ಮಕ್ಕಳೇ, ಹಿಂದೂ ಧರ್ಮಶಾಸ್ತ್ರಕ್ಕನುಸಾರ ‘ದೀಪಾವಳಿಯನ್ನು’ ಆಚರಿಸಿ ದೇವತೆಗಳ ಕೃಪೆಯನ್ನು ಸಂಪಾದಿಸಿ !

ಮಿತ್ರರೇ, ದೀಪಾವಳಿಯೆಂದರೆ ದೀಪಗಳ ಸಾಲು ಅಥವಾ ಪಂಕ್ತಿ !

ದೀಪ ಹಚ್ಚಿದ ನಂತರ ಏನಾಗುತ್ತದೆ ? ಜೀವನದಲ್ಲಿ ಆನಂದ ಮತ್ತು ಉತ್ಸಾಹ ನಿರ್ಮಾಣವಾಗುತ್ತದೆ. ದೀಪಾವಳಿಯೆಂದರೆ ಆನಂದಮಯ ಜೀವನದ ಆರಂಭ ! ನಾವು ಯಾವ ಪದ್ಧತಿಯಲ್ಲಿ ದೀಪಾವಳಿಯನ್ನು ಆಚರಿಸುತ್ತೇವೆಯೋ, ಅದರಿಂದ ಇತರರಿಗೆ ದುಃಖ ಹಾಗೂ ತೊಂದರೆಯಾಗುತ್ತದೆ. ಅದು ದೇವರಿಗೆ ಇಷ್ಟವಾಗುವುದೇ ? ಇತರರಿಗೆ ಆನಂದವಾಗುವ ಹಾಗೆ ಪ್ರತಿಯೊಂದು ಕೃತಿ ಮಾಡುವುದೇ ನಿಜವಾದ ದೀಪಾವಳಿ !

೧. ‘ದೀಪಾವಳಿ' ಹಬ್ಬದ ವಿವೇಚನೆ

೧ ಅ. ಅರ್ಥ : ದೀಪಾವಳಿಯೆಂದರೆ ದೀಪ + ಆವಳಿ. ಈ ದಿನದಂದು ಎಲ್ಲೆಡೆ ದೀಪಗಳನ್ನು ಸಾಲುಸಾಲಾಗಿ ಹಚ್ಚಲಾಗುತ್ತದೆ.

೧ ಆ. ಭಾವಾರ್ಥ : ಶ್ರೀಕೃಷ್ಣ ಅಸುರೀ ವೃತ್ತಿಯ ನರಕಾಸುರನನ್ನು ವಧಿಸಿ, ಭೋಗವೃತ್ತಿ, ಸ್ವಾರ್ಥ, ಲಾಲಸೆ, ಅನಾಚಾರ ಹಾಗೂ ದುಷ್ಟ ಪ್ರವೃತ್ತಿಗಳಿಂದ ಜನರನ್ನು ಮುಕ್ತಗೊಳಿಸಿ, ದೈವಿಕ ವಿಚಾರಗಳನ್ನು ನೀಡಿದನು. ಶ್ರೀಕೃಷ್ಣನು ನಮಗೆ ‘ನಮ್ಮಲ್ಲಿರುವ ದೋಷಗಳನ್ನು ನಿವಾರಿಸಿ, ಗುಣಗಳನ್ನು ವೃದ್ಧಿಸಿ ಆನಂದಮಯ ಜೀವನ ನಡೆಸಬೇಕೆಂದು', ಹೇಳಿದ್ದಾನೆ.

೧ ಇ. ದೀಪಾವಳಿಯ ಹಿಂದಿನ ಇತಿಹಾಸ : ೧೪ ವರ್ಷಗಳ ವನವಾಸವನ್ನು ಮುಗಿಸಿದ ನಂತರ ಶ್ರೀರಾಮ ಅಯೋಧ್ಯೆಗೆ ಮರಳುತ್ತಾನೆ. ಆಗ ಪ್ರಜೆಗಳು ದೀಪೋತ್ಸವವನ್ನು ಆಚರಿಸುತ್ತಾರೆ. ಅಂದಿನಿಂದ ‘ದೀಪಾವಳಿ' ಉತ್ಸವದ ಆಚರಣೆಯು ಪ್ರಾರಂಭವಾಯಿತು.

