ಸಮಯದ ನಿಯೋಜನೆ ಸಂದರ್ಭದಲ್ಲಿ ಹೀಗೆ ಹೇಳಬಹುದು, ಏನೆಂದರೆ ಕಡಿಮೆ ಮಹತ್ವವುಳ್ಳ ವಿಷಯಕ್ಕೆ ನಾವು ೮೦ ಪ್ರತಿಶತ ಸಮಯವನ್ನು ಉಪಯೋಗಿಸಿ ೨೦ ಪ್ರತಿಶತ ಪರಿಣಾಮವನ್ನು ಪಡೆಯುತ್ತೇವೆ. ಆದರೆ ಮಹತ್ವವುಳ್ಳ ವಿಷಯಕ್ಕೆ ಮಾತ್ರ ನಾವು ಕೇವಲ ೨೦ ಪ್ರತಿಶತ ಸಮಯ ನೀಡುತ್ತೇವೆ. ಆದಕಾರಣ ನಮಗೆ ಸಮಯವೇ ಸಾಕಾಗುವುದಿಲ್ಲ. ಮುಂದಿನ ಅಂಶಗಳನ್ನು ಗಮನದಲ್ಲಿಟ್ಟರೆ ಸಮಯದ ನಿಯೋಜನೆ ಮಾಡಲಿಕ್ಕೆ ಸುಲಭವಾಗುವುದು.
೧. ಧ್ಯೇಯವನ್ನು ಇಟ್ಟುಕೊಳ್ಳುವುದು.
೨. ಅದರಲ್ಲಿ ದೀರ್ಘಕಾಲದ ಮತ್ತು ತಕ್ಷಣ ಸಾಧ್ಯಗೊಳ್ಳುವ ಧ್ಯೇಯಗಳನ್ನು ಬೇರೆ ಮಾಡಿರಿ.
೩. ಈಗ ನಿಮ್ಮ ಹತ್ತಿರವಿರುವ ಪ್ರಲಂಬಿತ ಕೃತಿಗಳು ಮತ್ತು ಮುಂದೆ ಮಾಡುವ ಕೃತಿಗಳ ಪಟ್ಟಿ ಮಾಡಿರಿ.
೪. ಈ ಪಟ್ಟಿಯಲ್ಲಿ ತಕ್ಷಣದ ಮತ್ತು ಮಹತ್ವದ ಕೆಲಸಗಳು, ತಕ್ಷಣದ ಆದರೆ ಕಡಿಮೆ ಮಹತ್ವದ, ಮಹತ್ವದ್ದು ಆದರೆ ತಕ್ಷಣ ಮಾಡಬೇಕಾಗಿಲ್ಲದು ಮತ್ತು ಇನ್ನುಳಿದ ಹೀಗೆ ವಿಭಾಗಿಸಿರಿ.
೫. ಅದರಲ್ಲಿ ತಕ್ಷಣ ಮತ್ತು ಮಹತ್ವವುಳ್ಳ ಕಾರ್ಯಗಳಿಗೆ ಪ್ರಾಧಾನ್ಯತೆ ನೀಡಬೇಕು, ನಂತರ ಮುಂದಿನ ಕ್ರಮಕ್ಕನುಸಾರ ಕಾರ್ಯಗಳನ್ನು ತೆಗೆದುಕೊಂಡರೆ ನಿಯೋಜನೆಯು ಸುಲಭವಾಗುವುದು.
೬. ಸಿಕ್ಕ ಸಮಯದ ಸದುಪಯೋಗವನ್ನು ಹೇಗೆ ಮಾಡುವುದು, ಎಂಬ ವಿಚಾರ ಪ್ರತಿಕ್ಷಣ ಮಾಡಿರಿ. ಕಾಯ್ದಿಟ್ಟ ಸಮಯವು ನಮಗೆ ಬಹುಮಾನವೆಂದು ತಿಳಿಯಿರಿ.
೭. ಕೈಯಲ್ಲಿ ತೆಗೆದುಕೊಂಡ ಕೆಲಸವನ್ನು ಪರಿಪೂರ್ಣಗೊಳಿಸಲು ಪ್ರಯತ್ನ ಮಾಡಿರಿ.
೮. ಪ್ರತಿಯೊಂದು ವಿಷಯ ಗಮನಕೊಟ್ಟು ಕೇಳಿ, ಉದಾ. ಒಂದು ಸಂದೇಶವನ್ನು ತೆಗೆದುಕೊಳ್ಳುವಾಗ, ಅದು ನಮಗೆ ಸರಿಯಾಗಿ ತಿಳಿದಿದೆಯೇ, ಎಂದು ಖಚಿತಪಡಿಸಿಕೊಳ್ಳಿರಿ,
೯. ಯಾವದೇ ಒಬ್ಬ ವ್ಯಕ್ತಿಗೆ ಸಂದೇಶವನ್ನು ಕೊಡುವಾಗ ಅದು ಅವನಿಗೆ ಸರಿಯಾಗಿ ತಿಳಿದಿದೆಯೇ ಎಂದು ಗೊತ್ತುಮಾಡಿಕೊಳ್ಲಿರಿ.
ಸಮಯದ ಸದುಪಯೋಗ ಮಾಡಲು ದಿನಚರಿ ಬರೆಯುವದು.
ಯಾವ ವಿಷಯದಲ್ಲಿ ನಮ್ಮ ಸಮಯವು ವ್ಯರ್ಥವಾಗುತ್ತಿದೆ ಎಂದು ಅದರ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಹಾಗೆ ಆದರೆ ಮಾತ್ರ ನಮ್ಮ ಸಮಯವನ್ನು ವ್ಯರ್ಥವಾಗದಂತೆ ನಿಯಂತ್ರಣೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಮ್ಮ ಸ್ವಂತದ ದಿನಕ್ರಮದ ದಿನಚರಿಯನ್ನು ಬರೆಯಿರಿ. ಅದರಲ್ಲಿ, ವ್ಯರ್ಥವಾಗುತ್ತಿರುವ ಸಮಯದ ಕಾರಣವನ್ನು ಅರಿತುಕೊಂಡು ಅದರ ಮೇಲೆ ಉಪಾಯವನ್ನು ಆಯೋಜಿಸಿ !
ಸಮಯದ ನಿಯೋಜನೆ ಅಂದರೆ ಸ್ವಂತದ ನಿಯೋಜನೆ ಎಂದು ಗಮನದಲ್ಲಿಟ್ಟುಕೊಳ್ಳಿ! ಯಾರು ಸ್ವಂತದ ನಿಯೋಜನೆಯನ್ನು ಉತ್ತಮವಾಗಿ ಮಾಡುವರೋ, ಅವರೇ ಇನ್ನಿತರರ ನಿಯೋಜನೆಯನ್ನು ಯೊಗ್ಯರೀತಿಯಲ್ಲಿ ಮಾಡಬಲ್ಲರು. ಇದರಲ್ಲಿ ನಮ್ಮ ಕಾರ್ಯಕ್ಷಮತೆಯು ಹೆಚ್ಚುವುದು!