ಆದೌ ರಾಮತಪೋವನಾದಿಗಮನಂ ಹತ್ವಾ ಮೃಗಂ ಕಾಞ್ಚನಮ್ (ಕಾಂಚನಂ)
ವೈದೇಹೀಹರಣಂ ಜಟಾಯುಮರಣಂ ಸುಗ್ರೀವಸಂಭಾಷಣಂ |
ವಾಲೀನಿರ್ದಲನಂ ಸಮುದ್ರತರಣಂ ಲಙ್ಕಾಪುರೀದಾಹನಂ (ಲಂಕಾಪುರೀದಾಹನಂ)
ಪಶ್ಚಾತ್ ರಾವಣಕುಂಭಕರ್ಣಹನನಮ್ ಏತದ್ಧಿ ರಾಮಾಯಣಮ್||
ಅರ್ಥ : ಮೊದಲಿಗೆ ರಾಮನು ಕಾಡಿಗೆ ಹೋದನು,ಅಲ್ಲಿ ಸುವರ್ಣ ಜಿಂಕೆಯನ್ನು ಹಿಂಬಾಲಿಸಿದನು, ಸೀತೆಯ ಅಪಹರಣವಾಯಿತು, ಜಟಾಯುವಿನ ವಧೆಯಾಯಿತು, ಸುಗ್ರೀವನ (ಮತ್ತು ರಾಮನ) ಮೈತ್ರಿಯಾಯಿತು, ವಾಲಿಯನ್ನು ವಧಿಸಲಾಯಿತು, (ಹನುಮಂತ) ಸಮುದ್ರ ಉಲ್ಲಂಘನ ಮಾಡಿದ, ಲಂಕೆಯನ್ನು ದಹಿಸಿದ, ನಂತರ ರಾವಣ ಮತ್ತು ಕುಂಭಕರ್ಣಾದಿಗಳನ್ನು ವಧಿಸಿದರು, ಇದೆ ರಾಮಾಯಣದ ಸಾರಾಂಶ.