ಮಕ್ಕಳೇ, ಈ ಅಭಿಮಾನಾಸ್ಪದ ವಾಸ್ತವವನ್ನು ತಿಳಿಯಿರಿ !




ಬ್ರಿಟೀಷರ ಆಳ್ವಿಕೆಯ ಮೊದಲೇ ಭಾರತವು ಜ್ಞಾನಾರ್ಜನೆಯ
ಅಂದರೆ ಶಿಕ್ಷಣದ ಶಿಖರವೇರಿರುವುದು

ಭಾರತದಲ್ಲಿ ಬ್ರಿಟೀಷರು ಬರುವ ಮೊದಲಿನ ಕಾಲದ ಶಿಕ್ಷಣವು ಉತ್ಕೃಷ್ಟವಾಗಿತ್ತು. ಈ ಬಗ್ಗೆ ಯುರೋಪಿನ ಪ್ರವಾಸಿಗರ ಹಾಗೂ ರಾಜಕಾರಣಿಗಳ ನಿಃಸಂಧಿಗ್ಧ ಸಾಕ್ಷಿಯಿದೆ. ರಾಮಸ್ವರೂಪರು ತಮ್ಮ Education System during Pre-British Period ಎಂಬ ಪ್ರಬಂಧದಲ್ಲಿ ಇದರ ಬಗ್ಗೆ ಚರ್ಚಿಸಿದ್ದಾರೆ.

ಅ. ಬ್ರಿಟೀಷರು ಭಾರತಕ್ಕೆ ಬರುವ ಮೊದಲು ಭಾರತವು ಜ್ಞಾನಾರ್ಜನೆಯ, ಅಂದರೆ ಶಿಕ್ಷಣದ ಉತ್ತುಂಗದಲ್ಲಿತ್ತು. ಏಷಿಯಾ ಹಾಗೂ ಯುರೋಪಿನಲ್ಲಿ ಅಗ್ರಗಣ್ಯವಾಗಿತ್ತು. ಆಗಿನ ಕಾಲದಲ್ಲಿ ಭಾರತದಲ್ಲಿ ಯಾರೂ ನಿರಕ್ಷರಸ್ಥರು ಇರಲಿಲ್ಲ. ಇದಕ್ಕೆ ಪ್ರಮಾಣವೆಂದರೆ ಭಾರತಕ್ಕೆ ಬಂದ ಪ್ರವಾಸಿ ಮೆಗಸ್ಥನೀಸನು ಇಲ್ಲಿಯ ಶಿಕ್ಷಣದಿಂದ ಅತ್ಯಂತ ಪ್ರಭಾವಿತನಾದನು. ಮೆಗಸ್ಥನೀಸನು ಚಂದ್ರಗುಪ್ತನ ದರಬಾರಿನಲ್ಲಿದ್ದನು, ಅವನು ಭಾರತದಲ್ಲಿನ ಜ್ಞಾನ ಹಾಗೂ ಶಿಕ್ಷಣದ ಅತ್ಯುತ್ತಮ ರೀತಿಯಲ್ಲಿ ಪ್ರಶಂಸೆ ಮಾಡುತ್ತಾನೆ.

ಆ. ಕ್ರಿಶ. ೧೭೮೦ ರಿಂದ ೧೮೧೦ರ ವರೆಗೆ ಬ್ರಿಗೇಡಿಯರ ಜನರಲ ಅಲೆಕ್ಸಾಂಡರ ವಾಕರ್ ರವರು ಭಾರತದಲ್ಲಿ ನೌಕರಿ ಮಾಡುತ್ತಿದ್ದರು. ಅವರು 'ಜಗತ್ತಿನಲ್ಲಿ ಶಿಕ್ಷಣದ ಜ್ವಲಂತ ಜ್ಞಾನವು ಹಿಂದೂಗಳಷ್ಟು ಬೇರೆ ಯಾವ ಜನರಿಗೂ ಇಲ್ಲ’ ಎಂದು ಹೇಳುತ್ತಾರೆ.

ಇ. ಸಂಪೂರ್ಣ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣದ ಸುವ್ಯವಸ್ಥೆಯಿರುವುದರ ಬಗ್ಗೆ ಆ ಕಾಲದ ಯುರೋಪಿಯನ್ನರು ವರ್ಣನೆ ಮಾಡುತ್ತಾರೆ. ಕ್ರಿಶ. ೧೮೨೦ ರಲ್ಲಿ Abbe J. A. Dubois ರವರು ’ಶಾಲೆಗಳಿಲ್ಲದ ಊರುಗಳು ಸಿಗುವುದು ಕಷ್ಟ. ಶಿಕ್ಷಣವು ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸುವ ಹಾಗೂ ಯೋಗ್ಯತೆಗೆ ಅನುಕೂಲಕರವಾಗಿವೆ’ ಎಂದು ಹೇಳುತ್ತಾರೆ.

– ಗುರುದೇವ ಡಾ. ಕಾಟೇಸ್ವಾಮಿ (ಘನಗರ್ಜಿತ, ಮಾರ್ಚ ೨೦೦೯)

ಆಂಗ್ಲರು ಭಾರತಕ್ಕೆ ಬರುವುದಕ್ಕಿಂತ ಮೊದಲು,
ಭಾರತದಲ್ಲಿ ಅವರ ದೇಶಕ್ಕಿಂತಲೂ ಹೆಚ್ಚು ಸಾಕ್ಷರತೆಯಿತ್ತು !

ಆಂಗ್ಲರು ಭಾರತಕ್ಕೆ ಬರುವುದಕ್ಕೆ ಮೊದಲು ಭಾರತದಲ್ಲಿ ೭ ಲಕ್ಷ ೩೨ ಸಾವಿರ ಗುರುಕುಲಗಳಿದ್ದವು. ಶೇ. ೯೭ರಷ್ಟು ಜನರು ಸುಶಿಕ್ಷಿತರಾಗಿದ್ದರು. ಆಗಿನ ಶಿಕ್ಷಣಕ್ರಮದಲ್ಲಿ ೧೮ ವಿಷಯಗಳಿದ್ದವು. ಅದರಲ್ಲಿ ಆಯುರ್ವೇದ, ಯೋಗ, ಆರೋಗ್ಯ, ಗಣಿತ, ವ್ಯವಸ್ಥಾಪನೆಗಳಂತಹ ಅನೇಕ ವಿಷಯಗಳು ಸಮಾವೇಶಗೊಂಡಿದ್ದವು.

-ಅನಂತ ಗಾಡಗೀಳ (ಲೋಕಜಾಗರ, ಅಕ್ಟೋಬರ್ ೨೦೦೯)

ಭಾರತದ ಮಹಾನ ಸಂಸ್ಕೃತಿಯ ಆಚರಣೆಯನ್ನು ಮಾಡುವ ಪಾಶ್ಚಾತ್ಯರು !

ಹಿಂದೂ ಧರ್ಮವು ನೀಡಿದ ಭಾರತೀಯ ಸಂಸ್ಕೃತಿ, ಸಂಸ್ಕೃತ ಭಾಷೆ, ಆಧ್ಯಾತ್ಮ, ಶ್ರೀಮತ ಭಗವದ್ಗೀತೆ ಇತ್ಯಾದಿಗಳನ್ನು ಜಾಗತಿಕ ಕೊಡುಗೆ ಎಂದು ಪಾಶ್ಚಾತ್ಯ ಸಮಾಜವು ಪರಿಗಣಿಸುತ್ತದೆ. ಇನ್ನೊಂದೆಡೆ ’ಯುನೆಸ್ಕೋ’ ಈ ಅಂತರಾಷ್ಟ್ರೀಯ ಸಂಸ್ಥೆಯು ಜಾಗತಿಕ ಪಠ್ಯ ಕ್ರಮದಲ್ಲಿ ಹಿಂದೂಧರ್ಮದ ತತ್ತ್ವಗಳನ್ನು ದರ್ಶಿಸುವ ಕಾವ್ಯಗಳನ್ನು ಸ್ವೀಕರಿಸಿದೆ. ಈ ಕಾವ್ಯಗಳು 'ಮಕ್ಕಳಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆಗಾಗಿ, ಅಂತೆಯೇ ಯುವ ಪೀಳಿಗೆಯಲ್ಲಿರುವ ಕ್ರೌರ್ಯ, ಕುಸಂಸ್ಕಾರ ಹಾಗೂ ದುರ್ಜನತೆಯನ್ನು ನಷ್ಟಗೊಳಿಸಲು ಪೂರಕವಾಗುವವು’ ಎಂದು 'ಯುನೆಸ್ಕೋ' ಹೇಳಿದೆ. ಅಮೇರಿಕಾ ಹಾಗೂ ಯುರೋಪ ದೇಶಗಳಲ್ಲಿನ ಶಿಕ್ಷಣವ್ಯವಸ್ಥೆಗಳು ಸಂಸ್ಕೃತ ಭಾಷೆ ಹಾಗೂ ರಾಮಕೃಷ್ಣಾದಿ ಅವತಾರಗಳ ಕಥೆಗಳನ್ನು ಆಧರಿಸಿವೆ. ಅಮೇರಿಕಾದ ವಿದ್ಯಾಪೀಠಗಳಲ್ಲಿ ಭಗವದ್ಗೀತೆಯ ಅಭ್ಯಾಸವನ್ನು ಸಕ್ರೀಯಗೊಳಿಸಲಾಗಿದೆ.