೨. ದೀಪಾವಳಿಯ ಪ್ರತಿಯೊಂದು ದಿನವನ್ನು
ಶಾಸ್ತ್ರೋಕ್ತ ಪದ್ಧತಿಯಿಂದ ಮಾಡಿದ ವಿವೇಚನೆ

೨ ಅ. ಧನತ್ರಯೋದಶಿ (ಧನತೇರಸ) (ಅಶ್ವಿನ ಕೃಷ್ಣ ದ್ವಾದಶಿ)

೨ ಅ ೧. ಧನಲಕ್ಷ್ಮಿ ಪೂಜೆ ಮಾಡುವುದು : ಈ ದಿನ ವ್ಯಾಪಾರಿಗಳು ಖಜಾನೆಯ (ಕೋಶ) ಪೂಜೆ ಮಾಡುತ್ತಾರೆ. ಕಳೆದ ವರ್ಷದ ದೀಪಾವಳಿಯಿಂದ ಈ ವರ್ಷದ ದೀಪಾವಳಿ, ಒಂದು ವ್ಯಾಪಾರಿ ವರ್ಷವಿರುತ್ತದೆ. ಈ ದಿನ ಹೊಸ ಲೆಕ್ಕಪತ್ರದ ಪುಸ್ತಕಗಳನ್ನು ತರುತ್ತಾರೆ. ಸುಸೂತ್ರವಾಗಿ ಜೀವನ ನಡೆಸಲು ಬೇಕಾಗುವ ಧನದ ಪೂಜೆ ಮಾಡಲಾಗುತ್ತದೆ. ಇಲ್ಲಿ ಧನವೆಂದರೆ ಶುದ್ಧ ಲಕ್ಷ್ಮಿ !

೨ ಅ ೨. ‘ಅಯೋಗ್ಯ ಮಾರ್ಗದಲ್ಲಿ ಹಣ ಸಂಪಾದಿಸುವುದಿಲ್ಲ', ಎಂದು ಪ್ರತಿಜ್ಞೆ ಮಾಡಿ ! : ಮಿತ್ರರೇ, ಧನವೆಂದರೆ ಹಣ ! ಅದನ್ನು ನಾವು ಯೋಗ್ಯ ಮಾರ್ಗದಿಂದ ಸಂಪಾದಿಸಬೇಕು. ಇತರರನ್ನು ಮೋಸಗೊಳಿಸಿ, ಭ್ರಷ್ಟಾಚಾರದಿಂದ ಅಥವಾ ಕಳ್ಳತನದಿಂದ ಸಂಪಾದಿಸಿದ ಹಣ ಧನವಾಗಲು ಸಾಧ್ಯವಿಲ್ಲ. ಅದರಿಂದ ನಮಗೆ ಲಕ್ಷ್ಮಿಯ ಕೃಪೆಯಾಗಲೂ ಸಾಧ್ಯವಿಲ್ಲ. ಅದು ಪಾಪವಾಗುತ್ತದೆ ಅಲ್ಲವೇ? ಧನತ್ರಯೋದಶಿಯಂದು ‘ನಾನು ಎಂದಿಗೂ ಅಡ್ಡ/ಅಯೋಗ್ಯ ಮಾರ್ಗದಿಂದ ಹಣ ಸಂಪಾಧಿಸುವುದಿಲ್ಲ', ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು.

