ದೇಶದ ಅಸ್ಮಿತೆಯ ಪ್ರತೀಕವಿರುವ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಹಬ್ಬ ಮತ್ತು ಇತರ ಮಹತ್ತ್ವಪೂರ್ಣ ದಿನಗಳಲ್ಲಿ ಗೌರವಯುತವಾಗಿ ಹಾರಿಸಲಾಗುತ್ತದೆ. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುತ್ತಿರುವಾಗ ಯಾವುದೇ ರೀತಿಯಲ್ಲಿ ಅದರ ಅವಮಾನವಾಗಬಾರದೆಂದು ಕೆಲವು ನಿಯಮಗಳನ್ನು ಮಾಡಲಾಗಿವೆ. ಕೇಂದ್ರೀಯ ಗೃಹಮಂತ್ರಾಲಯದ ವತಿಯಿಂದ ಭಾರತೀಯ ರಾಷ್ಟ್ರಧ್ವಜ ಸಂಹಿತೆ ತಯಾರಿಸಲಾಗಿದೆ, ಧ್ವಜ ಸಂಹಿತೆಯ ಬಗ್ಗೆ ನಾಗರಿಕರಲ್ಲಿ ಜಾಗೃತಿ ನಿರ್ಮಾಣವಾಬೇಕೆಂಬುವ ಅಪೇಕ್ಷೆಯನ್ನು ವ್ಯಕ್ತ ಮಾಡಲಾಗಿದೆ.
ರಾಷ್ಟ್ರೀಯ ಧ್ವಜದ ಬಗ್ಗೆ ಸಂಹಿತೆ ತಯಾರಿಸಿದರ ಬಗ್ಗೆ ಬಹಳಷ್ಟು ಕಡಿಮೆ ನಾಗರಿಕರಿಗೆ ಮಾಹಿತಿಯಿರುತ್ತದೆ. ಸಂಹಿತೆಗನುಸಾರ ಮಹತ್ತ್ವದ ಕಾರ್ಯಕ್ರಮಗಳು, ಸಾಂಸ್ಕೃತಿಕ ಮತ್ತು ಮೈದಾನದ ಆಟಗಳ ಸಮಯದಲ್ಲಿ ಜಾಗತಿಕ ಕಾಗದದ ಧ್ವಜಗಳನ್ನು ಕೈಯಲ್ಲಿ ಹಿಡಿದು ಹಾರಿಸುವುದು ಕಂಡುಬರುತ್ತದೆ. ಅದರೆ ಕಾರ್ಯಕ್ರಮ ಮುಗಿದ ನಂತರ ಅದೇ ಧ್ವಜಗಳು ನೆಲದ ಮೇಲೆ ಎಲ್ಲೆಡೆ ಬಿದ್ದದ್ದು ಕಾಣುತ್ತವೆ. ಇದನ್ನು ತಪ್ಪಿಸಬೇಕು. ಪ್ಲಾಸ್ಟಿಕನಿಂದ ತಯಾರಿಸಿದ ಧ್ವಜಗಳನ್ನು ಬಳಸಬಾರದು.
ಧ್ವಜ ಸಂಹಿತೆಗನುಸಾರ ಯಾವಾಗ ರಾಷ್ಟ್ರೀಯ ಧ್ವಜವನ್ನು ಹಾರಿಸಲಾಗುತ್ತದೆಯೋ ಆಗ ಅದಕ್ಕೆ ಸನ್ಮಾನ ಪೂರ್ವಕವಾಗಿ ಉಚ್ಚ ಸ್ಥಾನವನ್ನು ನೀಡಬೇಕು. ಅದು ಎಲ್ಲರಿಗೂ ಕಾಣಿಸುವ ರೀತಿ, ಸ್ಥಳವನ್ನು ಆರಿಸಿ ಆ ಧ್ವಜವನ್ನು ಏರಿಸಬೇಕು. ಸರಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ರೂಢಿಯಿದೆ. ರವಿವಾರ ಮತ್ತು ಇತರ ರಜೆಗಳ ದಿನದಂದು ಕೂಡಾ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಧ್ವಜ ಹಾರಿಸಲೇಬೇಕು. ಪ್ರತಿಕೂಲ ಹವಾಮಾನದಲ್ಲಿಯೂ ಧ್ವಜ ಹಾರಿಸುವುದು ಆವಶ್ಯಕವಾಗಿದೆ.
