ನವರಾತ್ರ್ಯೋತ್ಸವದಲ್ಲಿ ನಡೆಯುವ ತಪ್ಪು ಆಚಾರಗಳನ್ನು ತಪ್ಪಿಸಿ!
ಅ. ಥರ್ಮೊಕೊಲಿನ ಉಪಯೋಗ : ಅನೇಕರು ದೇವಿಯ ಸುತ್ತ ನಿರ್ಮಿಸುವ ಪ್ರಭಾವಳಿಯನ್ನು ಥರ್ಮೊಕೊಲಿನಿಂದ ತಯಾರಿಸುತ್ತಾರೆ. ಥರ್ಮೊಕೊಲ್ ನೀರಿನಲ್ಲಿ ಕರಗುವುದಿಲ್ಲ, ಅದನ್ನು ಅಗ್ನಿಯಲ್ಲಿ ವಿಸರ್ಜಿಸಿದರೆ ವಾಯುಮಾಲಿನ್ಯವಾಗುತ್ತದೆ. ಆದುದರಿಂದ ಥರ್ಮೊಕೊಲಿನ ಉಪಯೋಗವನ್ನು ಆದಷ್ಟು ತಪ್ಪಿಸಿ.
ಆ. ಪಟಾಕಿಗಳ ಉಪಯೋಗ : ಮೂರ್ತಿಯನ್ನು ಮನೆಗೆ ತರುವಾಗ ಪಟಾಕಿಗಳನ್ನು ಸಿಡಿಸಬಾರದು. ನಾವು ಧ್ವನಿ ಪ್ರದೂಷಣ ಮಾಡಿದರೆ ದೇವಿಗೆ ಅದು ಇಷ್ಟವಾಗುವುದೇ? ಪಟಾಕಿಗಳನ್ನು ಸಿದಿಸುವುದರಿಂದ ಧ್ವನಿ ಪ್ರದೂಷಣ, ವಾತಾವರಣದ ಪ್ರದೂಷಣವಾಗುವುದಲ್ಲದೆ, ವಾತಾವರಣದಲ್ಲಿರುವ ದೇವಿ ತತ್ವವು ನಷ್ಟವಾಗುತ್ತದೆ.
ಇ. ಚಿತ್ರಗೀತೆಗಳನ್ನು ಹಾಕುವುದು : ಅನೇಕರು ದೇವಿಯ ಮುಂದೆ ಚಿತ್ರಗೀತೆಗಳನ್ನು ಹಾಕುತ್ತಾರೆ. ಇದು ಅಯೋಗ್ಯವಾಗಿದೆ! ಇಂತಹ ಹಾಡುಗಳಿಂದ ಅಲ್ಲಿರುವ ಜನರ ಮನಸ್ಸಿನಲ್ಲಿ ಭಕ್ತಿಭಾವ ಹೇಗೆ ತಾನೆ ನಿರ್ಮಾಣವಾಗುವುದು? ಆದುದರಿಂದ ಚಿತ್ರೆಗೀತೆಗಳನ್ನು ಹಾಕಿರುವುದನ್ನು ತಡೆದು, ಅವರಿಗೆ ಮನವರಿಕೆಯಾಗುವ ಹಾಗೆ ತಿಳಿಸಿ ಹೇಳಬೇಕು.
ಈ. ಚಿತ್ರ ವಿಚಿತ್ರ ಭಂಗಿಗಳಲ್ಲಿ ಅಶ್ಲೀಲ ನೃತ್ಯ : ಮಿತ್ರರೇ, ಚಿತ್ರಗೀತೆಗಳನ್ನು ಹಾಕಿ ಗರಬಾ ಆಡುವುದು ತಪ್ಪು! ಹೀಗೆ ಮಾಡುವುದರಿಂದ ದೇವಿಯ ಬಗ್ಗೆ ನಮ್ಮಲ್ಲಿ ಭಕ್ತಿ ಭಾವ ನಿರ್ಮಾಣವಾಗುವುದಿಲ್ಲ. ಕೆಲವರು ಗರಬಾ ಆಡುವಾಗ ಚಿತ್ರ ವಿಚಿತ್ರ ಭಂಗಿಗಳಲ್ಲಿ ನರ್ತಿಸುತ್ತಾರೆ! ಇದು ದೇವಿಗೆ ಇಷ್ಟವಾಗುವುದೇ?.
ನವರಾತ್ರ್ಯೋತ್ಸವವನ್ನು ಹೀಗೆ ಆಚರಿಸಿ!