೨ ಅ ೩. ‘ಎಲ್ಲರಿಗೂ ಧರ್ಮ ಮಾರ್ಗದಿಂದ ಹಣ ಸಂಪಾದಿಸಲು ಬುದ್ಧಿ ನೀಡು', ಎಂದು ಪ್ರಾರ್ಥನೆ ಮಾಡಿ ! : ಇಂದು ದೇಶದಲ್ಲಿ ಭ್ರಷ್ಟಾಚಾರ ಎಲ್ಲೆಡೆ ನಡೆಯುತ್ತಿದೆ. ಭ್ರಷ್ಟಾಚಾರಿಗಳಿಗೆ ಧನದ ಪೂಜೆ ಮಾಡುವ ಅಧಿಕಾರವಿದೆಯೇ ? ಮಿತ್ರರೇ, ಈ ದಿನ ಲಕ್ಷ್ಮಿದೇವಿಗೆ ‘ಹೇ ಮಾತೇ, ಅಧರ್ಮದಿಂದ ಹಣ ಸಂಪಾದಿಸುವ ವೃತ್ತಿಯು ಈ ದೇಶದಿಂದ ನಾಶವಾಗಲಿ ಹಾಗೂ ಎಲ್ಲರಿಗೂ ಧರ್ಮ ಮಾರ್ಗದಿಂದ ಹಣ ಸಂಪಾಧಿಸುವ ಬುದ್ಧಿ ಬರಲಿ' ಎಂದು ಪ್ರಾರ್ಥನೆ ಮಾಡಿ. ಕೆಲವು ಮಕ್ಕಳು ತಂದೆಯ ಜೇಬಿನಿಂದ, ಕೆಲವು ಮಕ್ಕಳು ತರಗತಿಯಲ್ಲಿ ಇತರರ ಚೀಲದಿಂದ ಹಣವನ್ನು ಕದಿಯುತ್ತಾರೆ. ಇಂತಹ ಮಕ್ಕಳು ದೀಪಾವಳಿ ಆಚರಿಸಿದರೆ, ಅವರಿಗೆ ದೇವಿಯ ಕೃಪೆಯಾಗಬಹುದೇ ? ಒಂದು ವೇಳೆ ನಿಮ್ಮಿಂದ ಇಂತಹ ತಪ್ಪಾಗುತ್ತಿದ್ದರೆ, ಅದನ್ನು ಕೂಡಲೇ ನಿಲ್ಲಿಸುವ ನಿರ್ಣಯವನ್ನು ಮಾಡಿ, ಇದೇ ನಿಜವಾದ ಧನತ್ರಯೋದಶಿಯ ಆಚರಣೆಯಾಗುವುದು.

೨ ಆ. ಧನ್ವಂತರಿ ಜಯಂತಿ (ಅಶ್ವಿನ ಕೃಷ್ಣ ದ್ವಾದಶಿ )

ಅ ೧. ಹೊರಗಿನ ಅಸಾತ್ತ್ವಿಕ ಪದಾರ್ಥಗಳನ್ನು ತಿನ್ನದಿರಲು ನಿರ್ಧರಿಸಿ, ಪ್ರತಿದಿನ ಸಾತ್ತ್ವಿಕ ಆಹಾರ ಸೇವಿಸಿ ಧನ್ವಂತರಿ ದೇವತೆಯ ಕೃಪೆನ್ನು ಸಂಪಾದಿಸಿ ! : ಈ ದಿನದಂದು ವೈದ್ಯರು, ಧನ್ವಂತರಿಯು ‘ದೇವರ ವೈದ್ಯ'ರೆನ್ನುವ ಭಾವದಿಂದ ಆ ದೇವತೆಯ ಪೂಜೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಕಹಿಬೇವಿನ ಎಲೆಗಳು ಮತ್ತು ಸಕ್ಕರೆಯ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಕಹಿಬೇವಿನ ಉತ್ಪತ್ತಿ ಅಮೃತದಿಂದ ಆಗಿದೆ. ಪ್ರತಿದಿನ ೫-೬ ಕಹಿಬೇವಿನ ಎಲೆಗಳನ್ನು ತಿಂದರೆ ನಾವು ಆರೋಗ್ಯವಂತರಾಗಿರುತ್ತೇವೆ. ಇಂದಿನ ಮಕ್ಕಳು ತಾಯಿ ತಯಾರಿಸಿದ ಅನ್ನ-ಸಾರು ತಿನ್ನುವುದಿಲ್ಲ. ಹೊರಗೆ ದೊರೆಯುವ ಬರ್ಗರ, ಪಿಝ್ಝಾ, ಚೋಕಲೇಟ್ ಇತ್ಯಾದಿ ಖಾದ್ಯಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೂ ಅವುಗಳನ್ನೇ ಇಷ್ಟ ಪಡುತ್ತಾರೆ! 'ಧನ್ವಂತರಿ'ಯೆಂದರೆ ಆರೋಗ್ಯವನ್ನು ನೀಡುವ ದೇವತೆ. ಈ ದಿನ ನಾವು ಮನೆಯ ಸಾತ್ತ್ವಿಕ ಆಹಾರವನ್ನು ಸ್ವೀಕರಿಸಲು ನಿರ್ಣಯಿಸಿದರೆ ದೇವತೆಯ ಕೃಪೆಯಾಗಿ ಆರೋಗ್ಯವೂ ಚೆನ್ನಾಗಿರುವುದು ಅಲ್ಲವೇ?

