‘ತಿನ್ನಿ, ಕುಡಿಯಿರಿ ಮತ್ತು ಮೋಜು ಮಾಡಿ’ ಈ ತತ್ತ್ವಗಳಲ್ಲಿ ನಡೆಯುವ ಪೋರ್ತುಗೀಜಸಾಲಾಝಾರಶಾಹಿಯ ಸಾರ್ವಜನಿಕ ಸಭೆ ನಿರ್ಬಂಧಿಸಲು ಬಹಿರಂಗವಾಗಿ ಆವಾಹನೆಯನ್ನು ನೀಡುತ್ತಾ ಹಿರಿಯ ಸಮಾಜವಾದಿ ನೇತಾರರು ಡಾ. ರಾಮನೋಹರ ಲೋಹಿಯಾ ಇವರು ೧೮.೬.೧೯೪೬ರಂದು ಮಡಗಾವನಲ್ಲಿ ಒಂದು ದೊಡ್ಡ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಗೋವಾದಲ್ಲಿ ಜನಕ್ರಾಂತಿಯ ಜ್ಯೋತಿಯನ್ನು ಉರಿಸಿದರು. ಇದರಿಂದ ಪ್ರೇರಣೆ ಪಡೆದ ಅಸಂಖ್ಯ ಸ್ವಾತಂತ್ರ್ಯ ಸೈನಿಕರು ತಮ್ಮ ಸರ್ವಸ್ವವನ್ನು ತ್ಯಜಿಸಿ ಆ ಜ್ಯೋತಿಯನ್ನು ಬೆಳಗಿದರು ಮತ್ತು ಪರಿಣಾಮಸ್ವರೂಪ ೧೯.೧೨.೧೯೬೧ರಂದು ನಾಲ್ಕುನೂರುವರೆ ವರ್ಷಗಳ ದೀರ್ಘವಾದ ದಾಸ್ಯದ ಹಿಂಸೆಯಿಂದ ಗೋವಾ ಮುಕ್ತವಾಯಿತು. ಈ ಗೋವಾ ಮುಕ್ತಿ ಹೊರಾಟದಲ್ಲಿ ಸಹಭಾಗಿಯಾದ ಜ್ಞಾತ-ಅಜ್ಞಾತ ಸ್ವಾತಂತ್ರ್ಯ ಸೈನಿಕರ ಸ್ಮೃತಿಗಾಗಿ ‘೧೮ ಜೂನ’ ದಿನವನ್ನು ಗೋವಾದಲ್ಲಿ ಕ್ರಾಂತಿದಿನವೆಂದು ಆಚರಿಸಲಾಗುತ್ತದೆ.
‘ಗೋವಾ ಮುಕ್ತಿ’ಯಲ್ಲಿ ಚೈತನ್ಯ ತುಂಬಿದ ಡಾ. ರಾಮಮನೋಹರ ಲೋಹಿಯಾ !
ಬ್ರಿಟಿಶ್, ಡಚ್, ಫ್ರೆಂಚ್ ಇತ್ಯಾದಿ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ರಾಷ್ಟ್ರಗಳ ತುಲನೆಯಲ್ಲಿ ಪೋರ್ತುಗಾಲವು ೨೨.೫.೧೪೯೮ರಂದು ವಾಸ್ಕೊ-ದ-ಗಾಮಾ ಇವನ ರೂಪದಲ್ಲಿಭಾರತದಲ್ಲಿ ಎಲ್ಲರಿಗಿಂತ ಮೊದಲು ಕಾಲಿಟ್ಟತು. ಕ್ರಿ.ಶ. ೧೯೬೧ರಲ್ಲಿ ಮರಳಿಹೋದ ವಸಾಹತಶಾಹಿಗಳ ಪರಾಭವದ ನಿಜವಾದ ಶಿಲ್ಪಕಾರ – ಹಿರಿಯ ರಾಷ್ಟ್ರಭಕ್ತ ಡಾ. ರಾಮಮನೊಹರ ಲೋಹಿಯಾ! ಪೋರ್ತುಗಾಲದಲ್ಲಿಯೇ ‘ಫ್ಯಾಸಿಸ್ಟ’ ರಾಜ್ಯಾಡಳಿತ ನಡೆಸುವ ಡಾ. ಸಾಲಾಝಾರನ ರಾಜ್ಯದಲ್ಲಿ ವಾಕ್ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ, ವರ್ತಮಾನಪತ್ರಿಕೆಯ ಸ್ವಾತಂತ್ರ್ಯ ಇತ್ಯಾದಿಗಳ ಜೀವನಾವಶ್ಯಕ ಮಾನವೀಯ ಮೌಲ್ಯಗಳಿಗೆ ಎಳ್ಳಷ್ಟೂ ಬೆಲೆಯಿರಲಿಲ್ಲ. ಆ ಸಮಯದಲ್ಲಿ ಗೋವಾವನ್ನು ತನ್ನ ರಾಷ್ಟ್ರದ ಭಾಗ ಎಂದು ಪರಿಗಣಿಸುತ್ತಿದ್ದಆ ಫ್ಯಾಸಿಸ್ಟಗಳಿಂದ ಗೋವಾದಲ್ಲಿ ಬೇರೆ ಯಾವ ಸ್ಥಿತಿಯನ್ನು ನಿರೀಕ್ಷಿಸಬಹುದಿತ್ತು? ಅಮಾನುಷ ದಬ್ಬಾಳಿಕೆಯು ಅವರ ರಾಜ್ಯಭಾರದ ವಿಶೇಷ ಗುಣವಾಗಿತ್ತು ! ಇಂತಹ ಪರಿಸಿಸ್ಥಿತಿಯಲ್ಲಿ ಪೋರ್ತುಗಿಜ್ ದಾಸ್ಯದ ಸರಪಳಿಗಳನ್ನು ಕಡಿಯಲು ಅನೇಕರು ಅವಿರತವಾಗಿ ಪ್ರಯತ್ನಗಳನ್ನು ಮಾಡಿದರು. ಅದರಲ್ಲಿ ಎಷ್ಟೋ ಗೋಮಂತಕೀಯ ಸುಪುತ್ರರನ್ನು ಕೊಂದು ಹಾಕಿದರು, ಗಲ್ಲಿಗೇರಿಸಿದರು ಅಥವಾ ಆಫ್ರಿಕೆಗೆಗಡಿಪಾರು ಮಾಡಲಾಯಿತು.ಆದರೂ ಗೋವಾ ಮುಕ್ತಿಯ ಪ್ರಯತ್ನಗಳು ನಡೆದಿದ್ದವು; ಆದರೆ ಈ ಪ್ರಯತ್ನದಲ್ಲಿ ನಿಜವಾದ ಅರ್ಥದಿಂದ ಪ್ರಾಣಮತ್ತುಚೈತನ್ಯ ತಂದವರುಡಾ. ಲೋಹಿಯಾ !
ಡಾ. ಲೋಹಿಯಾ – ‘ಗೋವಾಮುಕ್ತಿ ಚಳುವಳಿದೇವದೂತ’ ಎಂದ ಗೋಮಂತಕೀಯರು
ಆಂತರಾಷ್ಟ್ರೀಯ ರಾಜಕಾರಣದ ಆಳವಾದ ಅಧ್ಯಯನವಿರುವ ಮತ್ತು ಭಾರತೀಯ ಸ್ವಾತಂತ್ರ್ಯ ಹೊರಾಟದಲ್ಲಿ ತನ್ನನ್ನುಅರ್ಪಿಸಿದ ಡಾ. ಲೋಹಿಯಾ ಇವರು ಗೋವಾದ ಮಡಗಾವನಲ್ಲಿ ಸಾರ್ವಜನಿಕ ಭಾಷಣ ಮಾಡತ್ತಾರೆಂಬ ವಾರ್ತೆಯು ರಾಜ್ಯದಾದ್ಯಂತ ಹರಡಿತು. ೧೮.೬.೧೯೪೬ ಈ ದಿನವು ಹೊಸ ವಿಚಾರಗಳ ಬಿರುಗಾಳಿಯನ್ನೇ ಗೋವಾದಲ್ಲಿ ತಂದು ಅವತರಿಸಿತು. ನೋಡುತ್ತಾ ಮಧ್ಯಾಹ್ನ ೩-೪ ಈ ಸಮಯದಲ್ಲಿ ಅಸಂಖ್ಯ ಗೋಮಂತಕೀಯ ಬಾಂಧವರು ದೂರ-ದೂರದಿಂದ ಪ್ರಯಾಣ ಮಾಡುತ್ತಾ ಮಡಗಾವತಲುಪಿದರು. ಡಾ. ಲೋಹಿಯಾರನ್ನುನೋಡಿದ ಸಂಪೂರ್ಣಮಡಗಾವ ನಗರವೇ ‘ಭಾರತ ಮಾತಾ ಕೀ ಜೈ’, ಮಹಾತ್ಮಾ ಗಾಂಧಿಕೀ ಜೈ’, ‘ರಾಮಮನೋಹರ ಲೋಯಿಯಾ ಕೀ ಜೈ !’ ಜೈಕಾರಗಳಿಂದ ತುಂಬಿಹೋಯಿತು.ಅವರ ಆಗಮನದಿಂದ ‘ಗೋವಾ ಮುಕ್ತಿ’ ಚಳುವಳಿಗೆ ಅಭೂತಪೂರ್ವ ಚಾಲನೆ ನೀಡುವ ದೇವದೂತ ಬಂದಂತೆ ಗೋಮಂತಕೀಯರಿಗೆ ಅನಿಸಿತು.
