ಸ್ನಾನದ ಸಮಯದಲ್ಲಿ ಪಠಿಸುವ ಸ್ತೋತ್ರಗಳು

ಗಂಗೇಚಯಮುನೇಚೈವಗೋದಾವರಿಸರಸ್ವತಿ|

ನರ್ಮದೇಸಿಂಧುಕಾವೇರಿಜಲೇsಸ್ಮಿನ್ಸನ್ನಿಧಿಂಕುರು||

ಶ್ರೀಬೃಹನ್ನಾರದೀಯಪುರಾಣ,ಪೂರ್ವಭಾಗ, ಪಾದ ೧,ಅಧ್ಯಾಯ೨೭,ಶ್ಲೋಕ೩೩

ಅರ್ಥ : ಹೇ ಗಂಗೇ, ಯಮುನೇ, ಗೋದಾವರೀ, ಸರಸ್ವತೀ, ನರ್ಮದೇ, ಸಿಂಧುಮತ್ತುಕಾವೇರಿ ನದಿಗಳೇ, ನೀವೆಲ್ಲರೂಈ ಸ್ನಾನದ ನೀರನ್ನು ಪವಿತ್ರಗೊಳಿಸಿಎಂದುಪಾರ್ಥ್ಹಿಸುತ್ತೇನೆ.

ನಮಾಮಿ ಗಂಗೇ ತವ ಪಾದಪಂಕಜಂ ಸುರಾಸುರೈರ್ವಂದಿತದಿವ್ಯರೂಪಾಮ್ |
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾ ನರಾಣಾಮ್ ||

ಅರ್ಥ : ಸರ್ವ ಐಹಿಕ ಸುಖ, ಭೋಗಗಳುಮತ್ತುಮೋಕ್ಷವನ್ನುಪ್ರದಾನಿಸುವಹೇ ಗಂಗಾಮಾತೇ, ನಿನ್ನ ಚರಣಕಮಲಗಳುಅವರವರಭಾವಾನುಸಾರಸರ್ವ ದೇವ ಮತ್ತುದೈತ್ಯರಿಗೆವಂದನೀಯವಾಗಿವೆ,ಅಂತಹ ನಿನ್ನಚರಣಗಳಲ್ಲಿನಾನುವಂದಿಸುತ್ತೇನೆ.

ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ |
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ||
ತೀರ್ಥರಾಜಾಯ ನಮಃ |

ಅರ್ಥ : ನೂರಾರುಮೈಲಿ (ಯೋಜನೆ) ದೂರದಿಂದಯಾರು‘ಗಂಗಾ, ಗಂಗಾ, ಗಂಗಾ’, ಎಂದುಗಂಗೆಯಸ್ಮರಣೆಯನ್ನುಮಾಡುತ್ತಾರೆಯೋ, ಅವರುಸರ್ವ ಪಾಪಗಳಿಂದಮುಕ್ತವಾಗಿವಿಷ್ಣುಲೋಕವನ್ನುಪ್ರವೇಶಿಸುತ್ತಾರೆ.

ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ |
ಕಾವೇರೀ ಶರಯೂ ಮಹೇಂದ್ರತನಯಾ ಚರ್ಮಣ್ವತೀ ವೇದಿಕಾ ||
ಕ್ಷಿಪ್ರಾ ವೇತ್ರವತೀ ಮಹಾಸುರನದೀ ಖ್ಯಾತಾ ಜಯಾ ಗಣ್ಡಕೀ |
ಪೂರ್ಣಾಃಪೂರ್ಣಜಲೈಃಸಮುದ್ರಸಹಿತಾಃಕುರ್ವಂತುಮೇ ಮಂಗಲಮ್ ||

ಅರ್ಥ : ಗಂಗಾ, ಸಿಂಧು, ಸರಸ್ವತೀ, ಯಮುನಾ, ಗೋದಾವರೀ, ನರ್ಮದಾ, ಕಾವೇರೀ, ಶರಯೂ, ಮಹೇಂದ್ರತನಯಾ​, ಚಂಬಳಾ, ವೇದಿಕಾ, ಕ್ಷಿಪ್ರಾ, ವೇತ್ರವತೀ (ಮಾಲ್ವಾ ಪ್ರಾಂತ್ಯದಬೇತವಾ ನದೀ), ಪ್ರಖ್ಯಾತ ಮಹಾಸುರನದೀ, ಜಯಾ ಮತ್ತುಗಣ್ಡಕೀನದಿಗಳೇ, ನಿಮ್ಮಪವಿತ್ರಮತ್ತುಪರಿಪೂರ್ಣ ನೀರುಸಮುದ್ರಾಸಹಿತನನ್ನಕಲ್ಯಾಣ ಮಾಡಲಿ.

Leave a Comment