೨ ಇ. ಯಮದೀಪದಾನ (ಅಶ್ವಿನ ಕೃಷ್ಣ ದ್ವಾದಶಿ)

ಪ್ರಾಣಹರಣ ಮಾಡುವ ಕಾರ್ಯವು ಯಮರಾಜರದ್ದು. ಕಾಲಮೃತ್ಯು ಯಾರನ್ನೂ ಬಿಡುವುದಿಲ್ಲ; ಆದರೆ ಅನಿರೀಕ್ಷಿತವಾಗಿ ಯಾರಿಗೂ ಮೃತ್ಯು ಬರಬಾರದೆಂದು, ಹಿಟ್ಟಿನಿಂದ ತಯಾರಿಸಿದ ೧೩ ದೀಪಗಳನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಹಚ್ಚುತ್ತಾರೆ. ನಾವು ಯಾವಾಗಲೂ ದಕ್ಷಿಣ ದಿಕ್ಕಿಗೆ ದೀಪ ಹಚ್ಚುವುದಿಲ್ಲ; ಆದರೆ ಈ ಕೃತಿಯು ಈ ದಿನಕ್ಕೆ ಸೀಮಿತವಾಗಿದೆ.

೨ ಈ. ನರಕಚತುರ್ದಶಿ (ಅಶ್ವಿನ ಕೃಷ್ಣ ಚತುರ್ದಶಿ)

೨ ಈ ೧. ನರಕಾಸುರನ ವಧೆ

೨ ಈ ೧ ಅ. ನರಕಾಸುರನನ್ನು ವಧಿಸಿದ ಶ್ರೀಕೃಷ್ಣ : ಹಿಂದೆ ಪ್ರಾಗಜ್ಯೋತಿಪುರದಲ್ಲಿ ನರಕಾಸುರ ಎಂಬ ಹೆಸರಿನ ಅಸುರನು ರಾಜ್ಯವನ್ನು ಆಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ಬಹಳ ತೊಂದರೆ ನೀಡಲು ಆರಂಭಿಸಿದನು. ಸ್ತ್ರೀಯರಿಗೂ ತೊಂದರೆ ನೀಡುತ್ತಿದ್ದನು. ಅವನು ೧೬ ಸಾವಿರ ರಾಜಕನ್ಯೆಯರನ್ನು ಕಾರಾಗೃಹದೊಳಗೆ ದಬ್ಬಿ ಅವರೊಂದಿಗೆ ವಿವಾಹವಾಗುವ ಪ್ರಯತ್ನದಲ್ಲಿದ್ದನು. ಆದ್ದರಿಂದ ತ್ರಿಲೋಕದಲ್ಲಿರುವವರೂ ಭಯಭೀತರಾಗಿದ್ದರು. ಈ ವಾರ್ತೆ ತಿಳಿದಾಗ ಶ್ರೀಕೃಷ್ಣನು ಸತ್ಯಭಾಮೆಯೊಂದಿಗೆ ಅಲ್ಲಿಗೆ ಹೋಗಿ, ನರಕಾಸುರನನ್ನು ವಧಿಸಿ ಎಲ್ಲ ರಾಜಕನ್ಯೆಯರನ್ನು ಬಂಧಮುಕ್ತಗೊಳಿಸಿದನು.

೨ ಈ ೧ ಅ. ಶ್ರೀಕೃಷ್ಣ ನರಕಾಸುರನಿಗೆ ವರ ನೀಡುವುದು : ನರಕಾಸುರನು ಶ್ರೀಕೃಷ್ಣನಿಂದ ವಚನವನ್ನು ಕೇಳುತ್ತಾನೆ, ಆಗ 'ಈ ದಿನ ಯಾರು ಅಭ್ಯಂಗ ಸ್ನಾನ ಮಾಡುವರೋ, ಅವರಿಗೆ ಯಾವುದೇ ರೀತಿಯ ದುಃಖವಾಗುವುದಿಲ್ಲ' ಎಂದು ಶ್ರೀಕೃಷ್ಣನು ವರ ನೀಡುತ್ತಾನೆ. ನರಕಚತುರ್ದಶಿಯಂದು ಶ್ರೀಕೃಷ್ಣ ನರಕಾಸುರನ ವಧೆ ಮಾಡಿರುವುದರ ಪ್ರತೀಕವೆಂದು ಜನರು 'ಕಾರಿಟ' ಎಂಬ ಒಂದು ತರಕಾರಿಯನ್ನು ಕಾಲಿನಿಂದ ತುಳಿಯುತ್ತಾರೆ.