ಡಾ. ಲೋಹಿಯಾ ಬಂಧನ !ಕ್ರಾಂತಿಯ ಕಿಡಿ ಹೊತ್ತಿ ಉರಿಯುವುದು
‘ಸಾಲಾಝಾರ’ನ ‘ಫ್ಯಾಸಿಸ್ಟ’ ಅಧಿಕಾರವಿದ್ದರೂ ಎನಾಯಿತು? ಗೋಮಂತಕಭಾರತ ಭಾಗ! ಭಾರತದ ಸ್ವಾತಂತ್ರ್ಯದೊಂದಿಗೆ ಗೋವಾ ಮುಕ್ತವಾಗಲೇಬೇಕು’ ಎಂಬ ಬಲವಾದ ನಂಬಿಕೆ ಇದ್ದ ಡಾ. ಲೋಹಿಯಾ, ತನ್ನ ಭಾಷಣ ಪ್ರಾರಂಭ ಮಾಡಿದಾಗಲೇ ಅಲ್ಲಿ ಉಪಸ್ಥಿತವಿದ್ದ ಅಧಿಕಾರಿ ಕ್ಯಾಪ್ಟನ್ ಮಿರಾಂಡಾಅವರನ್ನುತಡೆಗಟ್ಟಿಸ್ಪಷ್ಟವಾಗಿ’ಗೋವಾದಲ್ಲಿ ಭಾಷಣ ಮಾಡಲು ನಿರ್ಬಂಧವಿದೆ’ ಎಂದು ಹೇಳಿದನು. ಆಗ ದೇಶಭಕ್ತಿಯಿಂದ ತುಂಬಿ ತುಳುಕುವ ಡಾ. ಲೋಹಿಯಾ ಇವರು ‘ಭಾಷಣ ಮಾಡುವುದು ನಮ್ಮ ಮೂಲಭೂತ ಅಧಿಕಾgವಿದ್ದು’ ತಾವು ಅಹಿಂಸೆಯ ಮಾರ್ಗದಿಂದ ಸಭೆ ನಡೆಸುವುದಾಗಿ ಹೇಳಿ ನಿರ್ಭಯವಾಗಿ ತಮ್ಮ ಭಾಷಣವನ್ನು ನಡೆಸಿದ್ದರು. ಅದನ್ನು ನೋಡಿ ಸಿಟ್ಟಿಗೆದ್ದ ಕ್ಯಾಪ್ಟನ್ ಮಿರಾಂಡಾಪಿಸ್ತೂಲು ತೆಗೆದನು ಮತ್ತು ಲೋಹಿಯಾಮೇಲೆ ಗರ್ಜಿಸಿ “ಭಾಷಣ ನಿಲ್ಲಿಸು. ಇಲ್ಲದಿದ್ದರೆ ಗುಂಡು ಹಾರಿಸುವೆ!”ಆದರೆ ದೇಶಭಕ್ತ, ರೋಮರೋಮದಲ್ಲಿ ದೇಶಪ್ರೇಮ ಸಂಚರಿಸುವ ಡಾ. ಲೋಹಿಯಾಗೆ ಕ್ಯಾಪ್ಟನ್ ಮಿರಾಂಡಾನ ಪಿಸ್ತೂಲಿನ ಭಯ ಏಕಿರಬೇಕು? ಅವರು ನಿರಾಯಾಸವಾಗಿ ನೊಣವನ್ನು ದೂರ ಮಾಡುವಂತೆ ಮಿರಾಂಡಾನ ಪಿಸ್ತೂಲು ಹಿಡಿದ ಕೈಯನ್ನು ತನ್ನ ಎಡಕೈಯಿಂದ ಬದಿಗೆ ಸರಿಸಿದರು! ಪುನಃ ಇಡೀ ಸಭೆಯು ‘ರಾಮಮನೋಹರ ಲೋಹಿಯಾ ಕೀ ಜೈ’ಎಂದುಗರ್ಜಿಸಿತು.ಕೊನೆಗೆ ಮಿರಾಂಡಾ ಡಾ. ಲೋಹಿಯಾರನ್ನುಬಂಧಿಸಿದನು; ಆದರೆ ಅವರು ಹೊತ್ತಿಸಿದ ಕ್ರಾಂತಿಯ ಕಿಡಿ ಮಾತ್ರ ನಂದಿಸಿಲು ಮಿರಾಂಡಾನ ಕ್ಷಮತೆಗೆ ಮೀರಿತ್ತು. ಕೊನೆಗೆ ಅದೇ ಕಿಡಿ ಹೊತ್ತಿ ಉರಿದು ಮಿರಾಂಡಾ ಮತ್ತುಪೋರ್ತುಗೀಜರನ್ನುಗೋಮಂತ ಭೂಮಿಯಿಂದ ಹೊರಗಟ್ಟಿಯೇ ಶಮನವಾಯಿತು.
