ಹಿಂದಿನ ಕಾಲದಲ್ಲಿ ಶಿಕ್ಷಕರಿಗೆ ಗುರುಗಳು (ಗುರೂಜಿ) ಅಥವಾ ಪ್ರಚಾರ್ಯರು ಎಂದು ಸಂಬೋಧಿಸುತ್ತಿದ್ದರು. ಗುರು-ಶಿಷ್ಯ ಪರಂಪರೆಯು ಹಿಂದೂ ಸಂಸ್ಕೃತಿಯ ಅಮೂಲ್ಯ ವೈಶಿಷ್ಟ್ಯವಾಗಿದೆ. ಗುರುಪೂರ್ಣಿಮೆ ಅಂದರೆ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ದಿನ, ಗುರುಗಳು ಶಿಷ್ಯರಿಗೆ ಹೇಗೆ ಬ್ರಹ್ಮಜ್ಞಾನ ನೀಡುತ್ತಾರೆಯೋ ಅದರಂತೆ ಶಿಕ್ಷಕರು ಮಕ್ಕಳಿಗೆ ಅವರೆಡೆಗೆ ಇರುವ ವಿದ್ಯಾರೂಪಿ ಅಮೂಲ್ಯ ಧನವನ್ನು ನೀಡುತ್ತಾರೆ. ಆದುದರಿಂದ ಅವರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದಕ್ಕಾಗಿ ಶಿಕ್ಷಕದಿನ ಆಚರಿಸುವುದರಿಂದ ನಮ್ಮ ಸಂಸ್ಕೃತಿಯು ಕಾಪಾಡಲಾಗುತ್ತದೆ.
ಜೀವನದ ಯೋಗ್ಯ ದಿಗ್ದರ್ಶಕರು
ಶಿಕ್ಷಕರು ನಮ್ಮ ಜೀವನದಲ್ಲಿನ ಅಜ್ಞಾನ ದೂರ ಮಾಡಿ ವ್ಯವಹಾರದ ಅನೇಕ ವಿಷಯಗಳ ಜ್ಞಾನ ನೀಡುತ್ತಾರೆ. ನಮ್ಮ ಜೀವನದ ಯೋಗ್ಯ ದಿಗ್ದರ್ಶಕರೆಂದರೆ ಶಿಕ್ಷಕರೇ! ನಾವು ಅವರ ಗೌರವವನ್ನು ಪ್ರತಿದಿನ ಪ್ರತಿಕ್ಷಣ ಮಾಡಬೇಕು. ಇಂದಿನ ದಿನವು ಶಿಕ್ಷಕರ ಬಗ್ಗೆ ಕೃತಜ್ಞತೆ ವ್ಯಕ್ತ ಪಡಿಸುವ ದಿನವಾಗಿದೆ.
ಶಿಕ್ಷಿಸುವ ಹಿಂದೆ ಶಿಕ್ಷಕರಲ್ಲಿರುವ ಕಲ್ಯಾಣದಾಯಕ ಉದ್ದೇಶ
