್ವಭಾಷಾಭಿಮಾನ ಜಾಗೃತವಾಗುತ್ತದೆಯಲ್ಲವೇ. ಮಕ್ಕಳೇ ಈಗ ನೀವೇ ನಿರ್ಧರಿಸಿ, ನಾವು ಆಂಗ್ಲರಂತೆ ವರ್ತಿಸಬೇಕೋ ಅಥವಾ ಶ್ರೇಷ್ಠ ಭಾರತೀಯ ಸಂಸ್ಕೃತಿಯಂತೆ ವರ್ತಿಸಬೇಕೋ ಎಂದು.

Leave a Comment