ಗೋವಾ ಮುಕ್ತಿಅಂದೋಲನದಕ್ರಾಂತಿಕಾರಿ ಚಳುವಳಿಯಲ್ಲಿ ರೂಪಾಂತರ
ಡಾ. ಲೋಹಿಯಾ ಬಂಧನದ ನಂತರ ಉಪಸ್ಥಿತ ಜನಸಮುದಾಯದಲ್ಲಿ ಅವರ ಭಾಷಣದ ಪ್ರತಿಗಳನ್ನು ಹಂಚಲಾಯಿತು. ಇದರಿಂದ ಪ್ರೇರಿತರಾದ ಜನರು ತಮ್ಮತಮ್ಮ ಭಾಗಗಳಲ್ಲಿ ಇನ್ನಷ್ಟು ಜನರನ್ನು ಮುಕ್ತಿ ಚಳುವಳಿಯಲ್ಲಿ ಭಾಗವಹಿಸಲು ಪ್ರೆರೇಪಿಸಿ ಒಂದು ರೀತಿಯಲ್ಲಿ ಪೋರ್ತುಗೀಜ ಅಧಿಕಾರಕ್ಕೆ ಲಗ್ಗಮು ಹಾಕಿದರು. ಮುಂದೆ ಈ ಚಳುವಳಿಯು ಬೃಹತ್ ರೂಪ ಧರಿಸಿತು ಮತ್ತು ಗೋವಾ ಮುಕ್ತಿಗಾಗಿ ಎಲ್ಲ ಸ್ತರಗಳಲ್ಲಿ ಪ್ರಯತ್ನಗಳು ಆರಂಭವಾದವು. ಇದರಲ್ಲಿ ಗೋಮಂತಕೀಯರಂತೆ ಭಾರತದ ಇತರ ರಾಜ್ಯಗಳ ದೇಶಭಕ್ತರೂ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ೧೫.೮.೧೯೫೫ರಂದು ಪಾತ್ರಾದೇವಿ ಚೆಕ್ ನಾಕಾದಲ್ಲಿ ನಡೆದ ಸತ್ಯಾಗ್ರಹ ಅವೀಸ್ಮರಣೀಯವಾಯಿತು. ‘ಚಲೊ-ಚಲೊ ಗೋವಾ ಚಲೊ’, ‘ಲಾಠಿ-ಗೋಲಿ ಖಾಯೆಂಗೆ, ಫಿರ ಭಿ ಗೋವಾ ಜಾಯೆಂಗೆ’ ಎಂಬ ಜೈಕಾರ ಮಾಡುತ್ತಾ ಭಾರತದ ವಿವಿಧ ಭಾಗಗಳಿಂದ ಪ್ರಚಂಡ ಸಂಖ್ಯೆಯಲ್ಲಿ ಬಂದಿದ ನಿಶ್ಶಸ್ತ್ರ ಸತ್ಯಾಗ್ರಹಿಗಳ ಮೇಲೆ ಕ್ರೂರ ಪೋರ್ತುಗೀಜರು ಗುಂಡು ಹಾರಿಸಿದರು. ಅವರ ಈ ಅಮಾನುಷ ಕೃತ್ಯಕ್ಕೆ ಅನೇಕ ಸತ್ಯಾಗ್ರಹಿಗಳು ಬಲಿಯಾದರು, ಹುತಾತ್ಮಾರಾದರು; ಆದರೆ ಅ ಘಟನೆಯ ನಂತರ ಮಾತ್ರ ‘ಗೋವಾ ವಿಮೋಚನ ಸಮಿತಿ’ಯು ಸತ್ಯಾಗ್ರಹ ಪದ್ಧತಿಯನ್ನು ಹಿಂಪಡೆಯಿತು ಮತ್ತು ಅನೇಕ ತರುಣರು ‘ಮುಯ್ಯಿಗೆ ಮುಯ್ಯಿ’ ‘ಏಟಿಗೆ ಏಟು’ ಎಂದು ನಿರ್ಧರಿಸಿ ಕೈಯಲ್ಲಿ ರೈಫಲ್, ಕೈಬಾಂಬ್, ಮಶೀನ ಗನ್ ಹಿಡಿದುಕೊಂಡು ಪೋಲಿಸ ಠಾಣೆಗಳನ್ನು ದೋಚಿದರು.