ಭಾರತೀಯ ಶಿಕ್ಷಣ ಪದ್ಧತಿಯ ಈ ಶಕ್ತಿಯನ್ನು ತಿಳಿಯಿರಿ !

ವಿದ್ಯಾರ್ಥಿಗಳು ವ್ರತಸ್ಥರಾಗಿರಬೇಕು. ಇದು ಭಾರತೀಯ ಶಿಕ್ಷಣ ಶಾಸ್ತ್ರಜ್ಞರ ದೂರದೃಷ್ಟಿಯಾಗಿದೆ. ಆಹಾರ, ಕೇಶಭೂಷಣ, ವಿಹಾರಾದಿ ವಿಷಯಗಳಲ್ಲಿ ಕಟ್ಟುನಿಟ್ಟಾಗಿರಬೇಕು, ಸಂಯಮವಿರಬೇಕು. ಅಂತೆಯೇ ಭಾರತೀಯ ಅಧ್ಯಾಪನದಲ್ಲಿ ಸ್ವೇಚ್ಛಾಚಾರವಿರಲಿಲ್ಲ. ಸ್ವೇಚ್ಚಾಚಾರವಿದ್ದಲ್ಲಿ ವಿದ್ಯೆಯು ಅಸಂಭವ ಹಾಗೂ ವಿದ್ಯೆಯಿದ್ದಲ್ಲಿ ಸ್ವೇಚ್ಚಾಚಾರವು ಅಶಕ್ಯವಾಗಿದೆ.

ಎಷ್ಟು ಆಧುನಿಕರಲ್ಲಿ ಸ್ವಾಮಿ ರಾಮತೀರ್ಥರಂತಹ ಆತ್ಮವಿಶ್ವಾಸವಿದೆ ?

ಸ್ವಾಮಿ ರಾಮತೀರ್ಥರು ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು. ಗಣಿತವು ಅವರ ಇಷ್ಟದ ವಿಷಯವಾಗಿತ್ತು. ಕಲಿಯುವಾಗ ಅವರ ಹೆಸರು ತೀರ್ಥರಾಮ ಎಂದಿತ್ತು. ಒಮ್ಮೆ ಪರೀಕ್ಷೆಯಲ್ಲಿ ೧೩ ಪ್ರಶ್ನೆಗಳನ್ನು ನೀಡಿ ಅವುಗಳಲ್ಲಿ ಕೇವಲ ೧ ಲೆಕ್ಕವನ್ನು ಬಿಡಿಸಲು ಹೇಳಲಾಗಿತ್ತು. ತೀರ್ಥರಾಮನು ೧೩ ರಲ್ಲಿ ೧೩ ಪ್ರಶ್ನೆಗಳನ್ನೂ ಉತ್ತರಿಸಿದನು. '೧೩ ಉತ್ತರಗಳೂ ಸರಿಯಿವೆ, ಯಾವುದಾದರೂ ಒಂದು ಉತ್ತರವನ್ನು ಪರೀಕ್ಷಿಸಬಹುದು’ ಎಂಬುದು ಅವರ ಆತ್ಮವಿಶ್ವಾಸವಾಗಿತ್ತು.

ನಮಗೆ ಜಾರ್ಜ ವಾಶಿಂಗಟನ್ ರ ಅವಶ್ಯಕತೆಯೇನಿದೆ ?

ನಮ್ಮ ಹಿಂದೂ ಮಕ್ಕಳು ಸತ್ಯವಚನಿ ಯುಧಿಷ್ಠಿರ ಹಾಗೂ ಶ್ರೀರಾಮರ ಚಾರಿತ್ರ್ಯದಿಂದ ಸತ್ಯದ ಮಹಿಮೆಯನ್ನು ತಿಳಿಯುತ್ತಾರೆ. ಸತ್ಯಹೇಳಲು ಕಲಿಯುತ್ತಾರೆ. ಅಸತ್ಯವನ್ನು ತಿರಸ್ಕರಿಸುತ್ತಾರೆ. ನಮಗೆ 'ಜಾರ್ಜ ವಾಶಿಂಗಟನ್' ಉದಾಹರಣೆ ಏಕೆ ಬೇಕು ?

-ಗುರುದೇವ ಡಾ. ಕಾಟೆಸ್ವಾಮಿಜಿ, (ಸಾಪ್ತಾಹಿಕ ಸನಾತನ ಚಿಂತನ, ೧.೧೦.೨೦೦೯)

Leave a Comment