೨ ಉ. ಲಕ್ಷ್ಮೀ ಪೂಜೆ (ಅಶ್ವಿನ ಅಮವಾಸ್ಯೆ )

೨ ಉ ೧. ಲಕ್ಷ್ಮೀ ಪೂಜೆಯಂದು, ಭಕ್ತರ ಮನೆಯಲ್ಲಿ ವಾಸಮಾಡಲು ಲಕ್ಷ್ಮೀ ಬರುತ್ತಿರುವುದರಿಂದ ಆ ದಿನ ವಿವಿಧ ಗುಣಗಳನ್ನು ಅಂಗೀಕರಿಸಿಕೊಂಡು ಅವಳ ಭಕ್ತರಾಗಿರಿ ! : ಇದು ಲಕ್ಷ್ಮೀ ಮತ್ತು ಇನ್ನಿತರ ದೇವತೆಗಳನ್ನು ಬಲಿಯ ಕಾರಾಗೃಹದಿಂದ ಶ್ರೀವಿಷ್ಣು ಮುಕ್ತಗೊಳಿಸಿರುವ ದಿನ ! ಈ ದಿನ ಒಂದು ಚೌರಂಗದಲ್ಲಿ ಅಕ್ಷತೆಗಳ ಸ್ವಸ್ತಿಕವನ್ನು ಬಿಡಿಸುತ್ತಾರೆ. ಅದರ ಮೇಲೆ ಲಕ್ಷ್ಮೀ ಮತ್ತು ಕುಬೇರರ ಪ್ರತಿಮೆಗಳನ್ನಿಡುತ್ತಾರೆ. ಲಕ್ಷ್ಮೀಗೆ ನಾಣ್ಯ, ಬೆಲ್ಲ, ಅರಳು ಮತ್ತು ಬತ್ತಾಸೆಗಳನ್ನು (ಸಿಹಿ ತಿಂಡಿ) ಅರ್ಪಿಸುತ್ತಾರೆ. ನಾಣ್ಯವು ಧನವಾಚಕವಾಗಿದ್ದು ಅರಳು ಸಮೃದ್ಧಿಯ ಪ್ರತೀಕವಾಗಿದೆ. ‘ಆ ರಾತ್ರಿ ಲಕ್ಷ್ಮೀ ಎಲ್ಲೆಡೆ ಸಂಚರಿಸಿ ತನಗೆ ವಾಸಿಸಲು ಯೋಗ್ಯವೆನಿಸುವ ಸ್ಥಳವನ್ನು ಹುಡುಕುತ್ತಾಳೆ', ಎಂದು ಪುರಾಣದಲ್ಲಿ ಹೇಳಲಾಗಿದೆ. ಅವಳಿಗೆ ಯಾವ ಸ್ಥಳದಲ್ಲಿರಲು ಇಷ್ಟವಾಗುವುದು ? ಯಾರು ದೇವರ ಭಕ್ತರು, ಸತ್ಯ ಮಾತನಾಡುವವರು, ದೇವರಿಗೆ ಇಷ್ಟವಾಗುವ ಹಾಗೆ ವರ್ತಿಸುವವರು ಹಾಗೂ ಯಾರ ಪ್ರತಿಯೊಂದು ಕೃತಿಯಿಂದ ಇತರರಿಗೆ ಆನಂದ ದೊರೆಯುತ್ತದೆಯೋ, ಅಂತಹವರ ಮನೆಯಲ್ಲಿ ವಾಸಿಸಲು ದೇವಿಗೆ ಇಷ್ಟವಾಗುತ್ತದೆ. ‘ದೇವಿ ನಮ್ಮ ಮನೆಯಲ್ಲಿ ಉಳಿದುಕೊಳ್ಳಬೇಕು', ಎಂದು ನಿಮಗನಿಸುತ್ತದೆಯಲ್ಲ ? ಹಾಗಾದರೆ ನಾವು ಕೂಡ ನಮ್ಮಲ್ಲಿ ಈ ಮೇಲಿನ ಗುಣಗಳನ್ನು ತರಲು ನಿರ್ಣಯಿಸುವುದೇ ನಿಜವಾದ ಲಕ್ಷ್ಮಿಪೂಜೆಯಾಗಿದೆ.

