ಓದುವಾಗ ವಹಿಸಬೇಕಾದ ಜಾಗರೂಕತೆ
ಅ. ಬೆನ್ನು ನೇರವಾಗಿಟ್ಟು ಕುಳಿತುಕೊಂಡು ಓದಬೇಕು.
ಆ. ಓದುವಾಗ ಮೇಜು (ಟೇಬಲ್) ಮತ್ತು ಕುರ್ಚಿ ಸ್ಥಿರವಾಗಿರಬೇಕು. ಪುಸ್ತಕ ಮತ್ತು ಕಣ್ಣುಗಳ ಅಂತರ ೩೦ ರಿಂದ ೩೫ ಸೆಂ.ಮೀ.ನಷ್ಟಿರಬೇಕು.
ಇ. ಓದಲು ಕುಳಿತುಕೊಳ್ಳುವ ಕೋಣೆಯಲ್ಲಿ ಸಾಕಷ್ಟು ಬೆಳಕಿರಬೇಕು. ಸಾಧ್ಯವಾದರೆ ಬೆಳಕು ಪುಸ್ತಕದ ಹಿಂದೆ ಮತ್ತು ಎಡಗಡೆಯಿಂದ ಇರಬೇಕು. ಏಕೆಂದರೆ ಪುಸ್ತಕವನ್ನು ಬಲಗೈಯಲ್ಲಿ ಹಿಡಿದರೆ ಬೆರಳಿನ ನೆರಳು ಪುಸ್ತಕದ ಮೇಲೆ ಬೀಳದಹಾಗೆ ಸಹಾಯವಾಗುತ್ತದೆ.
ಈ. ಓದುವುದು, ಬೆರಳಚ್ಚು (ಟೈಪಿಂಗ್), ಚಿತ್ರಕಲೆ, ಹೊಲಿಗೆ ಮುಂತಾದವುಗಳನ್ನು ತುಂಬಾ ಹೊತ್ತು ಮಾಡಬೇಕಾದರೆ, ೧೫-೨೦ ನಿಮಿಷಗಳಿಗೊಮ್ಮೆ ದೂರದ ವಸ್ತುವಿನ ಮೇಲೆ ದೃಷ್ಟಿಯನ್ನು ಸ್ಥಿರಗೊಳಿಸಬೇಕು, ಅಥವಾ ೧-೨ ನಿಮಿಷಕ್ಕೆ ಕಣ್ಣು ರೆಪ್ಪೆಗಳನ್ನು ಮುಚ್ಚಬೇಕು, ಅಥವಾ ಯಾವುದಾದರೊಂದು ವುಸ್ತುವಿನ ಮೇಲೆ ಏಕಾಗ್ರತೆಯನ್ನು ಸಾಧಿಸಬೇಕು.
ಉ. ಕಣ್ಣುಗಳಿಗೆ ಒತ್ತಡವಾಗಬಾರದೆಂದು, ಮಧ್ಯಮಧ್ಯದಲ್ಲಿ ತಂಪು ನೀರಿನಿಂದ ಕಣ್ಣುಗಳನ್ನು ತೊಳೆಯುವುದು, ಪ್ರತಿದಿನ ಕಣ್ಣುಗಳ ವ್ಯಾಯಾಮ ಮಾಡುವುದು ರೂಢಿಸಿಕೊಳ್ಳಬೇಕು.