ಸಂಹಿತೆಗನುಸಾರ ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಫೂರ್ತಿಯಿಂದ ಏರಿಸಬೇಕು ಮತ್ತು ಗೌರವದಿಂದ ಧ್ವಜವನ್ನು ನಿಧಾನವಾಗಿ ಕೆಳಗಿಳಿಸಿಬೇಕು. ಧ್ವಜವನ್ನು ಏರಿಸುವಾಗ ಮತ್ತು ಕೆಳಗಿಳಿಸುವಾಗ ತುತ್ತೂರಿಯನ್ನು ಊದಲೇ ಬೇಕು. ಧ್ವಜ ಯಾವುದೇ ಕಟ್ಟಡದ ಕಿಟಿಕಿ, ಬಾಲ್ಕನಿ ಅಥವಾ ತೋರುವಂತಹ ಭಾಗಗಳಲ್ಲಿ ಅಡ್ಡವಾಗಿ ಹಾರಿಸುವಾಗ ಧ್ವಜದಲ್ಲಿರುವ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು.
ಸೌಜನ್ಯ : ಹಿಂದೂಜಾಗೃತಿ.ಆರ್ಗ
ರಾಷ್ಟ್ರಧ್ವಜವನ್ನು ಸಭೆಯಲ್ಲಿ ಹಾರಿಸುವಾಗ ಮಾನ್ಯರ ಮುಖವು ಉಪಸ್ಥಿತರ ದಿಕ್ಕಿನಲ್ಲಿ ಹಾಗೂ ಧ್ವಜವು ಅವರ ಎಡಬದಿಯಲ್ಲಿ ಇರಬೇಕು ಅಥವಾ ಧ್ವಜವು ಗೋಡೆಯ ಮೇಲಿದ್ದರೆ ಮಾನ್ಯರ ಹಿಂದುಗಡೆ ಹಾಗೂ ಗೋಡೆಯ ಮೇಲೆ ಅಡ್ಡವಾಗಿ ಹಾರಿಸಬೇಕು. ಎಲ್ಲಿಯಾದರೂ ಮೂರ್ತಿಯ ಅನಾವರಣವಿದ್ದರೆ ಧ್ವಜವನ್ನು ಸನ್ಮಾನಪೂರ್ವಕವಾಗಿ ಬೇರೆ ಪದ್ಧತಿಯಿಂದ ಹಾರಿಸಬೇಕು. ವಾಹನದ ಮೇಲೆ ಧ್ವಜವನ್ನು ಹಾರಿಸುವಾಗ ವಾಹನದ ಬಾನೇಟಿನ ಮೇಲೆ ಧ್ವಜವನ್ನು ಹಾರಿಸಬೇಕು.
ಸಂಹಿತೆಯಲ್ಲಿ ನೀಡಿದಂತೆ, ರಾಷ್ಟ್ರಧ್ವಜವು ಯಾವುದೇ ಮೆರವಣಿಗೆಯ ಅಥವಾ ಪರೇಡಿನ ವ್ಯಕ್ತಿಯ ಬಲಗೈಯಲ್ಲಿ ಇರಬೇಕು. ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜವು ಮಧ್ಯದಲ್ಲಿರಬೇಕು. ಹರಿದ, ಮುದ್ದೆಯಾದ ಧ್ವಜದ ಆರೋಹಣವು ಅಪೇಕ್ಷಿತವಿಲ್ಲ. ಯಾವುದೇ ವ್ಯಕ್ತಿಗೆ ಅಥವಾ ವಸ್ತುವಿಗೆ ವಂದಿಸುವಾಗ ಧ್ವಜವನ್ನು ಭೂಮಿಯ ದಿಕ್ಕಿನಲ್ಲಿ ಬಗ್ಗಿಸಬಾರದು. ಇತರ ಧ್ವಜ ಹಾಗೂ ಪತಾಕೆಗಳನ್ನು ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿಸಬಾರದು.
ರಾಷ್ಟ್ರಧ್ವಜವನ್ನು ವಕ್ತಾರರ ವ್ಯಾಸಪೀಠವನ್ನು ಮುಚ್ಚಲು ಅಥವಾ ಅಲಂಕಾರಕ್ಕಾಗಿ ಉಪಯೋಗಿಸಬಾರದು. ಕೇಸರಿ ಪಟ್ಟಿಯು ಕೆಳಗೆ ಬರುವಂತೆ ಧ್ವಜಾರೋಹಣ ಮಾಡಬಾರದು. ಅಂತೆಯೇ ಧ್ವಜಕ್ಕೆ ಮಣ್ಣು ಹಾಗೂ ನೀರಿನ ಸ್ಪರ್ಷವಾಗಬಾರದು. ಧ್ವಜಾರೋಹಣ ಮಾಡುವಾಗ ಅದು ಹರಿಯದಂತೆ ಕಟ್ಟಬೇಕು.