ನಾವು ಜೀವನದಲ್ಲಿನ ಅಯೋಗ್ಯ ಸಂಗತಿಗಳನ್ನು ತಪ್ಪಿಸಬೇಕು, ಆದರ್ಶವಾಗಿ ವರ್ತಿಸಬೇಕೆಂದು ಶಿಕ್ಷಕರು ನಮಗೆ ತಾಯಿಯಂತೆ ಶಿಕ್ಷಿಸುತ್ತಾರೆ. ಅದರ ಹಿಂದೆ ನಾವು ಅದರ್ಶರಾಗಬೇಕು ಎಂಬ ಪವಿತ್ರ ಉದ್ದೇಶವಿರುತ್ತದೆ; ಆದರೆ ನಾವು ಅವರ ಕೃತಿಯ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಬೇಕು. ಕುಂಬಾರನು ಗಡಿಗೆಗಳನ್ನು ತಯಾರಿಸಲು ಹೇಗೆ ಕಚ್ಚಾ ಗಡಿಗೆಗೆ ಹೊಡೆತ ಹಾಕುತ್ತಾನೆಯೋ ಅದರಂತೆ ಅವರು ನಮ್ಮನ್ನು ಶಿಕ್ಷಿಸುತ್ತಾರೆ. ‘ಮಕ್ಕಳ ಜೀವನಕ್ಕೆ ಯೋಗ್ಯ ಆಕಾರ ಬರಬೇಕು, ಅವರ ಜೀವನ ಸಮಾಜಕ್ಕಾಗಿ ಆದರ್ಶಯುತ ಮತ್ತು ಆನಂದದಾಯಕವಾಗಿರಬೇಕು’ ಎಂದು ಶಿಕ್ಷಕರಿಗೆ ಅನಿಸುತ್ತಿರುತ್ತದೆ. ಶಿಕ್ಷಕರಿಗೆ ಅನೇಕ ವಿಷಯಗಳ ಜ್ಞಾನವಿರುತ್ತದೆ; ಆದುದರಿಂದ ನಾವು ಶಿಕ್ಷಕರ ಸಮೀಪವಿರುವಾಗ ಕಲಿಯುವ ಸ್ಥಿತಿಯಲ್ಲಿರಬೇಕು. ಕಲಿಯುವ ಸ್ಥಿತಿಯಲ್ಲಿದ್ದು ನಾವು ಶಿಕ್ಷಕರಿಗೆ ಸಂದೇಹಗಳನ್ನು ಕೇಳಿದಾಗ ಅವರಿಗೆ ಕಲಿಸುವಿಕೆಯಲ್ಲಿಯೂ ಆನಂದ ದೊರೆಯುತ್ತದೆ. ಪರಿಣಾಮವಾಗಿ ಅವರು ಮುಂದು-ಮುಂದಿನ ಜ್ಞಾನವನ್ನು ಸ್ವತಃ ನೀಡುತ್ತಾರೆ; ಆದುದರಿಂದ ನಾವು ಕಲಿಯುವ ಸ್ಥಿತಿಯಲ್ಲಿರಬೇಕು.
ಶಿಕ್ಷಕರ ಆಜ್ಞಾಪಾಲನೆ ಮಾಡಿರಿ
ಸಮಾಜದ ಯೋಗ್ಯ ಅಯೋಗ್ಯ ಸಂಗತಿಗಳ ಜ್ಞಾನ ನಮಗಿರುವುದಿಲ್ಲ. ಶಿಕ್ಷಕರು ಜ್ಞಾನಿಗಳಾಗಿರುತ್ತಾರೆ; ಆದುದರಿಂದ ಅವರು ಯಾವಾಗ ಯಾವುದೊಂದು ವಿಷಯವನ್ನು ‘ಮಾಡಿರಿ ಅಥವಾ ಮಾಡಬೇಡಿರಿ’ ಎಂದು ಹೇಳುತ್ತಾರೆಯೋ ಆಗ ಅವರ ಆಜ್ಞೆಯಂತೆ ತ್ವರಿತವಾಗಿ ಕೃತಿ ಮಾಡಿದಾಗ ನಮ್ಮ ಉನ್ನತಿಯಾಗುತ್ತದೆ. ಇದರಲ್ಲಿ ಸಂದೇಹ ತೆಗೆದುಕೊಳ್ಳಬಾರದು.