೨ ಉ ೨. ಕುಬೇರನ ಪೂಜೆ ಮಾಡುವುದರ ಮಹತ್ವ : ಸಂಪತ್ತನ್ನು ಜೋಪಾನ ಹೇಗೆ ಮಾಡಬೇಕು, ಹಾಗೂ ಹಣಸಂಪಾದನೆ ಮಾಡುವುದಕ್ಕಿಂತ ಹಣವನ್ನು ಯೋಗ್ಯವಾದ ಸ್ಥಳದಲ್ಲಿ ವಿನಿಯೋಗಿಸುವುದು ಹೇಗೆ ಎಂಬುದನ್ನು ಕುಬೇರನು ಕಲಿಸುತ್ತಾನೆ; ಆದ್ದರಿಂದ ನಾವು ಕುಬೇರನ ಪ್ರತಿಮೆಯ ಪೂಜೆ ಮಾಡುತ್ತೇವೆ. ಅನೇಕ ಜನರಲ್ಲಿ ಹಣ ಬರುತ್ತದೆ; ಆದರೆ ಅದನ್ನು ಹೇಗೆ ಖರ್ಚು ಮಾಡಬೇಕು ಹಾಗೂ ಹೇಗೆ ಜೋಪಾನ ಮಾಡಬೇಕು, ಎಂಬುದು ಅವರಿಗೆ ತಿಳಿಯುವುದಿಲ್ಲ. ಆದ್ದರಿಂದ ಕುಬೇರನ ಪೂಜೆ ಮಾಡಬೇಕು.

೨ ಉ ೩. ಅಲಕ್ಷ್ಮಿ ನಿಃಸಾರಣ : ನಾವು ಲಕ್ಷ್ಮೀ ಪೂಜೆ ಮಾಡಿ ಅವಳನ್ನು ಕರೆದೆವು; ಆದರೆ ಅಲಕ್ಷ್ಮೀಯ ನಾಶವಾದರೆ ಮಾತ್ರ ಲಕ್ಷ್ಮೀ ನಿಲ್ಲುವಳು. ಹೇಗೆ ಗುಣ ಬರುವುದೋ, ಹಾಗೆಯೇ ದೋಷವನ್ನು ನಾಶಗೊಳಿಸದಿದ್ದರೆ, ಗುಣಗಳಿಗೆ ಮಹತ್ವವಿರುವುದೇ ? ಇಲ್ಲ. ಹಾಗಾದರೆ ಈ ದಿನ ಹೊಸ ಕಸಬರಿಗೆ ತೆಗೆದುಕೊಂಡು ಮಧ್ಯರಾತ್ರಿ ಕಸಗುಡಿಸುತ್ತಾರೆ. ಕಸವೆಂದರೆ ಅಲಕ್ಷ್ಮೀ ! ಈ ರಾತ್ರಿ ಆ ಕಸವನ್ನು ಹೊರಗೆ ಹಾಕುತ್ತಾರೆ. ಇತರ ದಿನಗಳಂದು ನಾವು ರಾತ್ರಿ ಕಸಗುಡಿಸಿ ಕಸವನ್ನು ಹೊರಗೆ ಹಾಕುವುದಿಲ್ಲ.