ಡಾ. ಲೋಹಿಯಾರವರ ಕ್ರಾಂತಿಯ ಫಲಿತಾಂಶ
ದೀರ್ಘಕಾಲದ ಪೋರ್ತುಗೀಜ ದಾಸ್ಯದಿಂದ ಗೋವಾ ಮುಕ್ತ
ಕೊನೆಗೆ ಭಾರತ ಸರಕಾರವು ಸೈನ್ಯವನ್ನು ಕಳುಹಿಸಿ ಗೋವಾವನ್ನು ಮುಕ್ತಗೊಳಿಸಲು ನಿರ್ಧರಿಸಿತು. ಅದಕ್ಕನುಸಾರ ‘ಆಪರೇಶನ್ ವಿಜಯ’ ಅಂತರ್ಗತ ಭಾರತೀಯ ಸೈನ್ಯವು ಗೋವಾದ ಗಡಿಯ ಬೆಳಗಾವಿಗೆ ಬಂತು. ಅಲ್ಲಿರುವ ಸಾಂಬರಾ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನಗಳು ಸಜ್ಜುಗೊಂಡಿದ್ದವು. ಮತ್ತೊಂದು ಬದಿಯಿಂದ ಕಾರವಾರದ ಮಾಜಾಳಿ ಭಾಗದಲ್ಲಿ ಸೈನ್ಯ ನಿಂತಿತು ಮತ್ತು ಪಶ್ಚಿಮ ಸಾಗರದಲ್ಲಿ ಭಾರತೀಯ ನೌಕಾಪಡೆಯು ನೆಲೆಯೂರಿತು. ೧೮.೧೨. ೧೯೬೧ರಂದು ಭಾರತೀಯ ಸೈನ್ಯವು ಗೋವಾ ಮೇಲೆ ಆಕ್ರಮಣ ಮಾಡಿತು ಮತ್ತು ಪೋರ್ತುಗೀಜರನ್ನು ಆವರಿಸಿ ಅವರಿಗೆ ಅಡುಗಿ ಕುಳಿತುಕೊಳ್ಳಲು ಕೂಡ ಜಾಗ ಇಡಲಿಲ್ಲ! ಗೋವಾದ ವಿಮಾನ ನಿಲ್ದಾಣವನ್ನು ಸ್ಫೋಟದಿಂದ ನಾಶಗೊಳಿಸಲಾಯಿತು. ಪೋರ್ತುಗಾಲದಿಂದ ಬಂದಿದ್ದ ಅಲ್ಬುಕರ್ಕ ಎಂಬ ಯುದ್ಧ ನೌಕೆಯನ್ನು ಮುಳುಗಿಸಿಲಾಯಿತು. ಸೈನ್ಯವು ಬಿರುಗಾಳಿಯಂತೆ ಬಂದು ಮರುದಿನವೇ ಗೋವಾವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಪೋರ್ತುಗಾಲನ ಗೋವಾದ ಸೈನ್ಯಾಧಿಕಾರಿ ಜನರಲ್ ಮಾನ್ಯುಅಲ್ ಆಂತಾನಿಯೂ ಸಿಲ್ವ್ ಭಾರತೀಯ ಸೈನ್ಯದ ಬ್ರಿಗೆಡಿಯರ್ ಕೆ. ಎಸ್. ಧಿಲ್ಲನ್ ಇವರ ಮುಂದೆ ಶರಣಾಗತಿ ಪತ್ರ ಬರೆದು ಅರ್ಪಿಸಿದನು ಮತ್ತು ಅದೇ ಕ್ಷಣದಲ್ಲಿ ನಾಲ್ಕುನೂರುವರೆ ವರ್ಷಗಳ ದೀರ್ಘಕಾಲದ ಪೋರ್ತುಗೀಜ ದಾಸ್ಯವು ಮುಗಿದು ಗೋವಾ ಮುಕ್ತವಾಯಿತು. ಈ ರೀತಿಯಲ್ಲಿ ಡಾ. ಲೋಹಿಯಾರವರ ಕ್ರಾಂತಿಯು ಫಲ ನೀಡಿತು.
ಅಧಾರ : ದೈನಿಕ ‘ಪುಢಾರಿ’ ೧೮.೬.೧೯೯೯