ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಮುಲ್ಕಿಯಲ್ಲಿದ್ದು ಸಾಂಪ್ರದಾಯಕವಾಗಿ ಸಾಮಾಜಿಕವಾಗಿ ವೇದಘೋಷಗಳೊಂದಿಗೆ ಎಲ್ಲಾ ಮತಗಳ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ರಥವನ್ನು ಮೊಗವೀರರಿಂದ ಅಲಂಕರಿಸುತ್ತಾರೆ. ಕೊರಗರ ಕೋಲುಕುಣಿತ ಬ್ರಾಹ್ಮಣರ ವೇದಘೋಷಗಳಿಂದ ಮತ್ತು ಆಗಾಮ ಮತ್ತು ಜೈನರು, ಮುಸ್ಲಿಂರು ಭಾಗವಹಿಸುತ್ತಾರೆ.
ಬಪ್ಪ ಬ್ಯಾರಿ ಎಂಬ ಕೇರಳ ವ್ಯಾಪಾರಿಯು ದೇವಸ್ಥಾನವನ್ನು ಕಟ್ಟಿರುವರು. ಇದು ದೇವಿಯ ಮಹಿಮೆಯನ್ನು ತಿಳಿಸುತ್ತದೆ. ಮುಲ್ಕಿ ನದಿಯ ಪ್ರವಾಹದಲ್ಲಿ ದೇವಸ್ಥಾನವು ನಶಿಸಿತು. ಆದರೆ ೫ಲಿಂಗಗಳ ಪೀಠಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಒಂದು ದಿನ ಬಪ್ಪ ಬ್ಯಾರಿ ಹಡಗು ಆ ಕಲ್ಲುಗಳಿಗೆ ಡಿಕ್ಕಿ ಹೊಡೆತು. ಆಗ ಅವನಿಗೆ ದುರ್ಗಾದೇವಿಯು ಕನಸಿನಲ್ಲಿ ಬಂದು ಆ ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದಂತಾಯಿತು. ಆದ್ದರಿಂದ ಈ ಸ್ಥಳವನ್ನು ಬಪ್ಪ ಎಂದು ಕರೆಯುತ್ತಾರೆ.
ಈ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ಬಪ್ಪ ಬ್ಯಾರಿ ಮನೆತನದವರು ಉತ್ಸವಗಳಲ್ಲಿ ಪ್ರಸಾದವನ್ನು ಹಂಚುತ್ತಾರೆ ಈ ಮನೆತನದವರು ಹೂವು ಹಣ್ಣುಗಳನ್ನು ಅರ್ಪಿಸುತ್ತಾರೆ.
ಆ ೫ ಲಿಂಗಗಳು ಯಾವುವೆಂದರೆ ಮೂಲ ದುರ್ಗ, ಅಗ್ನಿ ದುರ್ಗ, ಜಲದುರ್ಗ, ವನದುರ್ಗ, ಆಗ್ರಾದುರ್ಗ ಇವೆಲ್ಲವುಗಳು ಒಂದೇ ಪಾಣಿಪೀಠದಲ್ಲಿ ಸ್ಥಾಪಿಸಿದ್ದಾರೆ. ಮುಖ್ಯವಾದ ಹಬ್ಬಗಳು ಯಾವುವೆಂದರೆ ಕಾರ್ತಿಕ ಪೂಜಾ ದೀಪೋತ್ಸವ, ಶರನ ನವರಾತ್ರಿ ಯುಗಾದಿ ಮತ್ತು ಶುಕ್ರವಾರ ವಿಶೇಷ ಪೂಜೆಗಳು ಜಾತ್ರೆಯು ಮಾರ್ಚ್-ಏಪ್ರಿಲ್‌ಗಳಲ್ಲಿ ೯ ದಿನಗಳು ನಡೆಯುತ್ತವೆ. ಅದೇ ಸಮಯದಲ್ಲಿ ೨ ಗುಂಪುಗಳ ನಡುವೆ ನಡೆಯುವ ತುಳಿದಾರ ಆಟವು ಭಕ್ತಾದಿಗಳಲ್ಲಿ ಆನಂದವನ್ನು ತರುತ್ತವೆ. ದೇವಸ್ಥಾನವು ೫ ರಥಗಳನ್ನು ಹೊಂದಿದೆ.