೨ ಊ. ಬಲಿಪಾಡ್ಯಮಿ (ಕಾರ್ತಿಕ ಶುಕ್ಲ ಪ್ರತಿಪದ)

೨ ಊ ೧. ಬಲಿರಾಜನಂತೆ ತನ್ನಲ್ಲಿನ ಅಹಂಕಾರವನ್ನು ನಾಶಗೊಳಿಸಿ ದೇವರಿಗೆ ಶರಣಾಗಿ ! : ಈ ದಿನ ನಾವು ದಾನಶೂರ ಬಲಿರಾಜ ಮತ್ತು ಅವನ ಪತ್ನಿ ವಿಂಧ್ಯಾವಲಿ ಇವರ ಪುಜೆ ಮಾಡುತ್ತೇವೆ. ದಾನವನ್ನು ಯಾವಾಗಲೂ ಯೋಗ್ಯವಾದ ವ್ಯಕ್ತಿಗೇ (ಸತ್ಪಾತ್ರ ದಾನ) ನೀಡಬೇಕು; ಆದರೆ ಬಲಿರಾಜನು ಹಾಗೆ ಮಾಡದೆ ಯಾರು ಬೇಡುತ್ತಾನೋ, ಅವನಿಗೆ ದಾನ ನೀಡುತ್ತಿದ್ದನು. ಕೆಲವು ಅಯೋಗ್ಯ (ಅಪಾತ್ರ) ಜನರ ಕೈಗೆ ಹಣ ಹೋದ ಕಾರಣ ಅವರು ಇತರರಿಗೆ ತೊಂದರೆ ನೀಡಲು ಆರಂಭಿಸಿದರು. ಕೊನೆಗೆ ವಿಷ್ಣುದೇವರು ವಾಮನಾವತಾರ ತಾಳಿ ಬಲಿರಾಜನನ್ನು ಪಾತಾಳಕ್ಕೆ ತಳ್ಳಿದರು. ಬಲಿರಾಜ ವಾಮನಾವತಾರ ರೂಪದ ಶ್ರೀವಿಷ್ಣುವಿಗೆ ಸರ್ವಸ್ವವನ್ನೂ ಅರ್ಪಿಸಿದನು. ಯಾರು ದೇವರಿಗಾಗಿ ಸರ್ವಸ್ವವನ್ನು ಅರ್ಪಣೆ ಮಾಡುತ್ತಾರೋ, ದೇವರು ಅವರ ಸರ್ವಸ್ವವನ್ನು ನೀಡಲು ಸಿದ್ಧರಾಗುತ್ತಾರೆ. ಬಲಿರಾಜ ದೇವರಿಗೆ ಸಂಪೂರ್ಣವಾಗಿ ಶರಣಾದನು. ಮಿತ್ರರೇ, ನಾವು ಕೂಡ ದೇವರಿಗೆ ಶರಣಾದರೆ ಅವರ ಕೃಪೆ ನಮ್ಮ ಮೇಲಾಗುತ್ತದೆ.

೨ ಎ. ಸಹೋದರ ಬಿದಿಗೆ (ಕಾರ್ತಿಕ ಶುಕ್ಲ ದ್ವಿತೀಯಾ)

೨ ಎ ೧. ಜೀನ್ಸ್-ಪ್ಯಾಂಟ್ ಮತ್ತು ಟೀ-ಶರ್ಟ್ ಇದರ ಬದಲು ಸಹೋದರಿಗೆ ಸೀರೆ, ಪಂಜಾಬಿ ಕುರ್ತಾ ಅಥವಾ ಲಂಗ-ರವಿಕೆ ಉಡುಗೊರೆಯಾಗಿ ನೀಡಿ ! : ಸಹೋದರ ಬಿದಿಗೆಯಂದು ಸಹೋದರನು ಸಹೋದರಿಯ ಮನೆಗೆ ಹೋಗಬೇಕು ಹಾಗೂ ಸಹೋದರಿ ಅವನಿಗೆ ಆರತಿ ಬೆಳಗಬೇಕು ಎಂಬ ಪ್ರಥೆಯಿದೆ. ಸಹೋದರ ಇಲ್ಲದಿದ್ದರೆ, ಯಾರೇ ಒಬ್ಬ ವ್ಯಕ್ತಿಯನ್ನು ಸಹೋದರನೆಂದು ತಿಳಿದು ಆರತಿ ಬೇಳಗಬೇಕು. ಈ ದಿನ ಪತಿ ತನ್ನ ಪತ್ನಿಯ ಕೈಯಿಂದ ಅನ್ನವನ್ನು ಸ್ವೀಕರಿಸದೆ ಸಹೋದರಿಯ ಮನೆಗೆ ಊಟಕ್ಕೆ ಹೋಗಬೇಕು. ಪ್ರತಿಯಾಗಿ ಉಡುಗೊರೆ ಎಂದು ಸಹೋದರಿಗೆ ನಾವು ಜೀನ್ಸ್-ಪ್ಯಾಂಟ್ ಮತ್ತು ಟೀ-ಶರ್ಟ್ ಕೊಡುವುದೇ ? ಅವಳಿಗೆ ಭಾರತೀಯ ಉಡುಪುಗಳನ್ನು ನೀಡಬೇಕು. ತಂಗಿಯಿದ್ದರೆ ಅವಳಿಗೆ ಲಂಗ-ರವಿಕೆ ಕೊಡಬೇಕು. ‘ನಾವು ನಮ್ಮ ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಲಿಕ್ಕಿದೆ', ಎನ್ನುವ ಭಾವದಿಂದ ಆ ದಿನ ಕುರ್ತಾ-ಪೈಜಾಮಾ ಅಥವಾ ಪಂಚೆ-ಕುರ್ತಾ ತೊಟ್ಟುಕೊಂಡು ಸಹೋದರಿಯ ಮನೆಗೆ ಹೋಗಬೇಕು. ಇದರಿಂದ ನಮ್ಮ ಹಿಂದೂ ಸಂಸ್ಕೃತಿಯ ರಕ್ಷಣೆಯಾಗುವುದು.