ಧ್ವಜದ ದುರುಪಯೋಗವನ್ನು ತಡೆಯಲು ಸ್ಪಷ್ಟ ನಿಲುವನ್ನು ಹೊಂದಲಾಗಿದೆ. ಅದರಂತೆ ರಾಜಕೀಯ ವ್ಯಕ್ತಿ, ಕೇಂದ್ರೀಯ ಸೈನ್ಯ ದಳಕ್ಕೆ ಸಂಬಂಧಿತ ವ್ಯಕ್ತಿಯ ಅಂತಿಮ ಯಾತ್ರೆಯ ಹೊರತು ಬೇರೆ ಯಾವ ಸಂದರ್ಭದಲ್ಲಿಯೂ ರಾಷ್ಟ್ರಧ್ವಜವನ್ನು ಉಪಯೋಗಿಸಬಾರದು. ಧ್ವಜವನ್ನು ಯಾವುದೇ ವಾಹನ, ರೈಲು, ಹಡಗಿನ ಮೇಲೆ ಹಚ್ಚಲು ಸಾಧ್ಯವಿಲ್ಲ.
ಧ್ವಜವನ್ನು ಮನೆಯ ಪರದೆಗಾಗಿ ಉಪಯೋಗಿಸಬಾರದು. ಧ್ವಜದ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಅಂತೆಯೇ ರಾಷ್ಟ್ರಧ್ವಜವನ್ನು ಗಾದಿ, ಕರವಸ್ತ್ರದ ಮೇಲೆ ಬಿಡಿಸಬಾರದು. ಧ್ವಜದ ಮೇಲೆ ಯಾವುದೇ ಬರವಣಿಗೆಯನ್ನು ಮಾಡಲಾಗುವುದಿಲ್ಲ ಹಾಗೂ ಯಾವುದೇ ಜಾಹಿರಾತನ್ನು ನೀಡಲಾಗುವುದಿಲ್ಲ. ಧ್ವಜಾರೋಹಣವನ್ನು ಮಾಡುವ ಕಂಬದ ಮೇಲೆಯೂ ಯಾವುದೇ ಜಾಹಿರಾತನ್ನು ಹಾಕಬಾರದು.
ಕೇವಲ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನದಂದು ಧ್ವಜದಲ್ಲಿ ಹೂವು/ ಹೂವಿನ ಎಸಳನ್ನು ಕಟ್ಟಿ ದ್ವಜಾರೋಹಣವನ್ನು ಮಾಡಲಾಗುತ್ತದೆ. ರಾಷ್ಟ್ರಧ್ವಜವನ್ನು ಏರಿಸುವಾಗ ಅಥವಾ ಇಳಿಸುವಾಗ ಉಪಸ್ಥಿತರು ಕವಾಯತಿನ ‘ಸಾವಧಾನ’ ಸ್ಥಿತಿಯಲ್ಲಿರಬೇಕು. ಶಾಸಕೀಯ ಪೋಷಾಕಿನಲ್ಲಿರುವ ಸರಕಾರಿ ಅಧಿಕಾರಿಗಳು ಧ್ವಜಕ್ಕೆ ಮಾನವಂದನೆ ನೀಡುತ್ತಾರೆ. ಧ್ವಜವು ಸೈನ್ಯದಳದ ಸೈನಿಕನ ಕೈಯಲ್ಲಿದ್ದರೆ ಅವನು ಸಾವಧಾನ ಸ್ಥಿತಿಯಲ್ಲಿ ನಿಂತುಕೊಳ್ಳುವನು. ಸರಕಾರಿ ಅಧಿಕಾರಿಗಳ ಹತ್ತಿರದಿಂದ ಧ್ವಜವು ಹೋಗುತ್ತಿರುವಾಗ ಅವರು ಧ್ವಜಕ್ಕೆ ಮಾನವಂದನೆಯನ್ನು ನೀಡಬೇಕು. ಆದರಣೀಯ ವ್ಯಕ್ತಿಗಳು ತಲೆಯ ಮೇಲೆ ಟೋಪಿಯನ್ನು ಹಾಕದೆಯೆ ರಾಷ್ಟ್ರಧ್ವಜಕ್ಕೆ ಮಾನವಂದನೆಯನ್ನು ನೀಡಬಹುದು.