ಅ. ಮಾಲಿನ್ಯ ರಹಿತ ಶೃಂಗಾರ : ಮಿತ್ರರೇ, ದೇವಿಯನ್ನು ಶೃಂಗರಿಸುವಾಗ ಕಾಗದದ ಉಪಯೋಗವನ್ನು ಮಾಡಿ. ಹೂವು ಮತ್ತು ಎಲೆಗಳಿಂದ ತೋರಣಗಳನ್ನು ತಯಾರಿಸಿ ಅಲಂಕಾರ ಮಾಡಿ. ಇದರಿಂದ ಆ ಅಲಂಕಾರಕ್ಕೆ ದೇವಿಯ ತತ್ವವು ಆಕರ್ಷಿತವಾಗಿ, ನಮಗೆ ಅದರ ಲಾಭವಾಗುತ್ತದೆ.
ಆ. ಮೂರ್ತಿಯನ್ನು ಮನೆಗೆ ತರುವ ಯೋಗ್ಯ ಪದ್ಧತಿ : ಮೂರ್ತಿಯನ್ನು ಮನೆಗೆ ತರುವಾಗ 'ಶ್ರೀ ದುರ್ಗಾದೇವ್ಯೈ ನಮಃ |' ಎಂದು ನಾಮಜಪವಾನ್ನು ಮಾಡಬೇಕು. ದುರ್ಗಾದೇವಿಯ ಜಯಕಾರವನ್ನು ಘೋಷಿಸಬೇಕು.
ಇ. ದೇವಿಯನ್ನು ಸ್ತುತಿಸುವ ಹಾಡುಗಳನ್ನು ಹಾಕಿ : ಭಜನೆಗಳನ್ನು ಕೇಳುವುದರಿಂದ ಉಪಸ್ಥಿತ ಜನರ ಮನಸ್ಸಿನಲ್ಲಿ ದೇವಿಯ ಬಗ್ಗೆ ಭಕ್ತಿ ಭಾವಗಳು ನಿರ್ಮಾಣವಾಗುತ್ತವೆ. ಈ ಭಕ್ತಿಯಿಂದ ದೇವಿಯ ಉಪಾಸನೆಯನ್ನು ಮಾಡಿದರೆ ಅವರಿಗೆ ಅದರಿಂದ ಆನಂದ ಸಿಗುತ್ತದೆ.
ಈ. ದೇವಿಯನ್ನು ಸ್ತುತಿಸುವ ಭಜನೆಗಳನ್ನು ಹಾಕಿ ಗರಬಾ ಆಡಿ : ಗರಬಾ ಆಡುವಾಗ ದೇವಿಯ ಸ್ತುತಿಯನ್ನು ಮಾಡುವ ಹಾಡುಗಳನ್ನು ಹಾಕಿ ಗರಬಾ ಆಡಬೇಕು. ಗರಬಾ ಆಡುವಾಗ ಅದು ೩ ಚಪ್ಪಾಳೆಗಳ ಲಯಬದ್ಧ ರೀತಿಯಲ್ಲಿ ಆಡಬೇಕು. ಗರಬಾ ಆಡುವಾಗ ನಾವು ನಮ್ಮನ್ನೇ ಮರೆತು ದೇವಿಯನ್ನು ಸ್ತುತಿಸುವ ಭಜನೆಗಳಲ್ಲಿ ತಲ್ಲೀನರಾಗಬೇಕು.
ಮಿತ್ರರೇ, ಎಲ್ಲರೂ ಸೇರಿ ನವರಾತ್ರ್ಯೋತ್ಸವದಲ್ಲಿ ಆಗುವ ತಪ್ಪು ಆಚರಣೆಗಳನ್ನು ತಡೆಗಟ್ಟೋಣ. ವಿದ್ಯಾರ್ಥಿ ದೆಸೆಯಲ್ಲಿ ಮಹತ್ವವಾಗಿರುವ ಸರಸ್ವತೀ ದೇವಿಯ ಕೃಪೆಯನ್ನು ಸಂಪಾದಿಸೋಣ. ಜ್ಞಾನ ಮತ್ತು ಕಲೆಯನ್ನು ಸಂಪಾದಿಸಲು ಶಾಸ್ತ್ರಾನುಸಾರ ನವರಾತ್ರ್ಯೋತ್ಸವವನ್ನು ಆಚರಿಸೋಣ!
– ಶ್ರೀ. ರಾಜೇಂದ್ರ ಪಾವಸ್ಕರ್ (ಗುರುಜಿ), ಪನವೇಲ್