ಸಂಸ್ಕೃತ ಭಾಷೆಯು ಈಶ್ವರ ನಿರ್ಮಿತವಾಗಿದೆ !
ನಮ್ಮ ವೈದಿಕ ಪರಂಪರೆಯು ವಿಶ್ವದ ಉತ್ಪತ್ತಿಯಿಂದ ಪ್ರಾರಂಭಿಸಿ ಸಂಪೂರ್ಣ ಇತಿಹಾಸವನ್ನು ಜೋಪಾನವಾಗಿ ಇರಿಸಿದೆ. ಮೊದಲು ಸರ್ವವೂ ಶೂನ್ಯವಾಗಿತ್ತು, ತದನಂತರ ಆಕಾಶದಲ್ಲಿ ‘ಓಂ'(ಕಾರದ) ಧ್ವನಿಯ ನಾದವಾಯಿತು ಮತ್ತು ಶೇಷಶಾಯಿ ಶ್ರೀವಿಷ್ಣು ಪ್ರಕಟರಾದರು. ಅವರ ನಾಭಿಯಿಂದ ಬ್ರಹ್ಮದೇವ ಪ್ರಕಟರಾದರು, ತದನಂತರ ಪ್ರಜಾಪತಿ, ಮಾತೃಕಾ, ಧನ್ವಂತರಿ, ಗಂಧರ್ವ, ವಿಶ್ವಕರ್ಮ ಇತ್ಯಾದಿ ಪ್ರಕಟರಾದರು. ಅದೇ ಸಮಯದಲ್ಲಿ ಈಶ್ವರನು ಸಮಸ್ತ ವಿಶ್ವದ ಜ್ಞಾನಭಂಡಾರವೇ ತುಂಬಿರುವಂತಹ ವೇದಗಳನ್ನು ಉತ್ಪತ್ತಿ ಮಾಡಿ ನೀಡಿದನು. ವೇದಗಳು ಸಂಸ್ಕೃತ ಭಾಷೆಯಲ್ಲಿವೆ. ಸಂಸ್ಕೃತ ‘ದೇವವಾಣಿ’ಯಾಗಿದೆ. ಯಾವ ರೀತಿ ವೇದ ಅಪೌರುಷ ಅಂದರೆ ಈಶ್ವರಪ್ರಮಾಣವಾಗಿದೆಯೋ, ಅದೇ ರೀತಿ ಸಂಸ್ಕೃತ ಭಾಷೆಯೂ ಈಶ್ವರನ ರಚನೆಯಾಗಿದೆ. ಅದರ ರಚನೆ ಮತ್ತು ಲಿಪಿ ಈಶ್ವರನಿಂದ ಆಗಿದೆ, ಅದಕ್ಕಾಗಿ ಆ ಲಿಪಿಗೂ ‘ದೇವನಾಗರಿ’ ಎನ್ನುತ್ತಾರೆ. ಸಂಸ್ಕೃತ ಭಾಷೆಯ ಎಲ್ಲ ಸಂಬೋಧನೆಗಳು ಕೂಡ ದೇವಭಾಷೆಯಲ್ಲಿವೆ, ಹೀಗೆ ಸ್ಪಷ್ಟವಾಗಿದೆ ಉದಾ: ‘ಗೀರ್ವಾಣಭಾರತಿ’ ಅದರಲ್ಲಿ ‘ಗೀರ್ವಾಣ’ ಶಬ್ದದ ಅರ್ಥವು ‘ದೇವ’.
