ನಮ್ಮ ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಹೀಗಾಗಬೇಕಾದರೆ ಪಾಲಕರಲ್ಲಿ ತಮ್ಮ ಮಕ್ಕಳಲ್ಲಿ ಯಶಸ್ವೀ ಆಗಲು ಯಾವ ಗುಣಗಳಿರಬೇಕು, ಮತ್ತು ಎನಿರಬಾರದು ಎಂಬ ಸ್ಪಷ್ಟತೆ ಇರಬೇಕು! ಆದುದರಿಂದ ಪಾಲಕರು ಸ್ವತಃ ತಮ್ಮ ಜೀವನವನ್ನು ಅವಲೋಕಿಸುವ ದೃಷ್ಟಿಕೋನವೂ ಸ್ಪಷ್ಟವಾಗಿರಬೇಕು. ಈ ರೀತಿಯಲ್ಲಿ ನಿಶ್ಚಯವಿರಬೇಕಾದರೆ ಮುಂದಿನ ಪ್ರಶ್ನೆಗಳನ್ನು ಸ್ವಂತ ಮನಸ್ಸಿಗೆ ಕೇಳಬೇಕು.
೧. ನನ್ನ ಧ್ಯೇಯ ಕೇವಲ ದುಡ್ಡು ಸಂಪಾದಿಸುವುದು ಮತ್ತು ಯಶಸ್ಸು ಆಗಿದ್ದರೆ, ಅದು ಈಡೇರಿ ನಾನು ಸುಖವಾಗಿದ್ದೇನೆಯೇ? ನನ್ನ ಮಕ್ಕಳು ಕೂಡ ಅದೇ ಹಾದಿಯಲ್ಲಿ ಹೋಗಬೇಕೇ, ಅಥವಾ ನನಗೆ ತಿಳಿದಿರುವ ಜೀವನದೆ ವ್ಯಾಪಕತೆ, ಮತ್ತು ಅನುಭವಗಳ ಲಾಭ ಅವರಿಗೆ ಈಗಿನಿಂದಲೇ ಕೊಡಬೇಕೇ?
೨. ನನ್ನ ಮಗುವನ್ನು ಒಂದು ವೃತ್ತಿಯಲ್ಲಿ ಕಳುಹಿಸಬೇಕೆಂಬುದು ಕೇವಲ ನನ್ನ ಇಚ್ಚೆಯಾಗಿದೆಯೇ ಅಥವಾ ಅದು ನನ್ನ ಮಗುವಿನ ಇಚ್ಛೆಯೂ ಆಗಿದೆಯೇ? ಅವನಿಗೇನಾದರೂ ಬೇರೆ ವೃತ್ತಿಯಲ್ಲಿ ಆಸಕ್ತಿಯಿದೆಯೇ? ಅದಕ್ಕೇನಾದರೂ ನೀವು ಅನುವು ಮಾಡಿಕೊಟ್ಟಿದ್ದೀರಾ? ಅಥವಾ ಕಟ್ಟುನಿಟ್ಟಾಗಿ ಹೇಳಿದ್ದೀರಾ?
ನಿಮ್ಮ ಮಕ್ಕಳ ಅಧ್ಯಯನದ ಸಮಯವನ್ನು ನಿಯೋಜಿಸುವಾಗ ಮುಂದೆ ನೀಡಿರುವ ಸೂತ್ರಗಳನ್ನು ಗಮನದಲ್ಲಿಟ್ಟುಕೊಳ್ಳಿ !
ಎಲ್ಲ ವಿದ್ಯಾರ್ಥಿಗಳ ವೇಳಾಪಟ್ಟಿಗಳು ಒಂದೇ ರೀತಿಯಿರಲು ಸಾಧ್ಯವಿಲ್ಲ. ನಿಮ್ಮ ಮಗುವಿನ ವೇಳಾಪಟ್ಟಿಯು ಮುಂದಿನ ವಿಷಯಗಳನ್ನು ಅವಲಂಬಿಸುತ್ತದೆ –
೧. ಮಗುವಿನ ವ್ಯಕ್ತಿತ್ವ ಉದಾ. ತುಂಟತನ, ಓದಿನಲ್ಲಿ ಆಸಕ್ತಿಯುಳ್ಳ, ಒಬ್ಬಂಟಿ ಇತ್ಯಾದಿ
೨. ಲಭ್ಯವಿರುವ ಸಾಧನಗಳು
೩. ಅಧ್ಯಯನಕ್ಕೆ ಅವಶ್ಯಕವಾಗಿರುವ ಸಮಯ (ಈ ಸಮಯ ಹೆಚ್ಚು ಕಮ್ಮಿ ಆಗುತ್ತಿರುತ್ತದೆ)
೪. ಪೂರ್ಣ ವರ್ಷದ ಸಮಯ ಮಿತಿ ಉದಾ. ಪರೀಕ್ಷೆಯ ಸಮಯ ಮತ್ತು ಇತರ ಸಮಯ ಮಿತಿಗಳು
೫. ಮಗು ಕಲಿಯುತ್ತಿರುವ ತರಗತಿ
ವೇಳಾಪಟ್ಟಿಯನ್ನು ತಯಾರಿಸುವಾಗ ಗಮನಿಸಬೇಕಾದ ಇತರ ವಿಷಯಗಳು
೧. ಮನೆಪಾಠ ಮುಗಿಸಲು ತಗಲುವ ಸಮಯ
೨. ವೇಳಾಪಟ್ಟಿಯ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಎಷ್ಟು ಸಮಯ ಬೇಕು?
