‘ಮನುಷ್ಯನ ಗುಣಗಳನ್ನು ಅವನ ಬರವಣಿಗೆಯಿಂದ ಗುರುತಿಸಬಹುದು’ ಎಂಬ ಉಕ್ತಿಯಿದೆ. ಉದಾ. ಅವರ ದಕ್ಷತೆ, ಶಿಸ್ತು ಮತ್ತು ಚತುರತೆಯು ಅವರ ಬರವಣಿಗೆಯ ಮೂಲಕ ಕಂಡು ಹಿಡಿಯಬಹುದು.
‘ಉತ್ತಮವಾದ ಬರವಣಿಗೆಯೇ ನಮ್ಮ ಆಭರಣವಾಗಿದೆ’ ಎಂಬ ಪ್ರಸಿದ್ದ ಉಕ್ತಿ ಇದೆ. ಸಮರ್ಥರಾಮದಾಸರು ಹೀಗೆ ಹೇಳಿದ್ದಾರೆ – ನಮ್ಮ ಅಕ್ಷರವು ಉತ್ತಮವಾಗಲು ನಾವು ದಿನಾಲು ಒಂದು ಅಕ್ಷರವನ್ನು ಪದೇ ಪದೇ ಬರೆಯುವ ಅಭ್ಯಾಸವನ್ನು ಮಾಡಬೇಕು. ನಮ್ಮ ಅಕ್ಷರವನ್ನು ನೋಡಿ ಬುದ್ದಿವಂತರು ಆಶ್ಚರ್ಯಪಡಬೇಕು. ಅದಕ್ಕೆ ಪ್ರತಿಯೊಂದು ಅಕ್ಷರವೂ ಸ್ಪಷ್ಟವಾಗಿರಬೇಕು, ಎರಡು ಅಕ್ಷರಗಳ ನಡುವೆ ಸಮಾನಾಂತರವಿದ್ದು, ಪ್ರತಿಯೊಂದು ಅಕ್ಷರದ ತಿರುವುಗಳನ್ನು, ಒತ್ತಕ್ಷರಗಳನ್ನು ಅಂದವಾಗಿ ಬರೆದಿರಬೇಕು.
‘ಅಸ್ವಚ್ಚ ಬರವಣಿಗೆಯು ನಮ್ಮ ಅಪೂರ್ಣ ವಿದ್ಯೆಯ ಸಂಕೇತವಾಗಿದೆ’ ಎಂಬ ವಿಚಾರವನ್ನು ನೆನೆಪಿನಲ್ಲಿ ಇಟ್ಟುಕೊಳ್ಳಿ!
ಬರವಣಿಗೆಯನ್ನು ಹೇಗೆ ಅಂದಗೊಳಿಸುವುದು ?
೧. ಶಾಂತವಾಗಿ ತೇದಕಚಿತ್ತದಿಂದ ಒಂದೊಂದು ಅಕ್ಷರವನ್ನು ಬರೆಯುವುದು.
೨. ಬರವಣಿಗೆಯು ಸ್ವಷ್ಟವಾಗಿರುವುದು
೩. ಎರಡು ಶಬ್ದಗಳನ್ನುಸಮಾನಾಂತರದಲ್ಲಿ ಬರೆಯಬೇಕು.
೪. ಪ್ರತಿದಿನ ಬರವಣಿಗೆಯ ಪುಸ್ತಕದಲ್ಲಿ ಅಕ್ಷರಾಭ್ಯಾಸ ಮಾಡುವುದು
೫.ಅಂದವಾಗಿ ಅಕ್ಷರವನ್ನು ಬರೆಯುವವರ ಮಾರ್ಗದರ್ಶನವನ್ನು ಪಡೆಯುವುದು.
೬.ಆದಷ್ಟು ನೀಲಿಬಣ್ಣದ ಲೇಖನಿಯನ್ನು (ಪೆನ್) ಉಪಯೋಗಿಸುವುದು.
ಇದರ ಜೊತೆಗೆ ಪ್ರತಿದಿನ ಎರಡು ಪುಟ ನಿಮ್ಮ ಕುಲದೇವರ ನಾಮಜಪವನ್ನು ಮತ್ತು ದತ್ತಗುರುಗಳ ಜಪವನ್ನು (ಶ್ರೀ ಗುರುದೇವ ದತ್ತ |) ಬರೆಯುವ ಅಭ್ಯಾಸವನ್ನು ಮಾಡಿಕೊಳ್ಳಿ!