ಈ ಸೃಷ್ಟಿಯ ಉತ್ಪತ್ತಿ ಈಶ್ವರನ ಸಂಕಲ್ಪದಿಂದ ಆಯಿತು. ಮನುಷ್ಯನ ರಚನೆಯ ಮುಂಚೆ ಅವನ ಆವಶ್ಯಕತೆಗನುಸಾರ ಎಲ್ಲವನ್ನು ಈಶ್ವರನೇ ನೀಡಿದನು. ಇದಲ್ಲದೆ, ಮಾನವನಿಗೆ ಕಾಲಾನುಸಾರ ಮುಂದೆ ಯಾವ ವಸ್ತುಗಳ ಆವಶ್ಯಕವಾಗಬಹುದು, ಅಂಥವುಗಳನ್ನು ಕೊಡುವ ವ್ಯವಸ್ಥೆಯನ್ನೂ ಆ ಪರಮೇಶ್ವರನು ಮಾಡಿದನು. ಸೃಷ್ಟಿಯ ಉತ್ಪತ್ತಿಯ ಮೊದಲೇ ಈಶ್ವರನು ಮನುಷ್ಯನಿಗೆ ಮೊಕ್ಷಪ್ರಾಪ್ತಿಗಾಗಿ ಉಪಯೋಗವಾಗುವ ಮತ್ತು ಚೈತನ್ಯದಿಂದ ತುಂಬಿದಂತಹ ಒಂದು ಭಾಷೆಯನ್ನೂ ತಯಾರಿಸಿದ, ಅದರ ಹೆಸರೇ ಸಂಸ್ಕೃತ.
ಆದ್ಯಮಾನವ ಮನು ಮತ್ತು ಶತರೂಪಾ ಇವರಿಗೆ ಬ್ರಹ್ಮದೇವನೇ ಸಂಸ್ಕೃತ ಕಲಿಸಿದನು. ಬ್ರಹ್ಮದೇವನೇ ತನ್ನ ಮಾನಸ ಪುತ್ರ ಅತ್ರೀ, ವಸಿಷ್ಠ, ಗೌತಮಾದಿ ಋಷಿಗಳಿಗೂ ಕೂಡಾ ವೇದ ಮತ್ತು ಸಂಸ್ಕೃತ ಭಾಷೆಯನ್ನು ಕಲಿಸಿದನು.
ದತ್ತಗುರುಗಳು ಸಂಸ್ಕೃತ ಭಾಷೆಯ ಪುನಃ ರಚನೆ ಮಾಡಿದರು!
ತ್ರೇತಾಯುಗದಲ್ಲಿ ಜೀವದ ಶಬ್ದಾತೀತ ಜ್ಞಾನವನ್ನು ಗ್ರಹಿಸುವ ಕ್ಷಮತೆ ಕ್ಷೀಣವಾಯಿತು; ಶಬ್ದಗಳ ಮಾಧ್ಯಮದಿಂದ ಜೀವಕ್ಕೆ ಜ್ಞಾನ ಪ್ರಾಪ್ತವಾಗಿ, ಮೋಕ್ಷಪ್ರಾಪ್ತಿ ಸುಲಭವಾಗಲೆಂದು ದತ್ತಗುರುಗಳು ಸಂಸ್ಕೃತ ಭಾಷೆಯನ್ನು ಪುನಃ ರಚಿಸಿದರು.
ದ್ವಾಪರ ಯುಗದವರೆಗೆ ಸಂಸ್ಕೃತವೇ ವಿಶ್ವಭಾಷೆಯಾಗಿತ್ತು!
ಸತ್ಯ, ತ್ರೇತ್ರಾ ಮತ್ತು ದ್ವಾಪರ ಈ ಮೂರು ಯುಗಗಳಲ್ಲಿ ಸಂಸ್ಕೃತವೇ ವಿಶ್ವಭಾಷೆಯಾಗಿತ್ತು. ಅದಕ್ಕಾಗಿ ಸಂಸ್ಕೃತವನ್ನು ‘ವಿಶ್ವವಾಣಿ’ ಎಂದೂ ಕರೆಯಲಾಗುತ್ತದೆ. ಕೌರವ-ಪಾಂಡವರ ಸಮಯದವರೆಗೆ ಸಂಸ್ಕೃತವೇ ವಿಶ್ವದ ಎಕಮೇವ ಭಾಷೆಯಾಗಿತ್ತು.