೩. ಯಾವುದಾದರೂ ಸೂತ್ರ ಅಥವಾ ಪ್ರಶ್ನೆಗೆ ಉತ್ತರ ನೆನಪಿಟ್ಟುಕೊಳ್ಳಲು ಎಷ್ಟು ಸಮಾಯ ಬೇಕಾಗಬಹುದು?
೪. ಯಾವುದಾದರೊಂದು ಸೂತ್ರವನ್ನು ಬಾಯಿಪಾಠ ಮಾಡಲು ಎಷ್ಟು ಸಮಯ ಬೇಕು?
ಸ್ವಲ್ಪದರಲ್ಲಿ ಹೇಳಬೇಕಾದರೆ, ವೇಳಾ ಪಟ್ಟಿಯು 'ಇಷ್ಟು ಸಮಯದಲ್ಲಿ ಇಷ್ಟು ಅಧ್ಯಯನ ಮಾಡಬೇಕು' ಎಂದಿರದೆ, ನಿಮ್ಮ ಮಗುವಿನ ಪ್ರಕೃತಿ, ಸಾಮರ್ಥ್ಯ ಮತ್ತು ಅಧ್ಯಯನಕ್ಕೆ ಬೇಕಾಗುವೆ ಸಮಯ, ಅಧ್ಯಯನದಲ್ಲಿ ಪ್ರಾಧಾನ್ಯತೆ, ಯಾವಾಗ ಉತ್ತಮ ಅಧ್ಯಯನ ಮಾಡಬಹುದು, ಮಗುವಿನ ಮನಸ್ಸು ತಾಜಾತನದಿಂದ ತುಂಬಿದಾಗ ಹೇಗೆ ಗ್ರಹಿಸುವ ಕ್ಷಮತೆ ಹೆಚ್ಚಿರುತ್ತದೆ, ಇತ್ಯಾದಿ ವಿಷಯಗಳತ್ತ ಗಮನ ಇಟ್ಟುಕೊಂಡು ವೇಳಾ ಪಟ್ಟಿಯನ್ನು ತಯಾರಿಸಬೇಕು. ಅಧ್ಯಯನ ಒಳ್ಳೆದು ಮತ್ತು ಲಾಭದಾಯಕವಾಗಲು, ನಿಮ್ಮ ಮಗುವಿಗೆ ನಿಯಮಿತ ವ್ಯಾಯಾಮ, ಮೈದಾನಗಳ ಆಟ, ಇತರರ ಮಕ್ಕಳ ಜೊತೆ ಆಟಗಳು ಅತ್ಯಗತ್ಯ.
ಪಾಲಕರಾಗಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದತ್ತ ಹೇಗೆ ಗಮನ ನೀಡಬೇಕು?
ಮಕ್ಕಳ ವಯಸ್ಸು ಏನು, ಅವರ ಕ್ಷಮತೆ ಏನು ಎಂದು ಗಮನದಲ್ಲಿ ಇಟ್ಟುಕೊಳ್ಳಬೇಕು. ಅವರಿಗೆ ಯಾವ ರೀತಿಯ ಸಹಾಯದ ಅವಶ್ಯಕತೆ ಇದೆ ಎಂದು ನೋಡಿಕೊಂಡು ಅದೇ ರೀತಿಯ ಸಹಾಯವನ್ನು ನೀಡಲು ಪ್ರಯತ್ನ ಮಾಡಬೇಕು. ಉದಾ. ಕೆಲವು ಮಕ್ಕಳಿಗೆ ನೀವು 'ಅಧ್ಯಯನಕ್ಕೆ ಕುಳಿತುಕೊಳ್ಳುವ ಸಮಯ ಆಗಿದೆ' ಎಂದು ನೆನಪು ಮಾಡಿ ಕೊಟ್ಟರೆ ಸಾಕು, ಅಥವಾ ಕೆಲವು ಮಕ್ಕಳಿಗೆ ನೀವು ಪ್ರೋತ್ಸಾಹ ನೀಡಿದರೆ ಸಾಕು, ಇನ್ನೂ ಕೆಲವರಿಗೆ ನೀವು ಅಧ್ಯಯನ ಮಾದುಬ್ವಾಗ ಸಹಾಯ ಮಾಡಬೇಕಾಗುತ್ತದೆ. ಮಕ್ಕಳಿಗೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯ ಅವಶ್ಯಕತೆಗಳು ಇರುತ್ತವೆ. ಅದರ ಪ್ರಕಾರ ಪಾಲಕರು ತಮ್ಮ ಸಮಯ, ಕ್ಷಮತೆ, ಇತರ ಕಾರ್ಯಗಳ ಪ್ರಾಧಾನ್ಯತೆ ನೋಡಿ ಮಕ್ಕಳಿಗೆ ಸಹಾಯ ನೀಡಬೇಕು.
– ಮಾನಸೋಪಚಾರ ತಜ್ಞೆ ಮತ್ತು ಪಾಲಕಿ, ಆಧುನಿಕ ವೈದ್ಯೆ ಸೌ. ನಂದಿನೀ ಸಾಮಂತ