ಗೆಳೆಯರೇ, ಈ ಕಥೆಯು ಶ್ರೀ ದತ್ತಗುರುಗಳ ಮೂರನೇ ಅವತಾರ, ಶ್ರೀ ಅಕ್ಕಲಕೋಟೆ ಸ್ವಾಮೀ ಸಮರ್ಥರದ್ದಾಗಿದೆ. ಅವರು ಆಶೀರ್ವಾದಿಸಿದ್ದ ಆಸಂಖ್ಯಾತ ಭಕ್ತರಲ್ಲಿ ಓರ್ವ ಬಡಬ್ರಾಹ್ಮಣನ ಕಥೆಯಾಗಿದೆ.
ಶ್ರೀ ಗುರುಗಳು ಭಿವಂಡಿಯಿಂದ ಕೌರವಪುರಕ್ಕೆ ಹೋಗುತ್ತಿದ್ದರು. ಅಲ್ಲಿ ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮವಿದೆ. ಈ ಪವಿತ್ರ ಕ್ಷೇತ್ರಕ್ಕೆ ದಕ್ಷಿಣಕಾಶೀ ಎಂದು ಕರೆಯುತ್ತಾರೆ. ಈ ಕಥೆಯು ಇಲ್ಲಿ ಪ್ರಾರಂಭವಾಗುತ್ತದೆ. ಪ್ರತಿದಿನ ಮಧ್ಯಾಹ್ನ ಶ್ರೀಗುರುಗಳು ಭಿಕ್ಷೆ ಬೇಡಲು ಅಮರಪುರಕ್ಕೆ ಹೋಗುತ್ತಿದ್ದರು, ಮತ್ತು ಭಕ್ತರನ್ನು ಆಶೀರ್ವದಿಸಿ ಹಿಂದಿರುಗುತ್ತಿದ್ದರು.
ಅಮರಾಪುರ ಗ್ರಾಮದಲ್ಲಿ ಒಬ್ಬ ಬಡ ಬ್ರಾಹ್ಮಣ ವಾಸಿಸುತ್ತಿದ್ದನು. ದಿನಾಲೂ ಭಿಕ್ಷೆಯನ್ನು ಪಡೆದುಕೊಂಡು ತನ್ನ ಜೀವನವನ್ನು ಸಾಗಿಸುತ್ತಿದ್ದನು. ಮನೆಗೆ ಬಂದ ಅತಿಥಿಗಳನ್ನು ದೇವರೆಂದು ಪರಿಗಣಿಸಿದ ಬ್ರಾಹ್ಮಣ ದಂಪತಿ ಬಂದವರನ್ನು ಅವರು ಎಂದಿಗೂ ಬರಿಗೈಯಲ್ಲಿ ಕಳುಹಿಸುತ್ತಿರಲ್ಲಿಲ. ಅವರು ಈ ರೀತಿ ಸಂತೋಷದಿಂದ ದೇವರ ಗುಣಗಾನ ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು.
ಒಂದು ದಿನ ಶ್ರೀಗುರುಗಳು ಬ್ರಾಹ್ಮಣನ ಮನೆಗೆ ಬಿಕ್ಷೆ ಬೇಡಲು ಬರುತ್ತಾರೆ. ಆವರು ಬರುವಾಗ ಬ್ರಾಹ್ಮಣನು ಬಿಕ್ಷೆಯನ್ನು ತರಲು ಊರೊಳಗೆ ಹೋಗಿರುತ್ತಾನೆ. ಬ್ರಾಹ್ಮಣನ ಹೆಂಡತಿಯು ಶ್ರೀಗುರುಗಳನ್ನು ಮನೆಯೊಳಗೇ ಆಹ್ವಾನಿಸುತ್ತಾಳೆ. ಆದರೆ ಮನಸ್ಸಿನಲ್ಲಿ ‘ಶ್ರೀ ಗುರುಗಳಿಗೆ ಮನೆಯಲ್ಲಿ ಕೊಡುವಂತಹದು ಎನೂ ಇಲ್ಲವಲ್ಲ’ ಎಂದು ಯೋಚಿಸುವಾಗ ಅವರ ಹಿತ್ತಲಿನಲ್ಲಿ ಬೆಳೆದ ಜವರೇಕಾಯಿ ಗಿಡದ ನೆನಪಾಗುತ್ತದೆ. ಅವರು ಅದನ್ನು ತೆಗೆದುಕೊಂಡು ತಿಂಡಿಯನ್ನು ತಯಾರಿಸಿ ಗುರುಗಳಿಗೆ ಅರ್ಪಿಸುತ್ತಾಳೆ. ಅದನ್ನು ನೋಡಿ ಶ್ರೀಗುರುಗಳಿಗೆ ಬಹಳ ಸಂತೋಷವಾಗುತ್ತದೆ ಮತ್ತು ಅವರು ಬ್ರಾಹ್ಮಣನ ಹೆಂಡತಿಯನ್ನು ಸಂಬೋಧಿಸಿ ‘ನಿಮ್ಮ ಮನೆಯು ಇನ್ನು ಮುಂದೆ ಸಮೃದ್ಧವಾಗುತ್ತದೆ, ನಿಮ್ಮ ಬಡತನಕ್ಕೆ ಇಂದೇ ಕೊನೆ!’ ಎಂದು ಹೇಳುತ್ತಾರೆ. ಬ್ರಾಹ್ಮಣನ ಮನೆಯಿಂದ ಹೊರಡುವಾಗ ಆ ಜವರೇಕಾಯಿಯ ಗಿಡವನ್ನು ಕಡಿದು ಹಾಕಿ, ಶ್ರೀ ಗುರುಗಳು ಹೋಗುತ್ತಾರೆ.
ಬ್ರಾಹ್ಮಣನ ಹೆಂಡತಿಯು ಬಹಳ ದುಖ:ದಿಂದ ಇದನ್ನು ನೋಡುತ್ತಾಳೆ ಮತ್ತು ಗಂಡ ಬಂದಾಗ ನಡೆದದ್ದನ್ನು ಹೇಳುತ್ತಾಳೆ, ಆ ಬ್ರಾಹ್ಮಣನು ‘ಶ್ರೀಗುರುಗಳು ನಿನಗೆ ಆಶೀರ್ವಾದವನ್ನು ಮಾಡಿದ್ದಾರೆ ಅಲ್ಲವೇ, ಅವರ ವಚನದಲ್ಲಿ ನಂಬಿಕೆಯನ್ನು ಇಡು’ ಎಂದು ಹೆಂಡತಿಗೆ ಬುದ್ದಿವಾದವನ್ನು ಹೇಳುತ್ತಾನೆ, ಮತ್ತು ಗುರುಗಳು ಅರ್ಧ ಕಡಿದು ಹೊದ ಜವರೇಕಾಯಿ ಗಿಡವನ್ನು ಬೇರು ಸಹಿತ ಕೀಳಲು ಹೋದಾಗ ಅಲ್ಲಿ ಅವರಿಗೆ ಒಂದು ಅಚ್ಚರಿ ಕಾಣಿಸುತ್ತದೆ. ಒಂದು ಮಡಿಕೆ ತುಂಬ ಬಂಗಾರ ಇರುವುದು ಕಾಣಿಸುತ್ತದೆ. ಬ್ರಾಹ್ಮಣ ದಂಪತಿಯು ಸಂತೋಷದಿಂದ ಗುರುಗಳ ಅಶೀರ್ವಾದವನ್ನು ಪಡೆಯಲು ಗುರುಗಳ ಭೇಟಿ ಮಾಡುತ್ತಾರೆ ಮತ್ತು ಅವರಿಗೆ ವಿಷಯವನ್ನು ತಿಳಿಸುತ್ತಾರೆ.
ನೀತಿ: ಗೆಳೆಯರೇ, ಮೇಲಿನ ಕಥೆಯನ್ನು ಓದಿ ‘ಮನೆಗೆ ಬಂದ ಅತಿಥಿಗಳಿಗೆ ನಮ್ಮಲ್ಲಿರುವುದನ್ನು ಸಂತೋಷದಿಂದ ನೀಡಿದರೆ, ಅದು ದೇವರಿಗೆ ಅರ್ಪಿಸಿದಂತೆ ಅಗುತ್ತದೆ ಮತ್ತು ದೇವರು ಪ್ರಸನ್ನಗೊಳುತ್ತಾರೆ’ ಎಂದು ಅನಿಸುವುದಿಲ್ಲವೇ?