ವಿದ್ಯುತ್ ದೀಪ ಅಥವಾ ಎಣ್ಣೆಯ ದೀಪ, ಇವುಗಳಲ್ಲಿ ಯಾವುದರಿಂದ ಅಲಂಕಾರ ಮಾಡಬೇಕು?

ವಿದ್ಯುತ್ ದೀಪದ ಅಲಂಕಾರ

ಎಣ್ಣೆಯ ದೀಪದ

೧. ವಾತಾವರಣದಲ್ಲಿರುವ ದೇವತೆಗಳ ಚೈತನ್ಯ

ಚೈತನ್ಯವನ್ನು ಆಕರ್ಶಿಸುವ ಕ್ಷಮತೆಯಿಲ್ಲದಿರುವ ಕಾರಣ ಯಾವುದೇ ಲಾಭವಾಗುವುದಿಲ್ಲ

ವಾತಾರವರಣದಲ್ಲಿರುವ ದೇವತೆಗಳ ಚೈತನ್ಯದ ಲಾಭವಾಗಿ ಉತ್ಸಾಹದ ಅನುಭವ

೨. ಆಕರ್ಷಣೆ

ಕೇವಲ ಕಣ್ಣುಗಳನ್ನು ತನ್ನತ್ತ ಸೆಳೆಯುತ್ತದೆ, ಆದರೆ ಮನಸ್ಸಿಗೆ ಉತ್ಸಾಹ ಮತ್ತು ಆನಂದವನ್ನು ನೀಡುವುದಿಲ್ಲ

ಮನಸ್ಸಿಗೆ ಸಮಾಧಾನ ಮತ್ತು ಶಾಂತಿ ಸಿಗುತ್ತದೆ

೩. ಬಹಿರ್ಮುಖತೆ/ ಅಂತರ್ಮುಖತೆ

ಬಹಿರ್ಮುಖತೆ ಹೆಚ್ಚಾಗಿ ಸ್ವಂತದ ತಪ್ಪುಗಳತ್ತೆ ಗಮನ ಕಡಿಮೆಯಾಗಿ, ಇತರರ ದೋಷಗಳತ್ತ ಗಮನ ಹರಿಯುವುದು ಮತ್ತು ಒತ್ತಡ ಹೆಚ್ಚಾಗುವುದು

ಅಂತರ್ಮುಖತೆ ಹೆಚ್ಚಾಗಿ ಸ್ವಂತದ ದೋಷಗಳ ಅಧ್ಯಯನದ ಮಾಡಲು ಸಹಾಯವಾಗುತ್ತದೆ

೪. ರಾಷ್ಟ್ರೀಯ ಸಂಪತ್ತಿನ ರಕ್ಷಣೆ

ಇಲ್ಲ

ಇದೆ

– ಶ್ರೀ ರಾಜೇಂದ್ರ ಪಾವಸ್ಕರ (ಗುರುಜಿ), ಪನವೇಲ್

Leave a Comment