ಶಿಕ್ಷಕರಿಗೆ ಪ್ರತಿದಿನ ಕೃತಜ್ಞತೆಯ ಭಾವದಿಂದ ನಮಸ್ಕಾರ ಮಾಡಬೇಕು
ಶಿಕ್ಷಕರ ಮಾಧ್ಯಮದಿಂದ ದೇವರೇ ನಮಗೆ ಅನೇಕ ವಿಷಯಗಳ ಜ್ಞಾನ ನೀಡುತ್ತಿರುತ್ತಾನೆ. ಅವರು ನಮ್ಮ ತಾಯಿಯಂತೆ ಪ್ರೀತಿ ಮಾಡುತ್ತಾರೆ. ಅವರಿಗೆ ನಮಸ್ಕಾರ ಮಾಡಿದ್ದರಿಂದ ‘ನಾನು ಅಜ್ಞಾನಿಯಾಗಿದ್ದೇನೆ’ ಇದರ ಅರಿವು ಸತತವಾಗಿರುತ್ತದೆ. ‘ವಿದ್ಯಾ ವಿನಯೇನ ಶೋಭತೆ’ ಈ ಉಕ್ತಿಯಂತೆ ನಮಸ್ಕಾರದ ಕೃತಿಯಿಂದ ‘ನಮ್ರತೆ’ ಈ ಗುಣವು ನಮ್ಮಲ್ಲಿ ಬರುತ್ತದೆ. ಎಷ್ಟು ನಮ್ಮಲ್ಲಿ ನಮ್ರತೆ ಅಧಿಕವೋ ಅಷ್ಟು ನಮ್ಮ ಜ್ಞಾನ ಗ್ರಹಿಸುವ ಕ್ಷಮತೆ ಹೆಚ್ಚುತ್ತದೆ. ಆದುದರಿಂದ ಪ್ರತಿದಿನ ಕೃತಜ್ಞತೆಯ ಭಾವ ಜಾಗೃತವಾಗಿಡಿರಬೇಕು. ‘ಅವರಿಂದಲೇ ನಾನು ಜ್ಞಾನಿಯಾಗಿ ನನ್ನ ಜೀವನ ಸಮೃದ್ಧವಾಗಿರುತ್ತದೆ’ ಎಂಬ ಸತತ ಅರಿವು ಇಡುವುದೆಂದರೆ ಕೃತಜ್ಞತೆ. ಅವರು ನನಗೆ ಗಣಿತ ಕಲಿಸುತ್ತಾರೆ; ಆದುದರಿಂದ ನಾನು ವ್ಯವಹಾರ ಸರಿಯಾಗಿ ಮಾಡುತ್ತೇನೆ, ಅವರು ನನಗೆ ಅನೇಕ ವಿಷಯಗಳನ್ನು ಕಲಿಸುತ್ತಾರೆ; ಅದರಿಂದ ನಾನು ಸಂವಾದ ಸಾಧಿಸುತ್ತೇನೆ ಎಂಬುದನ್ನು ಗಮನದಲ್ಲಿಟ್ಟು ಸತತವಾಗಿ ಕೃತಜ್ಞತೆ ವ್ಯಕ್ತ ಪಡಿಸಬೇಕು.
ಶಿಕ್ಷಕರ ಬಗ್ಗೆ ಕೃತಜ್ಞತೆಯ ಮತ್ತು ಶರಣಾಗತಭಾವ ಇಟ್ಟುಕೊಳ್ಳಿ
ನಾವು ಶಿಕ್ಷಕರೆಡೆಗೆ ತಾಯಿಗೆ ಸಮಾನವಾದ ಗೌರವದಿಂದ ನೋಡಬೇಕು. ಅವರು ನಮ್ಮ ಮೇಲೆ ಪ್ರೀತಿ ಮಾಡುತ್ತಾರೆ. ಅವರು ಪ್ರತಿಯೊಂದು ವಿಷಯವನ್ನು ನಿರಪೇಕ್ಷ ಭಾವದಿಂದ ಕಲಿಸುತ್ತಾರೆ. ಇಂದು ನಾವು ಶಿಕ್ಷಕರ ಬಗೆಗಿನ ಭಾವ ಹೇಗೆ ಇರಬೇಕು ಎಂಬುದನ್ನು ನೋಡಿದೆವು. ಶಿಕ್ಷಕರೆಂದರೆ ನಮ್ಮ ಜೀವನದ ಗುರುಗಳು. ನಾವು ಸತತವಾಗಿ ಅವರ ಬಗ್ಗೆ ಕೃತಜ್ಞತೆಯ ಮತ್ತು ಶರಣಾಗತ ಭಾವವನ್ನಿಟ್ಟರೆ ನಮ್ಮ ಸರ್ವಾಂಗೀಣ ವಿಕಾಸವಾಗಲಿಕ್ಕಿದೆ.
– ಶ್ರೀ. ರಾಜೇಂದ್ರ ಪಾವಸ್ಕರ (ಗುರೂಜಿ), ಪನವೆಲ.