೧. ಶಾರೀರಿಕ :
ಶಾರೀರಿಕ ನ್ಯೂನತೆ, ಕಿವುಡುತನ, ಪಟಾಕಿಗಳ ಕಾರ್ಖಾನೆಗಳಲ್ಲಿ ಸ್ಫೋಟವಾಗಿ ಅನೇಕ ಜನರು ಪ್ರಾಣವನ್ನು ಕಳೆದುಕೊಳ್ಳುವುದು ಇತ್ಯಾದಿ.
೨. ಭೌತಿಕ :
ಕೆಲವು ಸಲ ಕ್ಷಿಪಣಿಯಂತಹ ಪಟಾಕಿಗಳಿಂದ ಹುಲ್ಲಿನ ರಾಶಿ, ಒಣ ಹುಲ್ಲಿನ ಛಾವಣಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟವಾಗುತ್ತದೆ.
೩. ಆರ್ಥಿಕ :
ದೇಶವು ಆರ್ಥಿಕ ಸಂಕಷ್ಟದಲ್ಲಿರುವಾಗ, ವರ್ಷಂಪ್ರತಿ ಕೊಟ್ಯಾವಧಿ ರೂಪಾಯಿಗಳನ್ನು ಪಟಾಕಿಗಳ ರೂಪದಲ್ಲಿ ಸುಡುವುದು ಪಾಪಕ್ಕೆ ಸಮಾನ.
೪. ಆಧ್ಯಾತ್ಮಿಕ :
ಭಜನೆಗಳು, ಆರತಿ ಹಾಡುಗಳು ಮತ್ತು ಸಾತ್ವಿಕ ನಾದಗಳಿಗೆ ಒಳ್ಳೆಯ ಶಕ್ತಿ ಮತ್ತು ದೇವ ದೇವತೆಗಳು ಆಕರ್ಶಿತವಾಗುತ್ತಾರೆ. ಇಂದು, ಭಾರತದಾದ್ಯಂತ ಭಜನೆ ಕೀರ್ತನೆಗಳ ಬದಲಾಗಿ ತಾಮಸಿಕವಾಗಿರುವ ಅಧುನಿಕ ಸಂಗೀತ ಮತ್ತು ಪಟಾಕಿಗಳ ಕರ್ಕಶ ಧ್ವನಿಗಳೇ ಹೆಚ್ಚಿನ ಪ್ರಮಾಣದಲ್ಲಿ ಕೇಳಲು ಸಿಗುತ್ತವೆ. ಇದರಿಂದಾಗಿ, ವಾತಾವರಣದ ಪ್ರದೂಷಣವಾಗುವುದಲ್ಲದೆ, ಅದರ ಪ್ರತಿಕೂಲ ಪರಿಣಾಮವು ಮನುಷ್ಯನ ಮನಸ್ಸು ಮತ್ತು ಪ್ರಕೃತಿಯ ಮೇಲಾಗುತ್ತದೆ.
ಇದೇ ರೀತಿ, ದೇವತೆಗಳ ಮತ್ತು ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿಗಳನ್ನು ಸಿಡಿಸುತ್ತಾರೆ. ಹೀಗೆ ಮಾಡುವಾಗ ದೇವತೆಗಳ ಮತ್ತು ರಾಷ್ಟ್ರಪುರುಷರ ಹೆಸರು / ಭಾವಚಿತ್ರಗಳು ಅಕ್ಷರಶಃ ನುಚ್ಚು ನೂರಾಗುತ್ತವೆ! ಆದುದರಿಂದ, ಈಗಿನಿಂದಲೇ ನಿಮ್ಮ ಮಕ್ಕಳ ಮನಸ್ಸಿನಲ್ಲಿ ಪಟಾಕಿಗಳನ್ನು ಸಿಡಿಸುವುದರ ದುಷ್ಪರಿಣಾಮಗಳನ್ನು ಬಿಂಬಿಸಿ, ಮತ್ತು ಈ ಕುಪ್ರವೃತ್ತಿಯಿಂದ ಅವರನ್ನು ವಿಮುಖಗೊಳಿಸಿ!